
Producer MN Suresh: ಸುದೀಪ್ ನಟನೆಯ ‘ಮಾಣಿಕ್ಯ’, ಅಪ್ಪು ನಟಿಸಿದ್ದ ‘ಅಂಜನಿಪುತ್ರ’ ಸೇರಿದಂತೆ ಹಲವು ಬಿಗ್ ಬಜೆಟ್ ಕನ್ನಡ ನಿರ್ಮಾಪಕ ಎಂಎನ್ ಸುರೇಶ್ ಅವರನ್ನು ಉಪ್ಪಾರಪೇಟೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಟ ಜಗ್ಗೇಶ್ ದಾಖಲಿಸಿದ್ದ ದೂರಿಗೆ ಸಂಬಂದಿಸಿದಂತೆ ಎಂಎನ್ ಸುರೇಶ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗುತ್ತಿದೆ.
ಸುದೀಪ್ ನಟನೆಯ ‘ಮಾಣಿಕ್ಯ’ ಸೇರಿದಂತೆ ಅಂಜನಿಪುತ್ರ, ಕಿರಿಕ್ ಶಂಕರ, ಮುಕುಂದ ಮುರಾರಿ, ಶಂಕರಗುರು, ಸೇರಿದಂತೆ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದ ಎಂ ಎನ್ ಕುಮಾರ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಉಪ್ಪಾರಪೇಟೆ ಪೊಲೀಸರು ಎಂಎನ್ ಕುಮಾರ್ ಅವರನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ. 1.25 ಕೋಟಿ ರೂಪಾಯಿ ಹಣ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಎನ್ ಕುಮಾರ್ ಅವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದು, ಬಂಧಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಖ್ಯಾತ ನಟ ಜಗ್ಗೇಶ್ ಅವರು ನಿರ್ಮಾಪಕ ಎಂಎನ್ ಸುರೇಶ್ ವಿರುದ್ಧ ಚೆಕ್ ಬೌನ್ಸ್ ಪ್ರಕರಣ ದಾಖಲಿಸಿದ್ದರು ಎನ್ನಲಾಗುತ್ತಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನದಲ್ಲಿ ಉಪ್ಪಾರಪೇಟೆ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗುತ್ತಿದೆ. ಜಗ್ಗೇಶ್ ಅವರು ಎಂಎನ್ ಕುಮಾರ್ ಅವರ ಮೇಲೆ ಯಾವ ಕಾರಣಕ್ಕೆ ದೂರು ನೀಡಿದ್ದರು ಎಂಬುದು ಸ್ಪಷ್ಟವಾಗಿಲ್ಲ. ಸಾಲದ ಹಣವೋ ಅಥವಾ ಸಂಭಾವಣೆ ಬಾಕಿ ಮೊತ್ತವೇ ಎಂಬ ಬಗ್ಗೆ ಇನ್ನಷ್ಟು ವಿವರಗಳು ತಿಳಿಯಬೇಕಿದೆ.ಎಂಎನ್ ಕುಮಾರ್ ಅವರು ಈ ಹಿಂದೆ ನಟ ಸುದೀಪ್ ವಿರುದ್ಧ ವಂಚನೆ ಆರೋಪ ಮಾಡಿದ್ದರು. ಅಡ್ವಾನ್ಸ್ ಪಡೆದಿದ್ದ ಸುದೀಪ್ ಸಿನಿಮಾಕ್ಕೆ ಡೇಟ್ಸ್ ನೀಡಿಲ್ಲ, ಅಡ್ವಾನ್ಸ್ ಹಣವನ್ನೂ ಸಹ ವಾಪಸ್ ಮಾಡಿಲ್ಲ ಎಂದು ಆರೋಪ ಮಾಡಿದ್ದರು. ಫಿಲಂ ಚೇಂಬರ್ ಎದುರು ಸುದೀಪ್ ವಿರುದ್ಧ ಪ್ರತಿಭಟನೆ ಸಹ ಮಾಡಿದ್ದರು ಎಂಎನ್ ಸುರೇಶ್. ಆ ಬಳಿಕ ನಟ ಸುದೀಪ್ ಅವರು ಸುರೇಶ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದು, ವಿಚಾರಣೆ ಚಾಲ್ತಿಯಲ್ಲಿದೆ.