ಲಕ್ಷಾಂತರ ವಸ್ತುಗಳು ವಶ ಆರು ಜನರ ಬಂಧನ
ಗುಂಡ್ಲುಪೇಟೆ:
ತಾಲೂಕಿನ ತೆರಕಣಾಂಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಕೊತ್ತಲವಾಡಿ ಗ್ರಾಮದ ಕ್ವಾರಿಯಲ್ಲಿ ಕಳ್ಳತನ ಮಾಡಿದ್ದ ಲಕ್ಷಾಂತರ ರೂಪಾಯಿಯ ಕಬ್ಬಿಣದ ಸೀಟುಗಳನ್ನು ಪತ್ತೆಹಚ್ಚಿದ್ದಾರೆ
ಕ್ವಾರಿಯ ಮ್ಯಾನೇಜರ್ ರಾಜಶೇಖರ ಎಂಬುವರು ನೀಡಿದ ದೂರು ಸ್ವೀಕರಿಸಿದ ಪೊಲೀಸರು ಪ್ರಕರಣ ದಾಖಲಿಸಿಕಳ್ಳರ ಪತ್ತೆಗೆ ಕ್ರಮ ಕೈಗೊಂಡರು
ಸಬ್ ಇನ್ಸ್ ಪೆಕ್ಟರ್ ಕೆ.ಎಂ.ಮಹೇಶ್ ನೇತೃತ್ವದಲ್ಲಿ
ಗ್ರಾಮದ ಗೋಟ ಮಹದೇವಸ್ವಾಮಿ ಸಿದ್ದಪ್ಪ, ಕೊಣಮ ಮಹದೇವಸ್ವಾಮಿ, ಗಿರೀಶ್, ಮಹದೇವಪ್ರಸಾದ್ ಹಾಗೂ ಸೋಮೇಶ್ವರ ಎಂಬ ಆರೋಪಗಳನ್ನು ಬಂದಿಸಿ 1.8 ಲಕ್ಷ ಬೆಲೆಬಾಳುವ ಮೇಲ್ಚಾವಣಿಯ ಶೀಟುಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಟ್ರ್ಯಾಕ್ಟರ್ ವಶಪಡಿಸಿ
ಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಸಿಬ್ಬಂದಿ ಬಂಗಾರನಾಯ್ಕ, ಭಗೀರಥ, ಕೃಷ್ಣ, ಮಹೇಶ್ ಭಾಗವಹಿಸಿದ್ದರು