ನ್ಯಾಷನಲ್ ಹೈವೇ ಅವೈಜ್ಞಾನಿಕ ಕಾಮಗಾರಿಯಿಂದ ಕುಸಿದ ರಸ್ತೆ ಬದಿಯ ಚರಂಡಿ ಸ್ಲಾಬ್…… ಯಾಮರೆತರೆ ಸಾರ್ವಜನಿಕರ ಕೈ ಕಾಲ್ ಕಟ್……
ವಿಶೇಷ ವರದಿ……
ಶ್ರೀನಿವಾಸ್ ಕೊರಟಗೆರೆ
ಕೊರಟಗೆರೆ:- ರಾಜ್ಯ ಹಾಗೂ ದೇಶದ ಪ್ರಗತಿಗೆ ಸಾರಿಗೆ ಹಾಗೂ ರಸ್ತೆ ಸಂಪರ್ಕ ಬಹಳ ಮುಖ್ಯವಾಗಿದ್ದು, ಸುಗಮ ರಸ್ತೆ ಸಂಪರ್ಕಕ್ಕಾಗಿ ಸರ್ಕಾರ ಕೋಟ್ಯಂತರ ರೂಪಾಯಿ ಅನುದಾನ ಬಿಡುಗಡೆಗೊಳಿಸುತ್ತಿದ್ದರೂ ಗುತ್ತಿಗೆದಾರರು ಹಾಗೂ ಅಧಿಕಾರಿಗಳ ಹಣ ದಾಹಕ್ಕೆ ಕೋಟ್ಯಾಂತರ ರೂಪಾಯಿ ಅನುದಾನ ದುರ್ಬಳಕೆ ಆಗುತ್ತಿದ್ದು , ಕೊರಟಗೆರೆ ತಾಲೂಕಿನಲ್ಲಿಯೂ ಇದೇ ಮಾದರಿಯ ಕಳಪೆ ಕಾಮಗಾರಿ ರಾರಾಜಿಸುತ್ತಿದ್ದು ಸಂಬಂಧಪಟ್ಟಂತ ಅಧಿಕಾರಿ ಹಾಗೂ ಗುತ್ತಿಗೆದಾರರು ವಿರುದ್ಧ ಕ್ರಮಕ್ಕಾಗಿ ಸಾರ್ವಜನಿಕರು ಆಗ್ರೈಹಿಸಿದ್ದಾರೆ.
ಕೊರಟಗೆರೆ ತಾಲೂಕಿನ ಗಡಿಭಾಗ ಬೈರೇನಹಳ್ಳಿಯ ಚಿಕ್ಕಬಳ್ಳಾಪುರ ಹಾಗೂ ಬೈರೇನಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ನ್ಯಾಷನಲ್ ಹೈವೇ 69 ಚತುಷ್ಪಥ ರಸ್ತೆಯ ಅವೈಜ್ಞಾನಿಕ ಕಾಮಗಾರಿ ಹಾಗೂ ಕಳಪೆ ಗುಣಮಟ್ಟದ ಕಾಮಗಾರಿಯಿಂದ ರಸ್ತೆಯ ಎರಡು ಬದಿಯ ವಾಲ್ ಚರಂಡಿ ಮೇಲ್ಭಾಗ ಅಳವಡಿಸಲಾದ ಸಿಸಿ ಬ್ಲಾಕ್ ಸಾಲ್ಬ್ ಗಳು ಕುಸಿಯುತ್ತಿದ್ದು ಸಾರ್ವಜನಿಕರು ಫುಟ್ಬಾತ್ ಬಳಸಲು ಭಯಪಡುವ ವಾತಾವರಣ ನಿರ್ಮಾಣವಾಗಿದೆ.
