
ಕರ್ನಾಟಕ ಬಿಜೆಪಿಯಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನಡುವಿನ ಬಣ ಫೈಟ್ ಇದೀಗ ಸಮಾವೇಶ ಯುದ್ಧಕ್ಕೆ ಬಂದು ನಿಂತಿದೆ. ಸಮಾವೇಶ ಮಾಡುವ ಮೂಲಕ ತಮ್ಮ ತಮ್ಮ ಶಕ್ತಿ ಏನು ಎಂದು ತೋರಿಸುವುದಕ್ಕೆ ಯತ್ನಾಳ್, ವಿಜಯೇಂದ್ರ ಬಣ ಸಜ್ಜಾಗಿದೆ. ಯತ್ನಾಳ್ ನಡೆಗೆ ಬ್ರೇಕ್ ಹಾಗೂ ಹೈಕಮಾಂಡ್ಗೆ ತಮ್ಮ ಚಾರ್ಮ್ ತೋರಿಸಲು ವಿಜಯೇಂದ್ರ ಬಣ ವೀರಶೈವ ಲಿಂಗಾಯತರನ್ನ ಸೇರಿಸಿ ಸಮಾವೇಶ ಮಾಡಲು ಮುಂದಾಗಿದೆ. ಇದಕ್ಕೆ ಕೌಂಟರ್ ಎನ್ನುವಂತೆ ಯತ್ನಾಳ್ ಬಣ ಹಿಂದೂ ಸಮಾವೇಶ ಆಯೋಜನೆಗೆ ಸಜ್ಜಾಗಿದೆ.ಕರ್ನಾಟಕ ಬಿಜೆಪಿಯಲ್ಲಿ ಬಣ ಬಡಿದಾಟ ಮತ್ತೊಂದು ಮಗ್ಗಲಿಗೆ ಹೊರಳಿದೆ. ಬಸನಗೌಡ ಪಾಟೀಲ್ ಯತ್ನಾಳ್ ಹಾಗೈ ವಿಜಯೇಂದ್ರ ಬನ ಇಷ್ಟು ದಿನ ತಾವು ತಾವೇ ಶಕ್ತಿ ಪ್ರದರ್ಶನ ಮಾಡಿಕೊಳ್ಳುತ್ತಿದ್ದರು. ಆದ್ರೆ, ಇದೀಗ ಎರಡು ಬಣಗಳು ಜಾತಿ, ಸಮುದಾಯ, ಧರ್ಮ ಹೆಸರಿನಲ್ಲಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಿವೆ. ಹೌದು…. ಒಂದೆಡೆ ಮಾರ್ಚ್ 15ರೊಳಗೆ ರಾಜ್ಯಾದ್ಯಂತ ವೀರಶೈವ ಲಿಂಗಾಯತರನ್ನ ಸೇರಿಸಿ ಸಮಾವೇಶ ಮಾಡುತ್ತೇವೆ ಎಂದು ವಿಜಯೇಂದ್ರ ಟೀಂ ಸಜ್ಜಾಗಿದ್ರೆ, ಮತ್ತೊಂದೆಡೆ ಇದಕ್ಕೆ ಕೌಂಟರ್ ಎನ್ನುವಂತೆ ಯತ್ನಾಳ್ ಟೀಂ ಹಿಂದೂ ಸಮಾವೇಶ ಮಾಡುತ್ತೇವೆಂದು ಸಮರ ಸಾರಿದೆ. ಈ ಮೂಲಕ ಬಿವೈ ವಿಜಯೇಂದ್ರ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ನಡುವಿನ ಬಣ ಬಡಿದಾಟ ಮತ್ತಷ್ಟು ತಾರರಕ್ಕೇರುವುದು ಕಟ್ಟಿಟ್ಟ ಬುತ್ತಿ.
ಯತ್ನಾಳ್ ಬಣಕ್ಕೆ ಸಂದೇಶ ರವಾನೆ
ಅಸಲಿಗೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೆಸರಿನಲ್ಲಿ ಸಮಾವೇಶ ಮಾಡುತ್ತೇವೆ ಎಂದು ಮುಂದಾಗಿದ್ದ ರೇಣುಕಾಚಾರ್ಯಗೆ ವಿಜಯೇಂದ್ರ ಸೂಚನೆ ಕೊಟ್ಟಿದ್ದಾರೆ. ಯಾವ ಸಮಾವೇಶ, ಸಭೆ ಮಾಡುವುದು ಬೇಡ, ಪಕ್ಷಕ್ಕೆ ಡ್ಯಾಮೇಜ್ ಆಗುತ್ತೆ ಎಂದು ತಂದೆ ಮಗ ಸೂಚನೆ ನೀಡಿದ್ದಾರೆ. ಆದ್ರೆ ಇದೀಗ ಎಂಪಿ.