ಇತ್ತೀಚಿನ ಸುದ್ದಿರಾಜ್ಯ

ಆರ್.ಟಿ. ಓ ಕಚೇರಿಗೆ ಮಾಜಿ ಸಚಿವ ಎಚ್ಡಿ ರೇವಣ್ಣ ಭೇಟಿ : ಕಡತ ಬಾಕಿ ; ರೇವಣ್ಣ ತರಾಟೆ

ಹಾಸನ: ನಗರದ ಹೋರ ವಲಯದಲ್ಲಿರುವ ಆರ್.ಟಿ. ಒ ಕಚೇರಿಗೆ ಮಾಜಿ ಸಚಿವ ಎಚ್ಡಿ ರೇವಣ್ಣ ಭೇಟಿ ನೀಡಿ ಆರ್.ಟಿ.ಒ ರಾಜ್ ಕುಮಾರ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಅರ್ಜಿ ಸಲ್ಲಿಸಿದ ಎಲ್ಲಾ ಕಡತಗಳನ್ನು ಬಾಕಿ ಉಳಿಸಿಕೊಂಡು ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕಡತಗಳನ್ನು ಹೋರ ತೆಗೆಸಿ ಆರ್.ಟಿ. ಒ ವಿರುದ್ಧ ತೀರ್ವ ಅಸಮಾಧಾನ ವ್ಯಕ್ತಪಡಿಸಿದರು.

ಕಚೇರಿಯಲ್ಲೇ ಸಾರಿಗೆ ಸಚಿವರಿಗೆ ಕರೆ ಮಾಡಿ ಕಚೇರಿಯಲ್ಲಿ ನಡೆಯುತ್ತಿರುವ ಅವ್ಯವಹಾರಗಳ ಬಗ್ಗೆ ತಿಳಿಸಿ. ಅವುಗಳಿಗೆ ಕಡಿವಾಣ ಹಾಕಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಸಾರಿಗೆ ಸಚಿವರು ಹಾಗೂ ಕಾರ್ಯದರ್ಶಿಗಳು ಸ್ಥಳಕ್ಕೆ ಬರುವವರೆಗೂ ಧರಣಿ ನಡೆಸುವುದಾಗಿ ಎಚ್ಚರಿಸಿದರು.

ಪೆಂಡಿಂಗ್ ಇಟ್ಟಿರುವ ಎಲ್ಲಾ ಕಡತ ಗಳನ್ನು ಶೀಘ್ರವಾಗಿ ವಿಲೇವಾರಿ ಮಾಡಿ, ಸಾರ್ವಜನಿಕರಿಗೆ ಸ್ಪಂದಿಸಬೇಕು ರೈತರು, ಬಡವರು ಬಂದಾಗ ಅವರನ್ನು ಕಾಯಿಸದೆ ಬೇಗ ಕೆಲಸ ಮಾಡಿಕೊಟ್ಟು ಅವರಿಗೆ ನೆರವಾಗಬೇಕು ಇಲ್ಲವಾದರೆ ಸ್ಥಳೀಯ ಶಾಸಕರು ಹಾಗೂ ತನ್ನ ನೇತೃತ್ವದಲ್ಲಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಈ ವೇಳೆ ಶಾಸಕ ಸ್ವರೂಪ್ ಪ್ರಕಾಶ್, ನಗರಸಭೆ ಅಧ್ಯಕ್ಷ ಚಂದ್ರೇಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button