ಮಕ್ಕಳನ್ನು ನಾನು ನೋಡ್ಕೋತೀನಿ, ನೀನು ಇಷ್ಟಪಟ್ಟವನ ಜತೆ ಖುಷಿಯಾಗಿರು ಎಂದು ಪತ್ನಿಗೆ ಮದುವೆ ಮಾಡಿಸಿದ ಗಂಡ

ಉತ್ತರ ಪ್ರದೇಶ, ಮಾರ್ಚ್ 27: ಸಾಮಾನ್ಯವಾಗಿ ತನ್ನ ಸಂಗಾತಿಯನ್ನು ಬೇರೊಬ್ಬರ ಜತೆ ಹಂಚಿಕೊಳ್ಳಲು ಅಥವಾ ಬೇರೊಬ್ಬರಿಗೆ ಬಿಟ್ಟು ಕೊಡುವಂಥಾ ಮನೋಭಾವವಿರುವವರು ತುಂಬಾ ವಿರಳ. ಆದರೆ ನಾನು ಮಕ್ಕಳನ್ನು ನೋಡಿಕೊಳ್ಳುತ್ತೇನೆ ನೀನು ಇಷ್ಟಪಟ್ಟವನೊಂದಿಗೆ ಖುಷಿಯಾಗಿರು ಎಂದು ಪತಿಯೊಬ್ಬ ಪತ್ನಿಯನ್ನು ಆಕೆಯ ಪ್ರಿಯಕರನಿಗೆ ಕೊಟ್ಟು ಮದುವೆ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.ಉತ್ತರ ಪ್ರದೇಶದ ಸಂತ ಕಬೀರ್ ನಗರ ಜಿಲ್ಲೆಯ ವ್ಯಕ್ತಿಯೊಬ್ಬ ತನ್ನ ಪತ್ನಿಗೆ ಬೇರೊಬ್ಬನ ಜತೆ ಸಂಬಂಧವಿರುವುದನ್ನು ಅರಿತು ಆಕೆಯನ್ನು ಇಷ್ಟಪಟ್ಟವನೊಂದಿಗೆ ಮದುವೆ ಮಾಡಿಸುವ ನಿರ್ಧಾರ ಮಾಡಿದ್ದಾನೆ. ಬಬ್ಲೂ ಎಂಬ ವ್ಯಕ್ತಿ ತನ್ನ ಇಬ್ಬರು ಮಕ್ಕಳನ್ನು ತಾನು ನೋಡಿಕೊಳ್ಳುವುದಾಗಿ ಹೇಳಿದನು. ಹೆಂಡತಿ ಆ ಬೇಡಿಕೆಯನ್ನು ಒಪ್ಪಿಕೊಂಡಳು.ಬಬ್ಲೂ ಮತ್ತೆ ರಾಧಿಕಾ 2017ರಲ್ಲಿ ವಿವಾಹವಾಗಿದ್ದರು ಅವರಿಗೆ 7 ಮತ್ತು 9 ವರ್ಷದ ಇಬ್ಬರು ಮಕ್ಕಳಿದ್ದಾರೆ. ಜೀವನೋಪಾಯಕ್ಕಾಗಿ ಬಬ್ಲೂ ಆಗಾಗ ಮನೆಯಿಂದ ಬೇರೆ ಊರಿಗೆ ಹೋಗುತ್ತಿದ್ದ. ರಾಧಿಕಾ ಹಳ್ಳಿಯ ಯುವಕನೊಬ್ಬನನ್ನು ಇಷ್ಟಪಡಲು ಶುರು ಮಾಡಿದ್ದಳು.ಈ ವಿಚಾರ ಬಬ್ಲೂ ಕುಟುಂಬದಿಂದ ತಿಳಿದಿತ್ತು. ನಂತರ ಸಮಸ್ಯೆಯನ್ನು ಬಗೆಹರಿಸಲು ಬಬ್ಲು ನಿರ್ಧಾರ ಮಾಡಿ ತನ್ನ ಪತ್ನಿಯನ್ನು ಆತನಿಗೆ ಬಿಟ್ಟುಕೊಡಲು ಮುಂದಾಗಿದ್ದ. ನ್ಯಾಯಾಲಯಕ್ಕೆ ಹೋಗಿ ಪತ್ನಿ ಹಾಗೂ ಆ ವ್ಯಕ್ತಿಯ ಜತೆ ವಿವಾಹಕ್ಕೆ ಸಾಕ್ಷಿಯಾದ. ನಂತರ ಅವರನ್ನು ದೇವಸ್ಥಾನಕ್ಕೆ ಕರೆದೊಯ್ದು ಅಲ್ಲಿಅವರು ಹೂಮಾಲೆ ಧರಿಸಿ ವಿವಾಹ ಪ್ರತಿಜ್ಞೆ ಮಾಡಿದ್ದಾರೆ.