ನ್ಯಾಷನಲ್ ಹೈವೇ ಎನ್ಎಚ್ 69 ಬೈರೇನಹಳ್ಳಿ ಯಿಂದ ಚಿಕ್ಕಬಳ್ಳಾಪುರಕ್ಕೆ ಸಂಪರ್ಕ ಕಲ್ಪಿಸುವ ಚತುಷ್ಪಥ ರಸ್ತೆ ಪ್ರಾರಂಭವಾಗಿ 2 ವರ್ಷ ಕಳೆದಿದ್ದು,
ಟೆಂಡರ್ ಸಂದರ್ಭದಲ್ಲಿ ನೀಡಲಾದ ಅವಧಿ ಮುಕ್ತಾಯಗೊಂಡಿದ್ದರೂ ಕಾಮಗಾರಿ ಪೂರ್ಣಗೊಳಿಸದೆ ಮಂದಗತಿಯಲ್ಲಿ ಕಾಮಗಾರಿ ನಡೆಯುತ್ತಿರುವುದಲ್ಲದೆ ರಸ್ತೆ ಸೇರಿದಂತೆ ಗ್ರಾಮಗಳ ಬಳಿ ನಿರ್ಮಿಸಿರುವ ಒಳಚರಂಡಿ ಮೇಲ್ಭಾಗ ನಿರ್ಮಾಣವಾಗಿರುವ ಮೇಲ್ಚಾವಣಿ ಕುಸಿದು ಅದರ ಮೇಲೆ ನಡೆಯಲು ಸಾರ್ವಜನಿಕರು ಆತಂಕ ಪಡುತ್ತಿರುವುದಲ್ಲದೆ, ಸ್ವಲ್ಪ ಮೈಮರೆತರೆ ಕೈಕಾಲು ಮುರಿದುಕೊಳ್ಳುವ ಜೊತೆಗೆ ಜೀವ ಕಳೆದುಕೊಳ್ಳುವ ಆತಂಕದಲ್ಲಿ ಜನ ನಡೆದಾಡುತ್ತಾ ಗುತ್ತಿಗೆದಾರ ಹಾಗೂ ಅಧಿಕಾರಿಯ ವಿರುದ್ಧ ಇಡೀ ಶಾಪ ಹಾಕುತ್ತಿದ್ದಾರೆ.
ನ್ಯಾಷನಲ್ ಹೈವೇ 69 ರಸ್ತೆಗೆ ಹೊಂದಿಕೊಂಡಂತೆ ಅರಸಾಪುರ ಗ್ರಾಮವಿದ್ದು, ಸರಿಸುಮಾರು 500ಕ್ಕೂ ಹೆಚ್ಚು ಮನೆ ಇರುವ ಅತಿ ದೊಡ್ಡ ಗ್ರಾಮವಾದ ಅರಸಾಪುರ ಕಳೆದ ನೂರಾರು ವರ್ಷಗಳಿಂದ ಮಳೆಯ ಹಾಗೂ ಸಾರ್ವಜನಿಕರ ಮನೆ ಬಳಕೆಯ ನೀರು ಚರಂಡಿ ಮೂಲಕ ಹಾದು ಹೋಗಿ ಮುಖ್ಯ ರಸ್ತೆಯ ಚರಂಡಿ ಮೂಲಕ ಹಳ್ಳ ಸೇರುತ್ತಿದ್ದಿದ್ದು ಸಾಮಾನ್ಯವಾಗಿತ್ತು, ಆದರೆ ಈಗ ಹೊಸದಾಗಿ ನಿರ್ಮಾಣವಾಗುತ್ತಿರುವ ರಸ್ತೆ ಎರಡು ಬದಿಯ ಒಳಚರಂಡಿ ಗಳು ಊರಿನ ಚರಂಡಿಗಳಿಗಿಂತ ಎತ್ತರ ವಾಗಿರುವುದರಿಂದ ಗ್ರಾಮದಿಂದ ಹರಿಯುವಂತ ಚರಂಡಿಯ ನೀರು ಹೊರಹೋಗದೆ ನಿಂತಲ್ಲಿ ನಿಂತು ಅನೈರ್ಮಲ್ಯಕ್ಕೆ ಕಾರಣವಾಗಿ ಮನೆಯ ಮುಂಭಾಗದ ಚರಂಡಿ ದುರ್ನಾಥ ಬೀರುವ ಮೂಲಕ ಸಾರ್ವಜನಿಕರಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದ್ದು, ಹೈವೇ ಕಾಮಗಾರಿಯ ಅವೈಜ್ಞಾನಿಕ ಕಾಮಗಾರಿಯಿಂದ ಗ್ರಾಮದ ಬಹುತೇಕ ಜನ ಈ ಕಾಮಗಾರಿಯ ವಿರುದ್ಧ ಆರೋಪದ ಸುರಿಮಳೆಗೆರೆಯುತ್ತಿರುವುದಲ್ಲದೆ ಗುತ್ತಿಗೆದಾರ ಹಾಗೂ ಲೋಕೋಪಯೋಗಿ ಇಲಾಖೆಯ ವಿರುದ್ಧ ಹಿಡೀ ಶಾಪ ಹಾಕುತ್ತಿದ್ದಾರೆ.
