ಇತ್ತೀಚಿನ ಸುದ್ದಿರಾಜ್ಯ

ಜೀವನದಲ್ಲಿ ಯಶಸ್ಸು ಕಾಣುವ ಜತೆಗೆ ಮೌಲ್ಯಯುತ ಜೀವನ ನಡೆಸಬಹುದು ಎಂದು ಪ್ರೊ.ಕೃಷ್ಣೇಗೌಡ ಅವರು ವಿದ್ಯಾರ್ಥಿಗಳು ಕಿವಿಮಾತು ಹೇಳಿದರು.

ವಿದ್ಯಾರ್ಥಿಗಳು ತಮ್ಮಗಾಗಿ ಅಲ್ಲದೆ ಅನ್ಯರಿಗಾಗಿ ಯಾವುದೇ ಪ್ರತಿಫಲಾಕ್ಷೇಕ್ಷೆಯಿಲ್ಲದೆ ಸೇವೆ ಮಾಡುವ ಔದಾರ್ಯ ಗುಣ ಬೆಳಸಿಕೊಂಡರೆ ಜೀವನದಲ್ಲಿ ಯಶಸ್ಸು ಕಾಣುವ ಜತೆಗೆ ಮೌಲ್ಯಯುತ ಜೀವನ ನಡೆಸಬಹುದು ಎಂದು ಚಿಂತಕ ಪ್ರೊ.ಕೃಷ್ಣೇಗೌಡ ಅವರು ವಿದ್ಯಾರ್ಥಿಗಳು ಕಿವಿಮಾತು ಹೇಳಿದರು.
ತಾಲೂಕಿನ ಮಹರ್ನವಮಿದೊಡ್ಡಿಯಲ್ಲಿ ಸೋಮವಾರ ರಾಷ್ಟ್ರೀಯ ಸೇವಾ ಯೋಜನೆ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು, ಕರ್ನಾಟಕ ಗಾಂಧೀ ಸ್ಮಾರಕ ನಿಧಿ ಬೆಂಗಳೂರು, ಕಸ್ತೂರಬಾ ಗಾಂಧಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅರಸೀಕೆರೆ, ಎಚ್.ಸಿ.ದಾಸಪ್ಪ ಸಾರ್ವಜನಿಕ ವಿಚಾರ ಸಂಸ್ಥೆ ಮೈಸೂರು. ಬೆಸಗರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಹರ್ನವಮಿ ದೊಡ್ಡಿ ಗ್ರಾಮಸ್ಥರು, ಮಹಿಳಾ ಸರ್ಕಾರಿ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ ಮದ್ದೂರು ಹಾಗೂ ಜಿಲ್ಲೆಯ ಆಯ್ದ ಕಾಲೇಜುಗಳ ರಾಷ್ಟ್ರೀಯ ಸೇವಾ ಯೋಜನೆ ಘಟಕಗಳ ವತಿಯಿಂದ ದೆಹಲಿ ಕೇಂದ್ರ ಗಾಂಧಿ ಸ್ಮಾರಕ ನಿಧಿ 75 ವರ್ಷಾಚರಣೆ ಸವಿನೆನಪಿಗಾಗಿ ಶ್ರೀಮತಿ ಯಶೋದರಮ್ಮ ದಾಸಪ್ಪ ಸಂಸ್ಕರಣೆ ಹಾಗೂ ವ್ಯಸನ ಮುಕ್ತ ಸಮಾಜಕ್ಕಾಗಿ ಯುವ ಜನತೆ ಎಂಬ ಧ್ಯೇಯದೊಂದಿಗೆ ಗಾಂಧಿ ತತ್ವ ಪ್ರೇರಿತ ಯುವಜನ ಪ್ರೇರಣ ಶಿಬಿರದ ಸಮಾರೋಪ ಸಭಾರಂಭದಲ್ಲಿ ಪ್ರಧಾನ ಭಾಷಣ ಮಾಡಿ ಮಾತನಾಡಿದರು.

