ಕೇರಳಕ್ಕೆ ತ್ಯಾಜ್ಯ ಲಾರಿಗಳು ಕಳುಹಿಸಿ ಗಡಿ ಚೆಕ್ ಪೋಸ್ಟ್ ಬಿಗಿ ತಪಾಸಣೆ
ಗುಂಡ್ಲುಪೇಟೆ:
ಕೇರಳದಿಂದ ತಂದ ತ್ಯಾಜ್ಯವನ್ನು ಸಾಗಾಣೆ ಮಾಡುತ್ತಿದ್ದ ಎರಡು ಲಾರಿಗಳನ್ನು ಹಿಡಿದು ಪೊಲೀಸರ ವಶಕ್ಕೆ ನೀಡಿದ್ದಾರೆ.
ಪಟ್ಟಣದ ವೀರನಪುರ ಕ್ರಾಸ್ ಸಮೀಪ ನಿಂತಿದ್ದ ಎರಡು ಲಾರಿಗಳಿಂದ ದುರ್ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ಪರಿಶೀಲಿಸಿದಾಗ ಕೇರಳದಿಂದ ತ್ಯಾಜ್ಯ ಸಾಗಾಣೆ ಮಾಡುತ್ತಿರುವುದು ಕಂಡು ಬಂದಿದೆ. ಈ ಬಗ್ಗೆ ಕೂಡಲೇ ಮಾಹಿತಿ ನೀಡಿ ಪೊಲೀಸರ ವಶಕ್ಕೆ ನೀಡಿದರು.
ಕಳೆದ ಕೆಲವು ದಿನಗಳಿಂದ ಕೇರಳದಿಂದ ತ್ಯಾಜ್ಯವನ್ನು ಹೊತ್ತ ಲಾರಿಗಳು ಪದೇ ಪದೇ ತಾಲೂಕಿನತ್ತ ಬರುತ್ತಿದ್ದು ಭಾನುವಾರವೂ ತಾಲೂಕಿನ ಮಾಡ್ರಹಳ್ಳಿ ಗ್ರಾಮಸ್ಥರು ಮೂರು ಲಾರಿಗಳನ್ನು ಪೊಲೀಸರಿಗೆ ಹಿಡಿದುಕೊಟ್ಟಿದ್ದರು ಇವುಗಳ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುವ ಮೊದಲೇ ಮತ್ತೆ ಕೇರಳದಿಂದ ತ್ಯಾಜ್ಯ
ತುಂಬಿಸಿಕೊಂಡು ಬಂದ ಮೂರು ಲಾರಿಗಳನ್ನು ಸಂಘಟನೆಗಳವರು ಹಿಡಿದುಕೊಟ್ಟಿರುವುದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. ಈ ಲಾರಿಗಳಿಂದ ದುರ್ವಾಸನೆ ಹೊರಬರುತ್ತಿದ್ದ ಹಿನ್ನೆಲೆಯಲ್ಲಿ ಪೊಲೀಸರು ಆರು ಲಾರಿಗಳನ್ನೂ ಕೇರಳ ರಸ್ತೆಯ ಮದ್ದೂರು ಚೆಕ್ ಪೋಸ್ಟ್ ಬಳಿ ನಿಲ್ಲಿಸಿದ್ದಾರೆ.
ಬಾಕ್ಸ್ ನ್ಯೂಸ್
ಇತ್ತ ಕೇರಳದ ಗಡಿಯ ಮೂಲೆಹೊಳೆ ಚೆಕ್ಪೋಸ್ಟ್ನಲ್ಲಿ ಅರಣ್ಯ ಇಲಾಖೆ ಕಟ್ಟುನಿಟ್ಟಿನ ತಪಾಸಣೆ ಕೈಗೊಂಡಿದೆ. ವಲಯದ ಆರ್ಎಫ್ಒ ನಿಸಾರ್ ಅಹಮದ್ ಹಾಗೂ ಡಿಆರ್ಎಫ್ಒ ದೇವರಾಜು ಹಾಗೂ ಶಿವಣ್ಣಗೌಡ ಸೋಮವಾರ ಕೇರಳದಿಂದ ತ್ಯಾಜ್ಯವನ್ನು ತುಂಬಿಸಿಕೊಂಡು ತಾಲೂಕಿನತ್ತ ಬರುತ್ತಿದ್ದ ಎರಡು ಲಾರಿಗಳನ್ನು ಪತ್ತೆಹಚ್ಚಿ ವಾಪಸ್ ಕಳಿಸಿದರು.