ಇತ್ತೀಚಿನ ಸುದ್ದಿರಾಜ್ಯ
ಚಾಮರಾಜನಗರದಲ್ಲಿ ಆದರ್ಶ್ ಕಿಯಾ ಕಾರು ಕಾರು ಶೋ ರೂಂ ಪ್ರಾರಂಭೋತ್ಸವ

ಚಾಮರಾಜನಗರ: ನಗರದ ಜೋಡಿ ರಸ್ತೆಯಲ್ಲಿರುವ ವರ್ತಕರ ಭವನದ ಸಮೀಪದಲ್ಲಿ ಆದಶ೯ ಕಿಯ ಕಾರು ಶೋ ರೂಂ ಪ್ರಾರಂಭಗೊಂಡಿತು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮುಖ್ಯ ವ್ಯವಸ್ಥಾಪಕರಾದ ಶಮೀರ್ ಮಾರಾಟ ಮಳಿಗೆಯ ಶೋರೂಮ್ ಉದ್ಘಾಟಿಸಿ ಮಾತನಾಡಿ, ಆದರ್ಶ ಕಿಯ ವಾಹನವು ಹೆಚ್ಚು ಬೆಳವಣಿಗೆ ಕೊಂದಿದ್ದು ಜನಪ್ರಿಯಗೊಳ್ಳುತ್ತಿದೆ ಇದನ್ನು ಖರೀದಿಸುವ ಗ್ರಾಹಕರಿಗೆ ಬ್ಯಾಂಕಿನಿಂದ ಉತ್ತಮ ಸಾಲ ಸೌಲಭ್ಯ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಆದರ್ಶ ಕಿಯ ಮ್ಯಾನೇಜರ್ ಪ್ರಶಾಂತ್ ಮಾತನಾಡಿ, ನಮ್ಮ ವಾಹನವು ಗ್ರಾಹಕರಿಗೆ ಅತ್ಯಾಕರ್ಷಕವಾಗಿದ್ದು 5 ಮತ್ತು 7 ಆಸನಗಳನ್ನು ಹೊಂದಿದ್ದು ದೂರದ ಪ್ರದೇಶಗಳಿಗೆ ಆರಾಮದಾಯಕವಾಗಿ ಪ್ರಯಾಣಿಸಬಹುದು ಆದ್ದರಿಂದ ಗ್ರಾಹಕರು ನಮ್ಮ ಶೋ ರೂಂ ಗೆ ಭೇಟಿ ನೀಡಿ ವಾಹನವನ್ನು ಖರೀದಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬ್ಯಾಂಕ್ ಆಫ್ ಬರೋಡ ಜನರಲ್ ಮ್ಯಾನೇಜರ್ ನಾಗಾರ್ಜುನ್, ಶೋರೂಮ್ ಮಾಲಿಕ ಸೋಮಶೇಖರ್, ನಗರಸಭಾ ಮಾಜಿ ಸದಸ್ಯ ಎಚ್.ಎಸ್.ಚಂದ್ರಶೇಖರ್ ಸೇರಿದಂತೆ ಇತರರು ಇದ್ದರು.