ಅರಸಾಪುರ ಗ್ರಾಮದ ಚರಂಡಿಗಳೇ ಮಂಗಮಾಯ
ಅರಸಾಪುರ ಗ್ರಾಮ ಪಂಚಾಯಿತಿ ಮತ್ತೊಂದು ಗಂಡಾಂತರ ಎದುರಿಸುವಂತಹ ಅನಿವಾರ್ಯತೆ ಒದಗಿದ್ದು, ನ್ಯಾಷನಲ್ ಹೈವೇ NH 69 ಅವೈಜ್ಞಾನಿಕ ಕಾಮಗಾರಿಯಿಂದ ಊರಿನ ಚರಂಡಿಯ ನೀರುಗಳು ಸಮರ್ಪಕವಾಗಿ ಹರಿದು ಹೋಗದ ಕಾರಣ ಚರಂಡಿಯ ನೀರು ಹಾಗೂ ಮಳೆ ಬಂದಂತ ಸಂದರ್ಭದಲ್ಲಿನ ನೀರು ರಸ್ತೆಯಲ್ಲಿಯೇ ನಿಂತು ಸಾರ್ವಜನಿಕರಿಗೆ ಕಿರಿಕಿರಿಯಾಗುತ್ತಿದ್ದರಿಂದ ಜೊತೆಗೆ ಚರಂಡಿಯಲ್ಲಿ ಸತತವಾಗಿ ನೀರು ನಿಲ್ಲುತ್ತಿದ್ದ ಕಾರಣ ಪ್ರತಿ ಮನೆಯ ಮುಂಬಾಗದ ಚರಂಡಿಗಳನ್ನ ಸ್ವತಃ ಮನೆಯವರೇ ಚರಂಡಿ ಮುಚ್ಚುವ ಮೂಲಕ ಗ್ರಾಮ ಪಂಚಾಯಿತಿಗೆ ದೊಡ್ಡ ತಲೆನೋವು ತಂದಿಟ್ಟಿದ್ದು, ನ್ಯಾಷನಲ್ ಹೈವೇ ಅವೈಜ್ಞಾನಿಕ ಕಾಮಗಾರಿಯಿಂದ ಇಷ್ಟೆಲ್ಲ ಅವಾಂತರಕ್ಕೆ ಕಾರಣವಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಬಹುತೇಕ ಕಡೆ ಹೈವೇ ಕಾಮಗಾರಿಯ ರಸ್ತೆ ಬದಿಯ ಚರಂಡಿ ಸ್ಲಾಬ್ ಕುಸಿತ
ನ್ಯಾಶನಲ್ ಹೈವೇ NH 69 ಕಾಮಗಾರಿಯ ಬಹುತೇಕ ಕಡೆ ಬೈರೇನಹಳ್ಳಿ ಕ್ರಾಸ್, ಅರಸಾಪುರ, ಆರಸಾಪುರ ಲಂಬಾಣಿ ತಂಡ ಸೇರಿದಂತೆ ಆ ರಸ್ತೆಯ ಎರಡು ಬದಿಯ ಒಳಚರಂಡಿಯ ಮೇಲ್ಭಾಗದ ಸಿಮೆಂಟ್ ಚುನಾವಣೆಗಳು ಬಹುತೇಕ ಕಡೆ ಕುಸ್ತಿದ್ದು, ಕಾಮಗಾರಿ ಪೂರ್ಣಗೊಳಿಸಿದ ಮುಂಚೆ ಕಳಪೆ ಕಾಮಗಾರಿ ಪ್ರತಿಯೊಬ್ಬರಿಗೂ ಕಣ್ಣಿಗೆ ರಾರಾಜಿಸುತ್ತಿರುವುದು ಈ ಕಾಮಗಾರಿಯ ದೊಡ್ಡ ಬ್ರಷ್ಟಾಚಾರಕ್ಕೆ ಸಾಕ್ಷಿ ಎನ್ನಬಹುದಾಗಿದೆ ಎಂದು ಕೆಲವು ನಾಗರಿಕರು ಆರೋಪದ ಸುರಿಮಳೆ ಗೆರೆಯುತ್ತಿದ್ದಾರೆ.
