
ಕೆ.ಆರ್.ಪೇಟೆ: ಸೋಮವಾರ ಮದ್ಯಾಹ್ನದಿಂದ ಸುರಿದ ಭಾರಿ ಮಳೆಗೆ ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆ ಹೋಬಳಿಯ ಬಳ್ಳೇಕೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೇಲ್ಚಾವಣಿ ನೆಲಸಮಗೊಂಡು ಉಳಿದ ಕೊಠಡಿಗಳು ಕೂಡ ಶಿಥಿಲಗೊಂಡಿವೆ ಎಂದು ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಕಿರಣ್ ಆರೋಪಿದರು.
ಬಳಿಕ ಮಾತನಾಡಿದ ಅವರು ನಿನ್ನೆಯಷ್ಟೇ (ಸೋಮವಾರ) ದಸರಾ ಬಳಿಕ ಶಾಲೆ ಆರಂಭವಾಗಿತ್ತು. ಆದರೆ ಸೋಮವಾರ ಬೆಳಗ್ಗೆಯಿಂದ ಸುರಿದ ಭಾರಿ ಮಳೆ ಮೊದಲೇ ಶಿಥಿಲ ವ್ಯವಸ್ಥೆಯಲ್ಲಿದ್ದ ನಮ್ಮ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆ ಕೊಠಡಿಯ ಮೇಲ್ಪಾವಣಿ ಹಾಗೂ ಗೋಡೆ ನೆಲಕುರುಳಿದೆ ಅದೃಷ್ಟವಶ ಎಂದರೆ ವಿದ್ಯಾರ್ಥಿಗಳು ಶಾಲೆ ಮುಗಿಸಿ ಮನೆಗೆ ಹೋದ ಮೇಲೆ ಈ ಘಟನೆ ಸಂಭವಿಸಿ ಭಾರಿ ಅನಾಹುತಗಳಿಂದ ಮಕ್ಕಳು ಪಾರಾಗಿದ್ದಾರೆ . ಈ ಅವ್ಯವಸ್ಥೆಯ ಕುರಿತು ಹಲವು ಭಾರಿ ಶಿಥಿಲಗೊಂಡಿರುವ ಶಾಲಾ ಕೊಠಡಿಗಳ ಅಭಿವೃದ್ಧಿಗೊಳಿಸುವಂತೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು ಸೂಕ್ತ ಕ್ರಮ ಕೈಗೊಳ್ಳದೆ ಇರುವುದೇ ಈ ಘಟನೆಗೆ ಪ್ರಮುಖ ಕಾರಣ ಎಂದು ಆರೋಪಿಸಿದರು.
ಉಳಿದ ಕೆಲ ಕೊಠಡಿಗಳು ಶಿಥಿಲಗೊಂಡು ಸೂಕ್ತ ಕೊಠಡಿಗಳು ಇಲ್ಲದೆ ಹೊರ ಭಾಗದಲ್ಲೇ ಮಕ್ಕಳಿಗೆ ಮಳೆ ಗಾಳಿಯಲ್ಲೆ ಪಾಠ ಪ್ರವಚನ ಸ್ವೀಕರಿಸುತ್ತಿದ್ದಾರೆ. ಮೊದಲೇ ಗ್ರಾಮ ಪಂಚಾಯತಿ ಕೇಂದ್ರ ಸ್ಥಾನದ ಗ್ರಾಮವಾದರೂ ಖಾಸಗಿ ಶಾಲೆಗಳಿಗೆ ಹೆಚ್ಚು ಮಹತ್ವ ನೀಡುವ ಈ ದಿನಮಾನಗಳಲ್ಲಿ ನಮ್ಮ ಬಳ್ಳೆಕೆರೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 103 ವಿದ್ಯಾರ್ಥಿಗಳು ದಾಖಲಾಗಿದ್ದರು ಕೂಡ ಸೂಕ್ತ ಕೊಠಡಿಗಳ ವ್ಯವಸ್ಥೆ ಇಲ್ಲದೆ ಇರುವುದು ಪೋಷಕರ ಆಕೋಶಕ್ಕೆ ಕಾರಣವಾಗಿದೆ ಕೂಡಲೇ ಸೂಕ್ತ ಕೊಠಡಿ ಕಲ್ಪಿಸಿಕೊಡಬೇಕು ಎಂದು ಅಗ್ರಹಿಸಿದರು.
ಈ ಸಂದರ್ಭದಲ್ಲಿ ಮುಖಂಡ ಉದಯ್,ಚಂದ್ರಶೇಖರ, ಸಂಣ್ಣೆಗೌಡ, ಪ್ರತಾಪ್,
ಕುಮಾರ್, ಸೇರಿದಂತೆ ಉಪಸ್ಥಿತರಿದ್ದರು…