ನನಗೆ ಟಿಕೇಟ್ ಕೊಟ್ರೆ ಭರತ್ ರೆಡ್ಡಿಸ್ಪರ್ಧಿಸಲ್ಲ-ಮಾಜಿ ಸಚಿವ ದಿವಾಕರ್ ಬಾಬುಸ್ವತಂತ್ರ ಪಕ್ಷ ಕಟ್ಟುತ್ತಿದ್ದೇವೆ ಎನ್ನುವುದುಶುದ್ಧಸುಳ್ಳು, ಯೂಟ್ಯೂಬ್ ಚಾನಲ್ ಮೇಲೆ ದೂರುದಾಖಲಿಸಿದ ಬಾಬು
ಬಳ್ಳಾರಿ. ನಾನು ರಾಜಕೀಯ ಜೀವನದಿಂದ ದೂರವಿದ್ದೆ, ರಾಹುಲ್
ಗಾಂಧಿ ಜೋಡೋ ಯಾತ್ರೆ ನಂತರ ಸಕ್ರೀಯ ರಾಜಕೀಯಕ್ಕೆ
ಇಳಿದ್ದೇನೆ. ಮತ್ತೆ ನಾನು ರಾಜಕೀಯಕ್ಕೆ ಬರ್ತಿದ್ದೇನೆ ಎಂಬ
ಉದ್ದೇಶದಿAದ ಕೆಲವರು ನಮ್ಮ ಬಗ್ಗೆ ಅಪಪ್ರಚಾರ
ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ದಿವಾಕರ್ ಬಾಬು ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಆವರಣದ ಪತ್ರಿಕಾಭವನದಲ್ಲಿ
ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ರೆಡ್ಡಿ ಬ್ರದರ್ಸ್,
ನಾವು ಸೇರಿ ಒಂದು ಸ್ವತಂತ್ರ ಪಕ್ಷ ಕಟ್ಟುತ್ತಿದ್ದೇವೆ
ಎನ್ನುವುದು ಶುದ್ದ ಸುಳ್ಳು. ನಾನು ಹಿಂದೇನೂ
ಕಾAಗ್ರೆಸ್’ನಲ್ಲಿದ್ದೆ ಮುಂದೇನೂ ಕಾಂಗ್ರೆಸ್ ನಲ್ಲಿ ಇರ್ತೀನಿ, ನಾನು
ರಾಜಕೀಯ ಮರು ಪ್ರವೇಶ ಮಾಡಿದ್ದಕ್ಕೆ ಕೆಲವರಿಗೆ ಆಗುತ್ತಿಲ್ಲ
ಎಂದರು. ರೆಡ್ಡಿ ಬ್ರದರ್ಸ್, ನಾವು ಪ್ರತ್ಯೇಕ ಪಕ್ಷ ಕಟ್ಟುತ್ತೇವೆ
ಎಂದು ಕರ್ನಾಟಕ ಟಿವಿ ಚಾನಲ್‌ನಲ್ಲಿ ಸುದ್ದಿ ಬಿತ್ತರಿಸಿದೆ. ಇದು ಸತ್ಯಕ್ಕೆ
ದೂರವಾದ ಮಾತು. ಈ ಯುಟ್ಯೂಬ್ ಚಾನಲ್ ಮೇಲೆ ದೂರು ದಾಖಲು
ಮಾಡುತಿದ್ದೇನೆ ಎಂದರು.
ನಾನು ಬಳ್ಳಾರಿ ನಗರ ಕ್ಷೇತ್ರದ ಪ್ರಬಲ ಟಿಕೇಟ್
ಅಕಾಂಕ್ಷಿಯಾಗಿದ್ದೇನೆ. ನನ್ನ ಬಗ್ಗೆ ಬೇರೆ ಪಕ್ಷದವರು,
ಸ್ವಪಕ್ಷದರು ಷಡ್ಯಂತ್ರ ಮಾಡಿ ಅಪಪ್ರಚಾರ ಮಾಡುತ್ತಿದ್ದಾರೆ.