ವಿದ್ಯಾರ್ಥಿಗಳು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಮಹಾತ್ಮ ಗಾಂಧಿಜೀ ಅವರು ವ್ಯಕ್ತಿಯಲ್ಲ ಶಕ್ತಿಯಾಗಿದ್ದವರು. ಅವರ ಅನುಭವ ಭಾರತಕ್ಕೆ ದಾರಿದೀಪವಾಗಿದೆ. ಜಗತ್ತಿಗೆ ಸರಳತೆಯನ್ನು ಕಲಿಸಿಕೊಟ್ಟ ಮಹಾನ್ ಸಂತ, ಕಾಲ ಕೆಳಗೆ ಎಲ್ಲಾ ಅಧಿಕಾರ ಬಂದರು. ಅಧಿಕಾರದಿಂದ ಏನು ಮಾಡಲಾಗುವುದು ಎಂದು ತಿರಸ್ಕರಿಸಿ ಶಾಂತಿ, ಅಹಿಂಸೆ ಮತ್ತು ಪ್ರೀತಿಯಿಂದ ದೇಶದ ಜನರ ಮನಸ್ಸು ಗೆದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಸ್ತುತ ಶಿಕ್ಷಣ ಎಂದರೆ ಉದ್ಯೋಗ ಪಡೆದು ಹಣ ಗಳಿಸುವುದು ಎಂದು ತಿಳಿದು ಕೊಂಡಿದಾರೆ.
ನಾನು ತಿಳಿದಿದ್ದೆ ಸತ್ಯ ಎಂದು ವಾದ ಮಾಡುತಿದ್ದಾರೆ. ಹಣ ಮತ್ತು ಅಧಿಕಾರದಿಂದ ಜಗತ್ತನ್ನು ಹಿಡಿದಿಟ್ಟುಕೊಳ್ಳಬಹುದು ಎಂಬ ಭ್ರಮೆಯಲ್ಲಿ ಬದುಕುತ್ತಿದ್ದಾರೆ. ನಾವು ಪ್ರೀತಿಗೆ ಜಾಗ ಕೊಟ್ಟಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ವೃಕ್ಷಮಾತೆ ಸಾಲು ಮರದ ತಿಮ್ಮಕ್ಕ ಸಸಿಗಳನ್ನೆ ಮಕ್ಕಳೆಂದು ಬೆಳಸಿ ನೂರಾರು ಮಂದಿಗೆ ನೆರಳಾಗಿದ್ದಾರೆ. ಮನಸಿನಲ್ಲಿ ಕಲ್ಮಶವಿಲ್ಲದ ಸಾಲುಮರದ ತಿಮ್ಮಕ್ಕ ನಮಗೆಲ್ಲ ಆದರ್ಶವಾಗಿರಬೇಕು ಎಂದರು.
ವಿದ್ಯಾರ್ಥಿಗಳು ಮಹಾತ್ಮ ಗಾಂಧಿಜೀ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಗ್ರಾಮಾಂತರ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ಶ್ರಮಿಸಬೇಕು. ಸತ್ಯ, ಪ್ರಾಮಾಣಿಕತೆ, ನಿಷ್ಟೆ, ದೇಶಪ್ರೇಮ, ಗುರು, ಹಿರಿಯರಿಗೆ ಗೌರವ ಕೊಡುವ ಸಂಸ್ಕಾರವನ್ನು ಅಳವಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಬಾಕ್ಸ್ ಐಟಂ:
7 ದಿನಗಳು ನಡೆದ ಶಿಬಿರದಲ್ಲಿ ನೂರಾರು ವಿದ್ಯಾರ್ಥಿಗಳು ಭಾಗವಹಿಸಿ ಗ್ರಾಮವನ್ನು ಸ್ವಚ್ಚ ಮಾಡುವ ಜತೆಗೆ ಪ್ರಮುಖ ವಿಷಯಗಳ ಬಗ್ಗೆ ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ಭಾಗಿಯಾಗಿ ಹಲವಾರು ವಿಷಯಗಳನ್ನು ತಿಳಿದುಕೊಂಡರು. ಈ ಬಗ್ಗೆ ಸಮಾರೋಪ ಸಮಾರಂಭದಲ್ಲಿ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದು ಗಣ್ಯರ ಗಮನ ಸೆಳೆಯಿತು.
ಮಂಡ್ಯ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಪುಟ್ಟರಾಜು, ಬೆಂಗಳೂರು ಗಾಂಧಿ ಭವನದ ಗೌರವ ಕಾರ್ಯದರ್ಶಿ ಎಂ.ಸಿ.ನರೇಂದ್ರ, ಎಚ್.ಕೆ.ವೀರಣ್ಣಗೌಡ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಸಿ.ಅಪೂರ್ವಚಂದ್ರ, ಪ್ರಾಂಶುಪಾಲರಾದ ಡಾ.ಸೌಮ್ಯವೀರಪ್ಪ, ಕೆ.ಬಿ.ನಾರಾಯಣ, ರೈತ ನಾಯಕಿ ಸುನಂದಜಯರಾಮು, ಗ್ರಾ.ಪಂ ಅಧ್ಯಕ್ಷೆ ರಾಧಿಕಾಪ್ರಸಾದ್, ಸದಸ್ಯರಾದ ಬಾಬು ಎಂ.ಆರ್. ಕಾಳೇಗೌಡ, ಅನಿತಾ ವೆಂಕಟೇಶ್, ಕರ್ನಾಟಕ ಗಾಂಧಿ ರಾಷ್ಟ್ರೀಯ ಸ್ಮಾರಕ ಟ್ರಸ್ಟಿ ಜಿ.ಬಿ.ಶಿವರಾಜು, ಕಸ್ತೂರಿ ಬಾ ಆಶ್ರಮದ ಕೆ.ಎಸ್.ಶೋಭಾ, ಮುಖಂಡರಾದ ಎಂ.ಪೂರ್ಣಿಮಾ, ಕೃಷ್ಣಪ್ಪ, ಕೆ.ಎಸ್.ರಾಮಯ್ಯ, ಮಹರ್ನವಮಿದೊಡ್ಡಿ ಗೆಳೆಯರ ಬಳಗದ ಸದಸ್ಯರು ಇದ್ದರು.
ಎನ್ಎಸ್ಎಸ್ ಶಿಬಿರದ ಸಮಾರೋಪ ಸಮಾರಂಭದಲ್ಲಿ ಪ್ರೊ.ಕೃಷ್ಣೇಗೌಡ ಮಾತನಾಡಿದರು. ಡಾ,ಪುಟ್ಟರಾಜು, ಎಂ.ಸಿ.ನರೇಂದ್ರ, ಸಿ.ಅಪೂರ್ವಚಂದ್ರ, ಸುನಂದಜಯರಾಮು, ಡಾ.ಸೌಮ್ಯವೀರಪ್ಪ, ಕೆ.ಬಿ.ನಾರಾಯಣ ಇದ್ದರು.

Related Articles

Leave a Reply

Your email address will not be published. Required fields are marked *

Back to top button