ಇತ್ತೀಚಿನ ಸುದ್ದಿರಾಜ್ಯ

ಮರೇಮ್ಮ ದೇವಿಯ ಜಾತ್ರ ಮಹೋತ್ಸವ

ಹುರಸಗುಂಡಗಿಯ ಗ್ರಾಮದಲ್ಲಿ ಮರೇಮ್ಮ ದೇವಿಯ ಜಾತ್ರಾ ಮಹೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು

ಶಹಾಪೂರ ತಾಲೂಕಿನ ಹುರಸಗುಂಡಗಿಯ ಗ್ರಾಮದಲ್ಲಿ ಪ್ರತಿ ವರ್ಷವೂ
ಜಾತ್ರಾ ಮಹೋತ್ಸವದಲ್ಲಿ ಕೋಲು ಕುಣಿತ, ಡೊಳ್ಳು ಕುಣಿತ, ದೇವಿ ಕುಣಿತ, ಹಲಗೆ ಕುಣಿತ, ಹೀಗೆ ಹಲವಾರು ಕುಣಿತಗಳಿಂದ ಕುಣಿದು ಕುಪ್ಪಾಳಿಸುತ್ತಿದ್ದ ಜನಸಾಗರವೇ ಈ ವರ್ಷವು ಇಲ್ಲಿ ಕಂಡುಬಂದಿದೆ ಎಂದು ವಿಶ್ವ ಪಂಡಿತ್ ಹೇಳಿದರು.

ಈ ಜಾತ್ರಾ ಮಹೋತ್ಸವವನ್ನು ಸುಮಾರು ಐದು ದಿನಗಳ ಕಾಲ ಸತತವಾಗಿ ಜರಗುತ್ತದೆ. ಮೊದಲನೆಯ ದಿನದಲ್ಲಿ ಮರೇಮ್ಮ ದೇವಿಯ ಹುಟ್ಟೂರು ಮಲ್ಲಾ ಬಿ ಎಂಬ ಹಳ್ಳಿಗೆ ಪಾಲಿಕೆಯ ಒಳಗೆ ದೇವಿಯ ಮೂರ್ತಿಯನ್ನು ಇಟ್ಟು ಪರಂಪರೆಯ ಪಲ್ಲಕ್ಕಿ ಉತ್ಸವದ ಮೂಲಕ ಲೋಕಕಲ್ಯಾಣಕ್ಕಾಗಿ ಸಕಲ ಸದ್ಭಕ್ತರು ಪಾಲ್ಗೊಂಡು ಮಲ್ಲಾ ಬಿ ಕ್ಷೇತ್ರಕ್ಕೆ ತೆರಳಿ, ಆ ದಿನ ಅಲ್ಲೇ ವಸ್ತಿ ಮಾಡಿ ಮರುದಿನ ತನ್ನ ಗಂಡನ ಊರಾಗಿರುವ ಹುರಸಗುಂಡಗಿಗೆ ಬರುತ್ತಾರೆ. ಬರುವ ದಾರಿಯಲ್ಲಿ ಹೊಸೂರು ಬಿರಾಳ.ಹೊನ್ನಾಳ. ಮಲ್ಲಾ ಬೀ. ಅಣಬಿ. ಗ್ರಾಮಗಳಲ್ಲಿ ಪ್ರಸಾದ ವ್ಯವಸ್ಥೆ ಏರ್ಪಡಿಸಲಾಗಿತ್ತು.

ಹುರಸಗುಂಡಗಿಯ ಗ್ರಾಮದಲ್ಲಿ
ರಾತ್ರಿ ವೇಳಿ ಪಾಲಿಕೆ ಮೆರವಣಿಗೆ ನಡೆಯುತ್ತು. ಮೂರನೇ ದಿನದಂದು ಜಾತ್ರೆಯ ನಿಮಿತ್ಯ ಹಲವಾರು ಕಾರ್ಯಗಳನ್ನು ನೆರೆವೇರಿದವು. ನಾಲ್ಕನೇ ದಿನದಂದು ಮರೇಮ್ಮ ದೇವಿಯ ಮೂರ್ತಿಯನ್ನು ರಥದಲ್ಲಿ ಈರಿಸಿಕೊಂಡು ಗಂಗೆಯ ಸ್ಥಾನ ಮಾಡಿಸಿ ಊರೆಲ್ಲ ಪ್ರಮುಖ ಬೀದಿಗಳ ಮುಖಾಂತರ ಮೆರವಣಿಗೆ ಸಂಬ್ರಮ ಜರಗಿತು.

ರಾತ್ರಿಯಲ್ಲಿ ಅನ್ನ ದಾಸೋಹ, ದೀಪೋತ್ಸವ, ಉಡಿ ತುಂಬುವ ಕಾರ್ಯಕ್ರಮ ಪಾಲಿಕೆ ಮೆರವಣಿಗೆ .ಭಜನಾ ಪದ. ಡೊಳ್ಳಿನ ಪದ. ಹೀಗೆ ಹಲವಾರು ಕಾರ್ಯಕ್ರಮಗಳು ಜರಗುತ್ತಾ ರಾತ್ರಿ ಎಂಬುವುದನ್ನು ಹಗಲು ಎಂದು ಪ್ರಜ್ವಲಿಸಿದಂತಾಗತಿತ್ತು ಎಂದೂ ಗ್ರಾಮದ ಜನರ ಸಂತೋಷದ ಸಂದರ್ಭಗಳಲ್ಲಿ ಭಕ್ತರ ಮಾತುಗಳು ಕೇಳಿ ಬಂತು.

ಅಗ್ಗಿ ತುಳಿದು ರಥೋತ್ಸವವನ್ನು ಗದ್ದುಗೆಗೆ ಮುಟ್ಟಿಸಿ ಜಾತ್ರೆಯಲ್ಲಿ ಸಾವಿರಾರು ಭಕ್ತರು ತಾಯಿ ಕೃಪೆಗೆ ಪಾತ್ರರಾದರು.

ನಿಜಕೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಾಚರಣೆಗಳು ಇಲ್ಲಿ ಜರಗುತ್ತವೆ ಈ ಜಾತ್ರೆಯಲ್ಲಿ ವಿಶೇಷವಾಗಿ ಜಾತಿ ಮತ ಧರ್ಮ ಎಲ್ಲವನ್ನು ಮೀರಿ ನಾವೆಲ್ಲರೂ ಒಂದೇ ಎಂದು ಸಂಪೂರ್ಣ ಗ್ರಾಮದ ಜನ ಭಾಗವಹಿಸುವುದು ಕಂಡುಬಂದಿದೆ.

Related Articles

Leave a Reply

Your email address will not be published. Required fields are marked *

Back to top button