ಇಂದು ಬಳ್ಳಾರಿ ಜಿಲ್ಲೆಯಲ್ಲಿ ರಾಜಕೀಯ ತುಂಬಾ ಕೆಟ್ಟು ಹೋಗಿದ್ದು
ಇದನ್ನು ನೋಡಿ ಮತ್ತೆ ರಾಜಕೀಯ ಅಖಾಡಕ್ಕೆ ಇಳಿದ್ದೇನೆ
ಎಂದರು. ಸೋಮಶೇಖರ್ ರೆಡ್ಡಿ, ಜನಾರ್ಧನ್ ರೆಡ್ಡಿ, ಕರುಣಾಕರ
ರೆಡ್ಡಿ ಸೇರಿ ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಇವರ ಬಗ್ಗೆ
ನಾನು ಮಾತನಾಡುವುದಿಲ್ಲ ಎಂದು ಹೇಳಿದ ಅವರು ಕರ್ನಾಟಕ ಟಿವಿ
ಚಾನಲ್ ಮೇಲೆ ಮಾನನಷ್ಟ ಮೊಕದ್ದಮೆ ಹೂಡಲಿದ್ದೇನೆ
ಎಂದರು.
ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಬಗ್ಗೆ ತೀವ್ರ ಅಪಪ್ರಚಾರ ಮಾಡಿ
ತೇಜೋವದೆ ಮಾಡುತ್ತೀದ್ದಾರೆ. ಯಾವುದೇ ಕಾರಣಕ್ಕಾಗಿ ನಾನು

ಕಾಂಗ್ರೆಸ್ ತೊರೆಯುವುದಿಲ್ಲ. ನನ್ನ ರಾಜಕೀಯ ಜೀವನದ
ಕೊನೆಯ ಚುನಾವಣೆ ಇದಾಗಿದೆ. ಪಕ್ಷ ನನ್ನ ನೋಡಿ ಟಿಕೇಟ್
ನೀಡಲಿದೆ ಎಂಬ ವಿಶ್ವಾಸವಿದೆ. ಒಂದುವೇಳೆ ಪಕ್ಷ ನನಗೆ ಟಿಕೇಟ್
ಕೊಡಲಿಲ್ಲ ಅಂದ್ರೆ ಪರವಾಗಿಲ್ಲ, ಬೇರೆಯವರಿಗೆ ಟಿಕೇಟ್ ಕೊಟ್ರೆ
ಸಂತೋಷದಿAದ ಕೆಲಸ ಮಾಡುತ್ತೇನೆ ಎಂದರು.
ನಾನು ರೆಡ್ಡಿ ಬ್ರದರ್ಸ್ ಜೊತೆಗೆ ಯಾವುದೇ ವ್ಯವಹಾರ ಮಾಡಿಲ್ಲ.
ಆತರ ಮಾಡಿದ್ರೆ ಮುಕ್ತವಾಗಿ ದಾಖಲೆ ಕೊಡಲಿ. ಸುಳ್ಳು
ಅಪಪ್ರಚಾರ ಮಾಡುವವರನ್ನು ತಲೆಕೆಡಿಸಿಕೊಳ್ಳುವುದಿಲ್ಲ.
ಆಗಿನ ರಾಜಕಾರಣ ಬೇರೆ, ಸದ್ಯದ ರಾಜಕೀಯ ಬೇರೆಯಿದೆ. ಆಗಿನ
ದಿನಗಳಲ್ಲಿ ಸಾಮಾಜಿಕ ಸೇವೆ ಹೆಚ್ಚಾಗಿ ಇತ್ತು. ಸದ್ಯ ಆ ಪರಿಸ್ಥಿತಿ ಈಗಿಲ್ಲ.
ದೇಶದಲ್ಲಿ ಕಾಂಗ್ರೆಸ್ ರಾಜಕೀಯ ಪರಿಸ್ಥಿತಿ ಬೇರೆಯಿದ್ದು, ರಾಹುಲ್
ಗಾಂಧಿ ಭಾರತ್ ಜೋಡೋ ಯಾತ್ರೆ ಮೂಲಕ
ಪ್ರೇರಣೆಗೊಂಡು ಮತ್ತೆ ರಾಜಕೀಯಕ್ಕೆ ಬಂದಿದ್ದೇನೆ ಎಂದರು.