ಜಿಕೆ ಕನ್ಸ್ಟ್ರಕ್ಷನ್ ಎಂಬುವರಿಗೆ ಈ ಗುತ್ತಿಗೆ ನೀಡಲಾಗಿದ್ದು, ಕೆಲಸ ಪ್ರಾರಂಭಿಸಿ 2 ವರ್ಷ ಕಳೆದರೂ ಇನ್ನೂ ಪೂರ್ಣಗೊಳಿಸದೆ ಎಣಗಾಡುತ್ತಿದ್ದು, ಒಳಚರಂಡಿ ಕಾಮಗಾರಿ ಗುಣಮಟ್ಟದಿಂದ ಕೂಡಿರದೆ ಕೆಲವು ಕಡೆ ಕುಸಿದ್ರೆ ಇನ್ನೂ ಕೆಲವು ಕಡೆ ಮೇಲ್ಚಾವಣಿ ಕುಸಿದಿದ್ದು, ಇಡೀ ಕಾಮಗಾರಿಯ ಕಳಪೆ ಕಾಮಗಾರಿ ಎಂಬುದಕ್ಕೆ ಇದೇ ಸಾಕ್ಷಿ ಎಂದು ಕೆಲವು ನಾಗರಿಕರು ಕಾಮಗಾರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ನ್ಯಾಷನಲ್ ಹೈವೇ ಕಾಮಗಾರಿಗಳು ಬಹಳ ವೇಗವಾಗಿ ನಡೆಯುವುದು ಸರ್ವೇಸಾಮಾನ್ಯ ಆದರೆ ಈ ಕಾಮಗಾರಿ ಆಮೆ ಗತಿಯಲ್ಲಿ ನಡೆಯುತ್ತಿದ್ದು, ಕೋಟ್ಯಾಂತರ ರುಪಾಯಿ ಅನುದಾನದ ಕಾಮಗಾರಿ ಬಹಳ ಕಳಪೆಯಿಂದ ಹಾಗೂ ಕೆಲವು ಭಾಗಗಳಲ್ಲಿ ಅವೈಜ್ಞಾನಿಕವಾಗಿ ಒಳಚರಂಡಿಗಳು ಪೂರ್ಣಗೊಳಿಸದೆ ಇರುವುದರಿಂದ ಒಳ ಚರಂಡಿಯಲ್ಲಿ ನಿಂತಿರುವ ನೀರು ನಿಂತು ಕಲುಷಿತಗೊಂಡು ಅನೈರ್ಮಲ್ಯ ಸೃಷ್ಟಿಸಿ ಸಾರ್ವಜನಿಕರ ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗುತ್ತಿರುವುದಲ್ಲದೆ ಇಂತಹ ವಿಪರೀತ ಮಳೆ ಬರುವ ಸಂದರ್ಭದಲ್ಲಿ ಬಹಳಷ್ಟು ಮನೆಗಳಿಗೆ ಹೋಗಿ ಅವಾಂತರ ಸೃಷ್ಟಿಸುತ್ತಿರುವುದು ಸಾರ್ವಜನಿಕ ವಲಯದಲ್ಲಿ ಬೇಸರಕ್ಕೆ ಕಾರಣವಾಗಿ ಗುತ್ತಿಗೆದಾರರ ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ನ್ಯಾಷನಲ್ ಹೈವೇ NH 69 ಕಾಮಗಾರಿಯಲ್ಲಿ ಬಹಳಷ್ಟು ಕಳಪೆಯಿಂದ ಕುಡಿದು , ಬಹಳಷ್ಟು ಕಡೆ ಕಾಮಗಾರಿ ಮುಗಿಸಿದ ಎರಡೇ ತಿಂಗಳಲ್ಲಿ ಸ್ಲಾಬ್ ಕುಸಿದಿವೆ, ಒಳಚರಂಡಿ ಕಾಮಗಾರಿ ಪೂರ್ಣಗೊಳಿಸದೆ ಅರ್ಧಕ್ಕೆ ನಿಲ್ಲಿಸಿರುವದರಿಂದ ಮಳೆ ನೀರು ರಸ್ತೆಗೆ ಹರಿದು ತಗ್ಗು ಪ್ರದೇಶಗಳಿಗೆ ನೀರು ನಿಂತು ಅವ್ಯವಸ್ಥೆಗೆ ಕಾರಣವಾಗಿದ್ದು, ಈ ಕಾಮಗಾರಿ ಪೂರ್ಣ ಕಳಪೆಯಿಂದ ಕೂಡಿದ್ದು ಗುತ್ತಿಗೆದಾರರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಕೋಟ್ಯಾಂತರ ಅನುದಾನ ದುರ್ಬಳಕೆಯಾಗಿದ್ದು, ಸರ್ಕಾರಕ್ಕೆ ಗುತ್ತಿಗೆದಾರರಿಂದ ಮರು ಪಾವತಿ ಮಾಡಿಕೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಗುತ್ತಿಗೆದಾರರನ್ನ ಬ್ಲಾಕ್ ಲಿಸ್ಟ್ ಗೆ ಸೇರಿಸಿ
