ರಾಜ್ಯ
Trending

ಆಸ್ತಿ ರಕ್ಷಣೆಗಾಗಿ ಚಾಮರಾಜನಗರ ಡಿಸಿಗೆ ಪತ್ರ ಬರೆದ ಪ್ರಮೋದಾದೇವಿ ಒಡೆಯರ್

ಚಾಮರಾಜನಗರ:ಮೈಸೂರು ಮಹಾರಾಜರಿಗೆ ಸೇರಿರುವ (ಖಾಸಗಿ ಸ್ವತ್ತು) ಆಸ್ತಿಗಳನ್ನು ಖಾತೆ ಮಾಡಿಕೊಡುವ ಬಗ್ಗೆ ಹಾಗೂ ಖಾತೆಯಾಗುವ ತನಕ ಸದರಿ ಜಮೀನುಗಳಲ್ಲಿ ಯಾವುದೇ ರೀತಿಯ ಖಾತೆ, ಕಂದಾಯ ಗ್ರಾಮ ಇನ್ನಿತರೆ ಯಾವುದೇ ವಹಿವಾಟುಗಳನ್ನು ನಡೆಸದಂತೆ ಜಿಲ್ಲಾಡಳಿತಕ್ಕೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ತಕರಾರು ಅರ್ಜಿ ಸಲ್ಲಿಸಿದ್ದಾರೆ.ಜಿಲ್ಲಾಧಿಕಾರಿ, ಕೊಳ್ಳೇಗಾಲ ಉಪವಿಭಾಗಾಧಿಕಾರಿ ಮತ್ತು ಚಾಮರಾಜನಗರ ತಹಶೀಲ್ದಾರ್​ಗೆ ರಾಜವಂಶಸ್ಥೆ ಪ್ರಮೋದಾದೇವಿ ತಕರಾರು ಅರ್ಜಿ ಸಲ್ಲಿಸಿದ್ದಾರೆ.