ಕಾAಗ್ರೆಸ್ ಹೈಕಮಾಂಡ್ ಒಂದು ವೇಳೆ ನನಗೆ ಟಿಕೇಟ್ ಕೊಟ್ಟರೆ
ನನ್ನ ಅಳಿಯ ನಾರಾ ಭರತ್ ರೆಡ್ಡಿ ಎದುರಾಳಿಯಾಗಿ ನಿಲ್ಲುವುದಿಲ್ಲ
ಎಂದು ಸ್ಪಷ್ಟಪಡಿಸಿದರು.ಭರತ್ ರೆಡ್ಡಿಗೆ ಟಿಕೆಟ್ ಸಿಕ್ಕರೆ ನಾನು
ಸ್ಪರ್ಧೆ ಮಾಡುವುದಿಲ್ಲ, ಇದು ನನ್ನ ಅಪೇಕ್ಷೆ, ಭರತ್‌ಗೆ ಟಿಕೆಟ್
ಸಿಕ್ಕರೆ ಪಕ್ಷಕ್ಕಾಗಿ ಚುನಾವಣೆಯಲ್ಲಿ ನಾನು ಕೆಲಸ ಮಾಡುವೆ
ಎಂದರು. ಅಪಪ್ರಚಾರ ಮಾಡಿದ ಯೂಟ್ಯೂಬ್ ಚಾನಲ್ ಮೇಲೆ
ಕ್ರಮವಹಿಸುವಂತೆ ಎಸ್ಪಿಯವರಿಗೆ ದಿವಾಕರ್‌ಬಾಬು ಅವರು ದೂರು
ದಾಖಲಿಸಿದ್ದಾರೆ.
ಇದು ನನ್ನ ಕೊನೆಯ ಚುನಾವಣೆ-ಮಾಜಿ ಸಚಿವ
ದಿವಾಕರ್‌ಬಾಬು
ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಬಗ್ಗೆ ತೀವ್ರ ಅಪಪ್ರಚಾರ ಮಾಡಿ
ತೇಜೋವಧೆ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ನಾನು
ಕಾಂಗ್ರೆಸ್ ತೊರೆಯುವುದಿಲ್ಲ. ಈ ಚುನಾವಣೆ ನನ್ನ ರಾಜಕೀಯ
ಜೀವನದ ಕೊನೆಯ ಚುನಾವಣೆ ಇದಾಗಿದೆ. ಈ ಸಲ ಟಿಕೆಟ್ ಕೊಟ್ಟರೆ
ಸ್ಪರ್ಧೆ ಮಾಡುವೆ, ಇಲ್ಲದಿದ್ದರೆ ಇನ್ನು ಮುಂದೆ ಯಾವುದೇ
ಸ್ಪರ್ಧೆಯಲ್ಲಿ ಭಾಗಿಯಾಗುವುದಿಲ್ಲ. ಪಕ್ಷ ನನ್ನ ನೋಡಿ ಟಿಕೆಟ್
ನೀಡಲಿದೆ ಎಂಬ ವಿಶ್ವಾಸ ನನ್ನಲ್ಲಿದೆ, ಒಂದು ವೇಳೆ ಪಕ್ಷ ನನಗೆ
ಟಿಕೆಟ್ ಕೊಡಲಿಲ್ಲ ಅಂದರೂ ಪರವಾಗಿಲ್ಲ, ಬೇರೆಯವರಿಗೆ ಟಿಕೆಟ್
ಕೊಟ್ಟರೆ ಸಂತೋಷದಿAದ ಕೆಲಸ ಮಾಡುತ್ತೇನೆ ಎಂದರು.
ನನ್ನ ಪುತ್ರ ಹನುಮ ಕಿಶೋರ್ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿಲ್ಲ ಎಂದು
ಸ್ಪಷ್ಟಪಡಿಸಿದರು.