ನ್ಯಾಷನಲ್ ಹೈವೇ ಎನ್ ಎಚ್ 69 ಚತುಸ್ಪದ ರಸ್ತೆ ಕಾಮಗಾರಿಯ ಒಳಚರಂಡಿ ಕಾಮಗಾರಿ ಸೇರಿದಂತೆ ಇತರ ಕಾಮಗಾರಿಗಳು ಕಳಪೆಯಿಂದ ಕೂಡಿದೆ ಹಾಗೂ ಅವೈಜ್ಞಾನಿಕದಿಂದ ಕೂಡಿದೆ, ಜನ ವಾಸಿಸುವ ಒಳಚರಂಡಿ ಕಾಮಗಾರಿಗಳು ಬಹುತೇಕ ಕಡೆ ಕಳಪೆಯಿಂದ ಕೂಡಿದೆ ಒಳಚರಂಡಿ ಮೇಲ್ಭಾಗ ನಿರ್ಮಿಸಲಾಗಿರುವ ಡಕ್ (ಸ್ಲ್ಯಾಬ್) ಬಹುತೇಕ ಕಡೆ ಕುಸಿದಿದ್ದು ಇವರ ಕಳಪೆ ಕಾಮಗಾರಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಸಾರ್ವಜನಿಕರು ಗುತ್ತಿಗೆದಾರನ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದು ಗುತ್ತಿಗೆದಾರನನ್ನ ಬ್ಲಾಕ್ ಲಿಸ್ಟ್ ಗೆ ಸೇರಿಸಬೇಕು ಜೊತೆಗೆ ಕಾಮಗಾರಿ ನಿರ್ವಹಣೆ ಮಾಡುತ್ತಿರುವ ಸೆಕ್ಷನ್ ಇಂಜಿನಿಯರ್, ಎಇಇ ಸೇರಿದಂತೆ ಸಂಬಂಧಪಟ್ಟ ಮೇಲುಉಸ್ತುವಾರಿ ವಹಿಸಿಕೊಂಡಿರುವ ಅಧಿಕಾರಿಗಳಿಂದ ಹಾಗೂ ಗುತ್ತಿಗೆದಾರನಿಂದ ಕಳಪೆ ಕಾಮಗಾರಿ ಹಾಗೂ ಗುಣಮಟ್ಟ ಕಾಮಗಾರಿ ಇಲ್ಲದ ಕಾರಣ ಕಾಮಗಾರಿಯ ಲಾಸ್ ಅಮೌಂಟನ್ನ ಮರುಪಾವತಿ ಮಾಡಿಕೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಬಾಕ್ಸ್ ಬಳಸಿ…
ನ್ಯಾಷನಲ್ ಹೈವೇ ಎನ್ಹೆಚ್ 69 ರಸ್ತೆ ಎರಡು ವರ್ಷ ಕಳೆದಿದೆ, ಎಇಇ ಮಲ್ಲಿಕಾರ್ಜುನ್ ಸಹ ಹಲವು ಬಾರಿ ತಿಳಿಸಲಾಗಿದೆ , ಒಳಚರಂಡಿಯ ಮೇಲ್ಬಾಗದ ಸ್ಲಾಬ್ ಕುಸಿದಿದ್ದು ಅದರ ಮೇಲೆ ಯಾರಾದರೂ ಗ್ರಾಮಸ್ಥರು ನಡೆದರೆ ಕೈಕಾಲು ಮುರಿದುಕೊಳ್ಳುವಂತಹ ಭಯ ಕಾಡುತ್ತಿದ್ದು, ಇವರ ಬೇಜವಾಬ್ದಾರಿ ಉತ್ತರ ಹಾಗೂ ಕಳಪೆ ಕಾಮಗಾರಿ ವಿರುದ್ಧ ಇಲಾಖೆ ತನಿಖೆ ನಡೆಸಬೇಕು ಇವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು
ರಂಗನಾಥ್…
ಅರಸಾಪುರಗ್ರಾಮದ ಮುಖಂಡ.