ಮೈಸೂರು ಮಹಾರಾಜರು ಮತ್ತು ಭಾರತ ಸರ್ಕಾರದ ನಡುವೆ 1950ರ ಜ.6ರಲ್ಲಿ ನಡೆದ ಒಪ್ಪಂದದ ಪ್ರಕಾರ, ಚಾಮರಾಜನಗರ ಜಿಲ್ಲೆಯಲ್ಲಿನ ಸ್ವತ್ತುಗಳು ಮೈಸೂರು ಮಹಾರಾಜರ ಖಾಸಗಿ ಸ್ವತ್ತು ಎಂದು ಒಪ್ಪಂದವಾಗಿರುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಇದರಂತೆ ಅಟ್ಟಗೂಳಿಪುರ (ವಿಸ್ತೀರ್ಣ & 4445&33), ಹರದನಹಳ್ಳಿ (ಸರ್ವೆ ನಂ & 125, ವಿಸ್ತೀರ್ಣ &40&18), ಹರದನಹಳ್ಳಿ (ಸರ್ವೆ ನಂ&124, ವಿಸ್ತೀರ್ಣ&3&16), ಹರದನಹಳ್ಳಿ (ಸರ್ವೆ ನಂ&134, ವಿಸ್ತೀರ್ಣ&2&19), ಹರದನಹಳ್ಳಿ(ಸರ್ವೆ ನಂ&135, ವಿಸ್ತೀರ್ಣ&1&35), ಹರದನಹಳ್ಳಿ(ಸರ್ವೆ ನಂ&133, ವಿಸ್ತೀರ್ಣ&67&20), ಹರದನಹಳ್ಳಿ(ಸರ್ವೆ ನಂ&463, ವಿಸ್ತೀರ್ಣ&11&08), ಹರದನಹಳ್ಳಿ(ಸರ್ವೆ ನಂ&169, ವಿಸ್ತೀರ್ಣ&2&04), ಹರದನಹಳ್ಳಿ(ಸರ್ವೆ ನಂ&184, ವಿಸ್ತೀರ್ಣ&1&03), ಬೂದಿತಿಟ್ಟು(ಸರ್ವೆ ನಂ&117, ವಿಸ್ತೀರ್ಣ&63&39), ಕರಡಿಹಳ್ಳ(ಸರ್ವೆ ನಂ&1, ವಿಸ್ತೀರ್ಣ&13&36), ಕರಡಿ ಹಳ್ಳ(ಸರ್ವೆ ನಂ&2, ವಿಸ್ತೀರ್ಣ&24&16), ಕರಡಿಹಳ್ಳ(ಸರ್ವೆ ನಂ&3, ವಿಸ್ತೀರ್ಣ&38&11), ಕನ್ನಿಕೆರೆ (ಸರ್ವೆ ನಂ&1, ವಿಸ್ತೀರ್ಣ&32&35), ಕನ್ನಿಕೆರೆ(ಸರ್ವೆ ನಂ&2, ವಿಸ್ತೀರ್ಣ&67&10), ಕನ್ನಿಕೆರೆ(ಸರ್ವೆ ನಂ&3, ವಿಸ್ತೀರ್ಣ&89&39), ಉಮ್ಮತ್ತೂರು(ಸರ್ವೆ ನಂ&563, ವಿಸ್ತೀರ್ಣ&199&27) ಇಷ್ಟೂ ಸ್ವತ್ತಿನ ಷರಾ ಮಹಾರಾಣಿಯವರ ಆಸ್ತಿಯಾಗಿದೆ. ಕಸಬಾ ಚಾಮರಾಜನಗರ(ಷರಾ&ಜನನ ಮಂಟಪ ಮತ್ತು ಗಾರ್ಡನ್), ಬಸವಪುರ(ಸರ್ವೆ ನಂ&143, ವಿಸ್ತೀರ್ಣ&13&00) ಈ ಸ್ವತ್ತುಗಳು 1950 ಜ.26ರ ಒಪ್ಪಂದ ಪ್ರಕಾರ ಮಹಾರಾಜರ ಖಾಸಗಿ ಸ್ವತ್ತಾಗಿರುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಈ ಸ್ವತ್ತುಗಳಲ್ಲಿ ಯಾವುದೇ ರೀತಿಯ ಖಾತೆ, ದುರಸ್ತಿ ಮತ್ತು ಯಾವುದೇ ರೀತಿಯ ವಹಿವಾಟುಗಳನ್ನು ನಡೆಸದಂತೆ ಈ ಮನವಿಯನ್ನೇ ತಕರಾರು ಮನವಿ ಎಂದು ಪರಿಗಣಿಸಿಕೊಂಡು ತಮ್ಮ ಹೆಸರಿಗೆ ಖಾತೆ ಮಾಡಿಕೊಡುವಂತೆ ಕೋರಿದ್ದಾರೆ.

ಇತ್ತೀಚಿನ ಮಾಹಿತಿಯಂತೆ ಈ ಗ್ರಾಮಗಳಲ್ಲಿ ಕಂದಾಯ ಗ್ರಾಮಗಳಾಗಿ ರಚನೆ ಮಾಡುತ್ತಿರುವುದು ಕಂಡು ಬಂದಿದ್ದು, ಸದರಿ ಸ್ವತ್ತುಗಳು ಮಹಾರಾಜರ ಖಾಸಗಿ ಸ್ವತ್ತಾಗಿರುವುದರಿಂದ ಯಾವುದೇ ರೀತಿಯ ಕಂದಾಯ ಗ್ರಾಮವನ್ನಾಗಿ ಪರಿವರ್ತಿಸದಂತೆಯೂ ಸಹ ಈ ತಕರಾರು ಅರ್ಜಿಯನ್ನು ಸಲ್ಲಿಸುತ್ತಿದ್ದು, ಈ ಮನವಿಯನ್ನು ಪರಿಗಣಿಸುವಂತೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಕೋರಿದ್ದಾರೆ.

ರಾಜವಂಶಸ್ಥೆ ಪ್ರಮೋದಾದೇವಿ ಅವರಿಂದ ಅರ್ಜಿ ಬಂದಿದೆ. ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು ಇದನ್ನು ಪರಿಶೀಲನೆ ಮಾಡಲು ತಹಶೀಲ್ದಾರ್ ಗಿರಿಜಾ ಅವರಿಗೆ ಸೂಚನೆ ನೀಡಿದ್ದಾರೆ ಎಂದು ಉಪವಿಭಾಗಾಧಿಕಾರಿ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button