ರೇಣುಕಾಚಾರ್ಯ, ವೀರಶೈವ ಲಿಂಗಾಯತ ಒಗ್ಗಟ್ಟಿಗೆ ಮೇ 15ರೊಳಗೆ ಸಮಾವೇಶ ಮಾಡಿಯೇ ತೀರುತ್ತೇವೆ. ಯಾರಿಗೂ ಹೆದರವುದಿಲ್ಲ, ಬಗ್ಗುವುದಿಲ್ಲ ಎಂದು ಯತ್ನಾಳ್ ಬಣಕ್ಕೆ ಸಂದೇಶ ರವಾನೆ ಮಾಡಿದ್ದಾರೆ.ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ರೇಣುಕಾಚಾರ್ಯ, ದಾವಣಗೆರೆಯಲ್ಲಿ ವೀರಶೈವ ಲಿಂಗಾಯತ ಮಹಾಸಂಗಮ ಸಮಾವೇಶ ನಡೆಯಲಿದ್ದು, ಈ ಮಹಾ ಸಂಗಮದಲ್ಲಿ ಕನಿಷ್ಠ 5 ಲಕ್ಷ ಜನ ಸೇರಲಿದ್ದಾರೆ. ಈ ಸಮಾವೇಶ ನಡೆಸದಂತೆ ಯಡಿಯೂರಪ್ಪ, ವಿಜಯೇಂದ್ರ ಹೇಳಿದ್ದಾರೆ. ಆದರೆ ನಾವು ಮಹಾಸಂಗಮ ಸಮಾವೇಶ ಮಾಡೇ ಮಾಡ್ತೇವೆ. ಈಗಾಗಲೇ ರಾಜ್ಯದ 17 ಜಿಲ್ಲೆಗಳಲ್ಲಿ ಪೂರ್ವಸಿದ್ಧತಾ ಸಭೆ ನಡೆಸಿದ್ದೇವೆ. ದಾವಣಗೆರೆಯಲ್ಲಿ ಮೇ ತಿಂಗಳಲ್ಲಿ ಬೃಹತ್ ಸಮಾವೇಶ ನಡೆಸುತ್ತೇವೆ ಎಂದು ಸ್ಪಷ್ಟಪಡಿಸಿದರು.ರಾಜ್ಯದಲ್ಲಿ ಲಿಂಗಾಯತ ಸಮುದಾಯದ 19 ಜನರು ಸಿಎಂ ಆಗಿದ್ದಾರೆ. ಅದರಲ್ಲಿ ಬಿ.ಎಸ್.ಯಡಿಯೂರಪ್ಪಗೆ ಕೆಲವರು ಕಿರುಕುಳ ನೀಡಿದರು. ಯಡಿಯೂರಪ್ಪ ಲಿಂಗಾಯತ ನಾಯಕ ಅಲ್ಲ, ಸಮಾವೇಶದ ಮೂಲಕ ಸ್ಪಷ್ಟ ಸಂದೇಶ ಕೊಡುತ್ತೇವೆ ಅಂದಿರುವ ಯತ್ನಾಳ್ಗೆ ತಿರುಗೇಟು ಕೊಟ್ಟ ರೇಣುಕಾಚಾರ್ಯ, ದುಷ್ಟ ಶಕ್ತಿಗಳು ನಮ್ಮನ್ನ ಒಡೆಯೋಕೆ ಆಗುವುದಿಲ್ಲ. ವೀರಶೈವ ಲಿಂಗಾಯತ ಒಳಪಂಗಡಗಳನ್ನು ಒಗ್ಗೂಡಿಸಿ ದಾವಣಗೆರೆಯಲ್ಲಿ ಮಹಾ ಸಂಗಮ ಮಾಡುತ್ತೇವೆ ಎಂದಿದ್ದಾರೆ.
ವಿಜಯೇಂದ್ರ ಬಣಕ್ಕೆ ಯತ್ನಾಳ್ ಟೀಂ ಪ್ರತಿಸವಾಲ್
ಇನ್ನು ವಿಜಯೇಂದ್ರ ಬಣದ ಸಮಾವೇಶದ ಸವಾಲ್ಗೆ ಯತ್ನಾಳ್ ಬಣ ಸಹ ಪ್ರತಿಸವಾಲ್ ಹಾಕಿದೆ. 5 ಲಕ್ಷ ಜನರನ್ನ ಸೇರಿಸಿ ಮಹಾ ಸಂಗಮ ಮಾಡುತ್ತೇವೆ ಅಂದಿದ್ದಾರೆ. ನಾವು ಯಡಿಯೂರಪ್ಪಗೆ ಜೈಕಾರ ಹಾಕುವುದಿಲ್ಲ. ದಾವಣಗೆರೆಯಲ್ಲಿ ವಿಜಯೇಂದ್ರ ಬಣದ ಸಮಾವೇಶ ಮುಗಿದ ಒಂದು ವಾರದಲ್ಲೇ ನಾವು ಸಮಾವೇಶ ಮಾಡುತ್ತೇವೆ ಎಂದು ಯತ್ನಾಳ್ ಸವಾಲ್ ಹಾಕಿದ್ದಾರೆ. ಇದಕ್ಕೆ ಪೂರಕವೆಂಬಂತೆ ಯತ್ನಾಳ್ ಗ್ರೂಪ್ ನ ಶಾಸಕ ಬಿಪಿ ಹರೀಶ್ ಹಿಂದು ಸಮಾವೇಶದ ಬಗ್ಗೆ ಬಹಿರಂಗಪಡಿಸಿದ್ದಾರೆ.ಈ ಮೂಲಕ ಬಿಜೆಪಿಯಲ್ಲಿ ಮತ್ತೆ ಸಂಘರ್ಷ ಶುರುವಾಗಿದ್ದು, ಹೈಕಮಾಂಡ್ ಮಾತ್ರ ಮೌನಕ್ಕೆ ಶರಣಾಗಿರುವುದು ಅಚ್ಚರಿಗೆ ಕಾರಣವಾಗಿದೆ.