ಇತ್ತೀಚಿನ ಸುದ್ದಿರಾಜ್ಯ

ವಿಶ್ವಕರ್ಮ ಸಮಾಜದಿಂದ ಗಾಯಿತ್ರಿ ಹೋಮ

ಹಿಂದೂ ಧರ್ಮದ ಆರಂಭದ ದಿನಗಳಿಂದಲೂ ನಡೆದುಕೊಂಡು ಬಂದಿರುವ ಆಚರಣೆ ಈ ಹೋಮ ಮತ್ತು ಅಭಿಷೇಕ ಮಾಡುವುದು ಎಂದು ಶ್ರೀ ವಿನೋದ್ ಗೌಡ ಮಾಲಿಪಾಟೀಲ್ ಮಾಜಿ ಜಿ.ಪಂ ಸದಸ್ಯರು ಯಾದಗಿರಿ,
ಮಾತನಾಡಿದರು.

ಕಾರ್ಯಕ್ರಮ ಕುರಿತು ಮಾತನಾಡಿದ ಅವರು ಹಿಂದೂ ಧರ್ಮದಲ್ಲಿ ಪ್ರತಿಯೊಂದು ದೇವರ ಪೂಜೆಗೂ ಅದರದ್ದೇ ಆದ ವಿಧಿ ವಿಧಾನಗಳಿವೆ. ಹೋಮ ಮಾಡುವ ಸಂಪ್ರದಾಯವು ಶತಮಾನಗಳಿಂದ ನಡೆದುಕೊಂಡು ಬಂದಿದೆ. ರಾಮಾಯಣ ಮತ್ತು ಮಹಾಭಾರತಗಳಲ್ಲಿಯೂ ಇದರ ಉಲ್ಲೇಖವಿದೆ ಎಂದರು.

ಶಾಸಕ ಚನ್ನರೆಡ್ಡಿ ಪಾಟೀಲ್ ತುನ್ನೂರ್ ಮಾತನಾಡಿ. ಹೋಮ ಮಾಡುವುದರಿಂದ ಆರೊಗ್ಯದ ಸಮಸ್ಯೆಗಳನ್ನು ನಿವಾರಿಸಕೊಳ್ಳಬಹುದು. ಇದು ಧಾರ್ಮಿಕವಾಗಿ ಮಾತ್ರವಲ್ಲ, ವೈಜ್ಞಾನಿಕವಾಗಿಯೂ ದೃಢಪಟ್ಟಿದೆ.

ಲೋಕ ಕಲ್ಯಾಣಾರ್ಥವಾಗಿ ಶ್ರೀಮಾತೆ ಗಾಯತ್ರಿದೇವಿ ಹೋಮ ಮತ್ತು ಶ್ರೀಮಾತೆ ಕಾಳಿಕಾದೇವಿ ಮೂರ್ತಿಗೆ ಅಭಿಷೇಕ, ಉಡಿ ತುಂಬುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ,ಹಿಂದೂ ಧರ್ಮದಲ್ಲಿ ಹೋಮ ಹವನಾದಿಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ಪ್ರತಿ ಶುಭ ಕಾರ್ಯಕ್ರಮಗಳಲ್ಲೂ ಹೋಮ ಕಡ್ಡಾಯವೆಂದು ಪರಿಗಣಿಸಲಾಗುತ್ತದೆ. ಧರ್ಮಗ್ರಂಥಗಳ ಪ್ರಕಾರ ಹೋಮ ಮಾಡುವುದರಿಂದ ಮನೆಯಲ್ಲಿನ ನಕಾರಾತ್ಮಕ ಶಕ್ತಿಯು ದೂರಾಗುತ್ತದೆ ಎಂದು ಹೇಳಿದರು.

