ಇತ್ತೀಚಿನ ಸುದ್ದಿಕ್ರೀಡೆರಾಜ್ಯ

ಮೂರು ಸಾವಿರ ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಗಳಿಸಿದ್ದ ಕುಮಾರಿ ಅರ್ಚನಾ ಗೆ ಪುನೀತ್ ರಾಜ್ ಕುಮಾರ್ ಅಭಿಮಾನಿ ಬಳಗದಿಂದ ಸನ್ಮಾನ.

ಹೊಸನಗರ:- ಪಟ್ಟಣದ ಮಲೆನಾಡು ಬಾಲಕಿಯ ಪ್ರೌಢಶಾಲೆಯ ಒಂಬತ್ತನೇ ತರಗತಿ ವಿದ್ಯಾರ್ಥಿನಿ ಕುಮಾರಿ ಅರ್ಚನಾ ಶಿವಮೊಗ್ಗದಲ್ಲಿ ನಡೆದ 17 ವರ್ಷ ಒಳಗಿನ ಕ್ರೀಡಾಕೂಟದಲ್ಲಿ ಮೂರು ಸಾವಿರ ಮೀಟರ್ ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಸಂಭ್ರಮದ ಹಿನ್ನೆಲೆಯಲ್ಲಿ ಇಲ್ಲಿನ ಕನ್ನಡ ಸಂಘ ಅಭಿಮಾನಿ ಬಳಗದವರ ಆಶ್ರಯದಲ್ಲಿ ಇಂದು ಶಾಲೆಗೆ ತೆರಳಿ ಶಾಲಾ ಅವರಣದಲ್ಲಿ ಅರ್ಚನಾ ಅವರನ್ನು ಅಭಿನಂದಿಸಿ ನೆನಪಿನ ಕಾಣಿಕೆ ನೀಡಿದರು. ಈ ಸಂದರ್ಭದಲ್ಲಿ ಡಾಕ್ಟರ್ ಪುನೀತ್ ರಾಜಕುಮಾರ್ ಅಭಿಮಾನಿ ಬಳಗ ದ ಅಧ್ಯಕ್ಷರಾದ ಪ್ರಶಾಂತ್ ಮತ್ತು ಕಳೂರು ವ್ಯವಸಾಯ ಸೇವಾ ಸಹಕಾರ ಬ್ಯಾಂಕಿನ ಅಧ್ಯಕ್ಷರಾದ ವಿನಯ್ ಕುಮಾರ್ ಹಾಗೂ ಜಿಮ್ಮಿ ಜಾರ್ಜ್ ವಾಲಿಬಾಲ್ ಅಧ್ಯಕ್ಷರಾದ ಕೆ ಇಲಿಯಾಸ್ ಹಿರಿಯ ಕಲಾವಿದರಾದ ವೇಣುಗೋಪಾಲ್ ನವಶಕ್ತಿ ರಮೇಶ್ ಬಿಎಸ್ ಸುರೇಶ್ ಎಂ ಕೆ ವೆಂಕಟೇಶ್ ಮೂರ್ತಿ ದೀಪಕ್ ಸ್ವರೂಪ್ ಕೆಜಿ ನಾಗೇಶ್ ಅರವಿಂದ್ ಗಣೇಶ್ ಗೌಡ ಶಾಲೆಯ ಮುಖ್ಯ ಉಪಾಧ್ಯಾಯರಾದ ಸುಧಾಕರ್ ಕ್ರೀಡಾ ಶಿಕ್ಷಕರಾದ ಹಾಗೂ ಜ್ಯೋತಿ ಹಾಜರಿದ್ದರು. ಅರ್ಚನಾ ಅವರು ಗ್ರಾಮೀಣ ಪ್ರದೇಶದ ವಿದ್ಯಾರ್ಥಿನಿಯಾಗಿದ್ದು ಕೊಡಸೆ ಗ್ರಾಮದ ಹೆಬ್ಬುಲಿ ಬಡ ಕೃಷಿಕ ಕುಟುಂಬದ ಕೃಷ್ಣ ಹಾಗೂ ಕಲಾವತಿ ದಂಪತಿಗಳ ಪುತ್ರಿ ಜಿಲ್ಲಾ ಮಟ್ಟದಲ್ಲಿ 3000 ಮೀಟರ್ ಅನ್ನು ಕೇವಲ ಹನ್ನೊಂದು ನಿಮಿಷ ನಾಲ್ಕು ಸೆಕೆಂಡುಗಳಲ್ಲಿ ಮುಗಿಸಿರುತ್ತಾಳೆ ಇವರ ಕ್ರೀಡ ಜೀವನ ಇನ್ನು ಮುಂದುವರೆಯಲಿ ಎಂದು ಹೊಸನಗರದ ಪಟ್ಟಣದ ಎಲ್ಲಾ ನಾಗರಿಕರು ಈ ಪ್ರತಿಭೆಗೆ ಸಹಕಾರ ನೀಡುವಂತೆ ಪುನೀತ್ ರಾಜಕುಮಾರ್ ಅಭಿಮಾನಿ ಸಂಘದ ಅಧ್ಯಕ್ಷರಾದ ಪ್ರಶಾಂತ್ ಅವರು ಮನವಿ ಮಾಡಿರುತ್ತಾರೆ.ಈ ವಿದ್ಯಾರ್ಥಿಗೆ ಇದರ ತರಬೇತಿದ್ದರಾದ ಸುರೇಶ್ ಅವರು ಹಾಗೂ ಶಾಲಾ ಆಡಳಿತ ಮಂಡಳಿ ನೌಕರವರ್ಗ ಅಭಿನಂದನೆ ಸಲ್ಲಿಕೆ.

Related Articles

Leave a Reply

Your email address will not be published. Required fields are marked *

Back to top button