ಬೈಕ್ಗೆ ಸಾರಿಗೆ ಬಸ್ ಡಿಕ್ಕಿ: ಮೂವರು ಮಕ್ಕಳು ಸೇರಿ ಒಂದೇ ಕುಟುಂಬದ ಐವರು ದುರ್ಮರಣ!

ಬೈಕ್ಗೆ ಸಾರಿಗೆ ಬಸ್ ಡಿಕ್ಕಿಯಾಗಿದ್ದು, ಮೂವರು ಸಾವನ್ನಪ್ಪಿದ್ದಾರೆ. ಒಂದೇ ಕುಟುಂಬದ ಇಬ್ಬರು ಮಕ್ಕಳು ಸೇರಿ ಮೂವರು ಮೃತಪಟ್ಟಿದ್ದಾರೆ. ಸಾರಿಗೆ ಬಸ್ ಗುದ್ದಿದ ರಭಸಕ್ಕೆ ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲಿ ಉಸಿರು ಚೆಲ್ಲಿದ್ದಾರೆ. ಇನ್ನು ಘಟನೆಯಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಯಾದಗಿರಿಯ ಸುರಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ಸಂಭವಿಸಿದೆ.
ಜಿಲ್ಲೆಯ ಸುರಪುರ ತಾಲೂಕಿನ ತಿಂಥಣಿ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಇಡೀ ಕುಟುಂಬವೇ ಮಸಣ ಸೇರಿದೆ. ಬೈಕ್ಗೆ ಸಾರಿಗೆ ಬಸ್ ಡಿಕ್ಕಿಯಾಗಿ ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದಾರೆ. ಇನ್ನು ಗಂಭೀರವಾಗಿ ಗಾಯಗೊಂಡಿದ್ದ ಇನ್ನಿಬ್ಬರು ಆಸ್ಪತ್ರೆಗೆ ಸಾಗಿರುವ ಮಾರ್ಗ ಮಧ್ಯದಲ್ಲೇ ಕೊನೆಯುಸಿರೆಳೆದಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ ಐದಕ್ಕೆ ಏರಿಕೆಯಾಗಿದ್ದು, ಇಡೀ ಕುಟುಂಬವೇ ಬಲಿಯಾಗಿದೆ. ಒಂದು ವರ್ಷದ ಮಗು ಹನುಮಂತ(1), ಹನುಮಂತ ತಂದೆ ಆಂಜನೇಯ (35) ತಾಯಿ ಗಂಗಮ್ಮ (28), ಹನುಮಂತನ ಸಹೋದರನ ಮಕ್ಕಳಾದ ಪವಿತ್ರ (5) ಹಾಗೂ ರಾಯಪ್ಪ (3) ಸಾವನ್ನಪ್ಪಿದ ದುರ್ವೈವಿಗಳು.
ಮೂವರು ಮಕ್ಕಳು ಸೇರಿ ಒಂದೇ ಬೈಕ್ ನಲ್ಲಿ ಐದು ಜನ ಸುರಪುರದಿಂದ ತಿಂಥಣಿ ಕಡೆಗೆ ಹೊರಟ್ಟಿದ್ದರು. ಆ ವೇಳೆ ಹಿಂಬದಿಯಿಂದ KA 32 F 2684 ನಂಬರಿನ ಕೆಎಸ್ಆರ್ಟಿಸಿ ಬಸ್ ಬಂದು ರಭಸವಾಗಿ ಗುದ್ದಿದೆ. ಘಟನೆಯಲ್ಲಿ ಇಡೀ ಕುಟುಂಬವೇ ಬಲಿಯಾಗಿದೆ.ಗುದ್ದಿದ ರಭಸಕ್ಕೆ ಬೈಕ್ನಲ್ಲಿದ್ದ ಮೂರು ಎರಡು ಪುಟ್ಟ ಪುಟ್ಟ ಮಕ್ಕಳು ಉಸಿರು ಚೆಲ್ಲಿವೆ. ಅಪಘಾತದಲ್ಲಿ ಮಕ್ಕಳ ಮೃತ ದೇಹ ಬಿದ್ದಿರುವ ಸ್ಥಿತಿ ನೋಡಿದರೆ ಕರುಳು ಕಿತ್ತು ಬರುತ್ತೆ. ಆ ರೀತಿಯಾಗಿವೆ. ಹೀಗಾಗಿ ಫೋಟೋಗಳನ್ನು ತೋರಿಸುವಂತಿಲ್ಲ. ಇನ್ನು ಬೈಕ್ನಲ್ಲಿ ಊರಿಗೆ ಹೊರಟ್ಟಿದ್ದರು ಅನ್ನಿಸುತ್ತೆ. ಬಟ್ಟೆ ಬ್ಯಾಗ್ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಬೈಕ್ ಅಂತೂ ಮುದ್ದೆಯಾಗಿದೆ.