ನ್ಯಾಷನಲ್ ಹೈವೇ ಕಾಮಗಾರಿ ಕಳೆದ ಎರಡು ವರ್ಷಗಳಿಂದ ನಡೆಯುತ್ತಿದ್ದು ಅವೈಜ್ಞಾನಿಕದಿಂದ ಕುಡಿದೆ ಈ ಕಾಮಗಾರಿಯಿಂದ ಅವಘಡ ಮತ್ತು ಅವಾಂತರ ಸೃಷ್ಟಿಸಿದೆ, ಅನುಕೂಲಕ್ಕಿಂತ ಅನಾನುಕೂಲಗಳು ಜಾಸ್ತಿಯಾಗಿದೆ, ಸ್ವಲ್ಪ ಮಳೆ ಬಂದ್ರು ಸಹ ರಸ್ತೆಯಲ್ಲಿ ಮೊಣಕಾಲುದ್ದ ನೀರು ನಿಲ್ಲುತ್ತವೆ, ಮಳೆ ನೀರು ಮನೆಗಳಿಗೆ ನುಗ್ಗುತ್ತಿವೆ, ಒಳಚರಂಡಿ ಕಾಮಗಾರಿ ಸಮರ್ಪಕವಾಗಿ ವೈಜ್ಞಾನಿಕವಾಗಿ ಪೂರ್ಣಗೊಳಿಸದ ಹಿನ್ನೆಲೆಯಲ್ಲಿ ನಮ್ಮ ಗ್ರಾಮದಲ್ಲಿನ ಚರಂಡಿಯ ನೀರು ಹೊರ ಹರಿಯದೆ ನಿಂತಲ್ಲಿ ನಿಂತು ದುರ್ನಾಥ ಬೀರುತ್ತಿದೆ..
ಕೆಂಚಪ್ಪ .. ಆರಸಾಪುರ ಗ್ರಾಮದ ಮುಖಂಡ.
ನ್ಯಾಷನಲ್ ಹೈವೇ ಎನ್ಹೆಚ್ 69 ಕಾಮಗಾರಿ ಮೇಲ್ನೋಟಕ್ಕೆ ಬಹಳ ಅಂದ ಚಂದದಿಂದ ಕಾಣುತ್ತದೆಯಾದರೂ ಒಳಹೊಕ್ಕು ನೋಡಿದರೆ ಪೂರ್ಣ ಕಳಪೆಯಿಂದ ಕೂಡಿದೆ, ಚರಂಡಿಯ ಮೇಲ್ಭಾಗದ ಸ್ಲಾಬ್ ಕುಸ್ತಿದ್ದು ಯಾರ ಕೈಕಾಲು ಮುರಿಯುತ್ತದೆಯೋ ದೇವರೇ ಬಲ್ಲ, ಬೈರೇನಹಳ್ಳಿಯಿಂದ ಚಿಕ್ಕಳ್ಳಾಪುರದವರೆಗೂ ಇದೆ ಇದೇ ರೀತಿಯ ಕಾಮಗಾರಿ ನಡೆದಿದ್ದು, ಕಾಮಗಾರಿ ಕಳಪೆಯಿಂದ ಕೂಡಿದೆ.
ರಾಜಣ್ಣ … ಅರಸಾಪುರ ಮುಖಂಡ.