ಸಿನಿಮಾ
Trending

ಮುಜುಗರ ಆಗುವ ಒಂದು ದೃಶ್ಯ ಕೂಡ ‘ವಿದ್ಯಾಪತಿ’ ಚಿತ್ರದಲ್ಲಿ ಇಲ್ಲ

ನಟಿ ಮಲೈಕಾ ವಸುಪಾಲ್ (Malaika Vasupal) ಅವರು ವೃತ್ತಿಜೀವನದ ಆರಂಭದಲ್ಲಿ ಕಾಮಿಡಿ ಸಿನಿಮಾಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಮೊದಲು ‘ಉಪಾಧ್ಯಕ್ಷ’ ಸಿನಿಮಾದಲ್ಲಿ ನಟಿಸಿದ ಅವರು ಈಗ ‘ವಿದ್ಯಾಪತಿ’ (Vidyapati) ಚಿತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಅವರು ನಾಗಭೂಷಣ್ (Nagabhushana) ಜೊತೆ ತೆರೆ ಹಂಚಿಕೊಂಡಿದ್ದಾರೆ. ಬ್ಯಾಕ್ ಟು ಬ್ಯಾಕ್ ಕಾಮಿಡಿ ಸಿನಿಮಾ ಆರಿಸಿಕೊಂಡಿರುವ ಅವರಿಗೆ ಈ ಪ್ರಕಾರದ ಚಿತ್ರಗಳ ಮೇಲೆ ನಂಬಿಕೆ ಇದೆ. ಉತ್ತಮವಾದ ಕಾಮಿಡಿ ಸಿನಿಮಾಗಳು ಎಂದಿಗೂ ಸೋತಿಲ್ಲ ಎಂದು ಅವರು ಹೇಳಿದ್ದಾರೆ. ಟಿವಿ9 ಸಂದರ್ಶನದಲ್ಲಿ ಮಲೈಕಾ ವಸುಪಾಲ್ ಅವರು ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.‘ಉಪಾಧ್ಯಕ್ಷ’ ಸಿನಿಮಾ ಹಿಟ್ ಆಯಿತು. ಈಗ ‘ವಿದ್ಯಾಪತಿ’ ಕೂಡ ಜನರಿಗೆ ಇಷ್ಟ ಆಗಲಿದೆ ಎಂಬ ನಂಬಿಕೆ ಮಲೈಕಾ ವಸುಪಾಲ್ ಅವರಿಗೆ ಇದೆ. ‘ಜನರು ಉಪಾಧ್ಯಕ್ಷ ಚಿತ್ರವನ್ನು ಹೇಗೆ ಸ್ವೀಕರಿಸುತ್ತಾರೆ ಎಂಬುದು ರಿಲೀಸ್ ಸಮಯದಲ್ಲಿ ನಮಗೂ ಗೊತ್ತಿರಲಿಲ್ಲ. ಜನರು ತುಂಬ ಚೆನ್ನಾಗಿ ಸ್ವೀಕರಿಸಿದರು. ನನಗೆ ಅನಿಸುವ ಪ್ರಕಾರ ಕಾಮಿಡಿ ಸಿನಿಮಾಗಳು ಯಾವತ್ತೂ ಸೋತಿಲ್ಲ’ ಎಂದು ಮಲೈಕಾ ವಸುಪಾಲ್ ಹೇಳಿದ್ದಾರೆ.‘ನಮ್ಮ ವಿದ್ಯಾಪತಿ ಸಿನಿಮಾ ತುಂಬ ಕ್ಲೀನ್ ಕಾಮಿಡಿ. ಮಕ್ಕಳಿಗೆ ಇಷ್ಟ ಆಗುತ್ತದೆ. ಯಾವುದೇ ಡಬಲ್ ಮೀನಿಂಗ್ ಜೋಕ್ ಇಲ್ಲ. ಮಕ್ಕಳಿಂದ ದೊಡ್ಡವರ ತನಕ ಎಲ್ಲರೂ ಆರಾಮಾಗಿ ಕುಳಿತುಕೊಂಡು ನೋಡಬಹುದು. ಮುಜುಗರ ಆಗುವಂತಹ ಒಂದು ಸೀನ್ ಕೂಡ ಈ ಸಿನಿಮಾದಲ್ಲಿ ಇಲ್ಲ. ಗಂಭೀರವಾದ ವಿಚಾರವನ್ನು ಕಾಮಿಡಿ ಮೂಲಕ ಹೇಳಿದ್ರೆ ಆ ಪ್ರಯತ್ನ ಎಂದಿಗೂ ಸೋಲುವುದಿಲ್ಲ’ ಎಂದಿದ್ದಾರೆ ಮಲೈಕಾ ವಸುಪಾಲ್.‘ವಿದ್ಯಾಪತಿ’ ಸಿನಿಮಾದಲ್ಲಿ ಮಲೈಕಾ ಅವರು ಸೂಪರ್​ ಸ್ಟಾರ್​ ನಟಿಯಾಗಿ ಕಾಣಿಸಿಕೊಂಡಿದ್ದಾರೆ. ಏಪ್ರಿಲ್ 10ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಡಾಲಿ ಧನಂಜಯ್ ಅವರು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಜೊತೆಗೆ ಒಂದು ಪಾತ್ರವನ್ನು ಕೂಡ ನಿಭಾಯಿಸಿದ್ದಾರೆ. ಟ್ರೇಲರ್​ನಲ್ಲಿ ಡಾಲಿ ಧನಂಜಯ ಅವರ ಪಾತ್ರ ಗಮನ ಸೆಳೆದಿದೆ.

ಈ ಸಿನಿಮಾದ ‘ಮದನಾರಿ’ ಹಾಡಿನಲ್ಲಿ ಮಲೈಕಾ ವಸುಪಾಲ್ ಅವರು ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ‘ನಾನು ಮಾಡಿರುವುದು ಸೂಪರ್ ಸ್ಟಾರ್ ಪಾತ್ರ. ಅಂಥ ಸೂಪರ್​ ಸ್ಟಾರ್ ನಟಿಯರು ಹಲವು ಬಗೆಯ ಪಾತ್ರ ಮಾಡಿರುತ್ತಾರೆ. ಅದನ್ನೆಲ್ಲ ಒಂದು ಹಾಡಿನಲ್ಲಿ ತೋರಿಸಿದ್ದಾರೆ. ಆ ಹಾಡು ಅಸಭ್ಯವಾಗಿ ಇಲ್ಲ. ಶೂಟಿಂಗ್ ಮಾಡುವಾಗ ಅಮ್ಮ ಕೂಡ ಪಕ್ಕದಲ್ಲಿ ಇದ್ದರು. ಆ ವಿಚಾರದಲ್ಲಿ ಅಮ್ಮ ಬೆಂಬಲ ನೀಡಿದರು. ಒಂದು ಮಿತಿಯಲ್ಲಿ ಮಾಡಿದರೆ ಏನೂ ಅಶ್ಲೀಲ ಎನಿಸುವುದಿಲ್ಲ. ತಂದೆ-ತಾಯಿ ಕೂಡ ಒಪ್ಪುತ್ತಾರೆ’ ಎಂದಿದ್ದಾರೆ ಮಲೈಕಾ.

Related Articles

Leave a Reply

Your email address will not be published. Required fields are marked *

Back to top button