ಮಹೇಶರೆಡ್ಡಿ ಗೌಡ ಮುದ್ನಾಳ್ ಮಾತನಾಡಿ, ಹೋಮ ಮತ್ತು ಅಭಿಷೇಕವು ಧಾರ್ಮಿಕ ಸ್ನಾನದ ಆಚರಣೆಯಾಗಿದೆ. ನಮ್ಮ ಭಾರತ ದೇಶದಲ್ಲಿ ಹೋಮ, ಅಭಿಷೇಕ, ಉಡಿ ತುಂಬುವ ಕಾರ್ಯಕ್ರಮ ಹೀಗೆ ಹಲವಾರು ರೀತಿಯಲ್ಲಿ ಶಾಂತಿ ಕಾಪಡುತ್ತ ಬಂದ ದೇಶ ನಮ್ಮದು ಎಂದು ಹೇಳಿದರು. ಭಾರತ ದೇಶದಲ್ಲಿ ನಮ್ಮ ಸಂಸ್ಕçತಿ, ಪದ್ದತಿ ಉಳಿದಿರುವುದು ಮಠ ಮಂದಿರಗಳಲ್ಲಿ, ವಿಶ್ವಕರ್ಮ ಸಮಾಜದಿಂದ ಮಾಡಿದ ಈ ಕಾರ್ಯಕ್ರಮ ತುಂಬಾ ಒಳೆಯ ಕಾರ್ಯಕ್ರಮ. ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ಒಳೆಯ ಕಾರ್ಯ ಹೀಗೆ ಮುಂದುವರಿಯಲಿ ಎಂದರು.

ಶ್ರೀ ಕಾಳಹಸ್ತೇಂದ್ರ ಮಹಾಸ್ವಾಮಿಗಳು ಮಾತನಾಡಿ, ಉತ್ತಮ ಜೀವನ ನಡೆಸಲು ಭಕ್ತರ ಇಷ್ಟಾರ್ಥಗಳನ್ನು ಪೂರೈಸುವುದಕ್ಕಾಗಿ ಆ ತಾಯಿ ಕಾಳಿಕಾದೇವಿ ಮೂರ್ತಿಗೆ ಅಭಿಷೇಕ, ಉಡಿ ತುಂಬುವ ಕಾರ್ಯಕ್ರಮ ಮಾಡಲಾಯಿತ್ತು. ಗಾಯತ್ರಿದೇವಿ ಹೋಮ ಮತ್ತು ಉಡಿ ತುಂಬುವ ಕಾರ್ಯಕ್ರಮ ಮಾಡಿದು ಶಾಂತಿ ಕಾಪಡುತದೆ. ನಾನು ನನ್ನದು ಎಂಬುವುದನ್ನು ನಾವು ಮರಿಯಬೇಕು. ನಂಬಿಕೆಯಿಂದ ದೇವರಲ್ಲಿ ನಾವು ಪ್ರಾರ್ಥನೆ ಮಾಡಬೇಕು. ಸಂತೋಷ ಮತ್ತು ಸಮೃದ್ಧ, ಆಧ್ಯಾತ್ಮಿಕ ಜೀವನಕ್ಕಾಗಿ ದೇವರಲ್ಲಿ ನಾವು ಪ್ರಾರ್ಥನೆ ಮಾಡಬೇಕು ಎಂದರು.

ಈ ಸಂರ್ಭದಲ್ಲಿ ಶ್ರೀ ವಿನೋದ್ ಗೌಡ ಮಾಲಿಪಾಟೀಲ್ ಜಿ.ಪಂ ಸದಸ್ಯರು ಯಾದಗಿರಿ, ನಿಂಗಣ್ಣ ಗೌಡ ಪೋಲಿಸ್ ಪಾಟೀಲ್, ಶ್ರೀ ರಾಘವೇಂದ್ರರಾವ್ ಕುಲಕರ್ಣಿ, ಮಂಜುನಾಥ ಕಂಚಗಾರ, ಮೌನೇಶ ಕಂಚಗಾರ, ತಿಪ್ಪಣ್ಣ ಸಾಹುಕಾರ ಆಂದೇಲಿ, ಮಾನಪ್ಪ ಹುಲಸೂರು, ಷಣ್ಮುಖಪ್ಪ ಕಕ್ಕೇರಿ, ವಿಜಯಕುಮಾರ ಮಲಗೊಂಡ, ಅಬ್ದುಲ್ ಭಾಷಾ ಅರ್ಜಣಗಿ, ಮಹೇಶ ಪತ್ತರ್, ವಿರೇಶ ಬಡಗೇರ್, ಗಂಗಾಧರ ಕಂಚಗಾರ್, ಹಾಗೂ ಗ್ರಾಮದ ಹಿರಿಯ ಮುಖಂಡರು ಇತರರಿದ್ದರು.

Related Articles

Leave a Reply

Your email address will not be published. Required fields are marked *

Back to top button