ಜಯ ಕರ್ನಾಟಕ ಸಂಘಕ್ಕೆ ನೂತನ ಪದಾಧಿಕಾರಿಗಳ ನೇಮಕ
ಕೆ.ಆರ್.ಪೇಟೆ : ಜಯ ಕರ್ನಾಟಕ ಸಂಘಟನೆಯ ತಾಲೂಕು ಅಧ್ಯಕ್ಷ ಹೊನ್ನೇನಹಳ್ಳಿ ಸೋಮಶೇಖರ್ ರವರ ನೇತೃತ್ವದಲ್ಲಿ ನಗರ ಘಟಕ ಗೌರವಾಧ್ಯಕ್ಷರಾಗಿ ಮೋಹನ್ ಕುಮಾರ್, ನಗರ ಸಂಘಟನಾ ಕಾರ್ಯದರ್ಶಿಯಾಗಿ ಸೋಮಶೇಖರ್ ಅವರನ್ನು ನೇಮಿಸಿ ಅಭಿನಂದಿಸಲಾಯಿತು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಂಘಟನೆಯ ನಿಯಮಾನುಸಾರ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನವನ್ನು ಬೋಧಿಸಿದ ನಂತರ ಸಂಘಟನೆಯ ಮಾರ್ಗಸೂಚಿ, ನೀತಿ ನಿಯಮಗಳನ್ನು ಹಾಗೂ ಧ್ಯೇಯೋದ್ದೇಶಗಳನ್ನು ತಿಳಿಸಿ ಮಾತನಾಡಿದರು.
ರಾಜ್ಯದ ನಾಡು, ನುಡಿ, ಜಲ ರಕ್ಷಣೆ ಮಾಡುವಲ್ಲಿ ಜಯ ಕರ್ನಾಟಕ ಸಂಘಟನೆ ತನ್ನದೇ ಆದ ಹೋರಾಟ ಮಾಡುತ್ತ ಬಂದಿದೆ ಎಂದರು.ಇನ್ನಷ್ಟು ಸದೃಢಗೊಳಿಸಲು ಹಲವು ರೂಪುರೇಷ ಸಿದ್ದಪಡಿಸಿಕೊಂಡಿದೆ ಅವುಗಳು ಮತ್ತಷ್ಟು ಗಟ್ಟಿಯಾಗಲು ನಾವೆಲ್ಲರೂ ಒಗ್ಗಟ್ಟಿನಿಂದ ಮುಖ್ಯ ವಾಹಿನಿಗೆ ಬರುವ ಮೂಲಕ ಸಂಘಟಿತರಾಗಬೇಕು ಎಂದು ಅಧ್ಯಕ್ಷ ಸೋಮಶೇಖರ್ ಪದಾಧಿಕಾರಿಗಳಿಗೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ತಾಲೂಕು ಕಾರ್ಯಾಧ್ಯಕ್ಷ ಕೆರೆಕೋಡಿ ಆನಂದ್,ಯೂತ್ ಅಧ್ಯಕ್ಷ ಕಾಮನಹಳ್ಳಿ ಮಹೇಶ್, ತಾ ಉಪಾಧ್ಯಕ್ಷ ಯೋಗೇಶ್. ಸಂಘಟನಾ ಕಾರ್ಯದರ್ಶಿ ರಾಘವೇಂದ್ರ,ಶಂಕರ್,ಹರೀಶ್ ಬುಕನಕೆರೆ ಹೋಬಳಿ ಅಧ್ಯಕ್ಷ ಶಶಿಕುಮಾರ್,ವಿದ್ಯಾರ್ಥಿ ಘಟಕದ ಅಧ್ಯಕ್ಷ ಶಿವು,ತಾ ಮಹಿಳಾ ಅಧ್ಯಕ್ಷೆ ಜಯಲಕ್ಷ್ಮಮ್ಮ.ಅಕ್ಕಿಹೆಬಾಳು ಹೋಬಳಿ ಅಧ್ಯಕ್ಷೆ ನಾಗರತ್ನ. ಕಿಕ್ಕೇರಿ ಹೋಬಳಿ ಅಧ್ಯಕ್ಷೆ ಕನ್ನಿಕಾ ಸೇರಿದಂತೆ ಪದಾಧಿಕಾರಿಗಳು ಇತರರಿದ್ದರು.