ಇತ್ತೀಚಿನ ಸುದ್ದಿರಾಜ್ಯ

ಅಖಿಲ ಕರ್ನಾಟಕ ವಾಲ್ಮೀಕಿನಾಯಕ ಮಹಾಸಭಾದ ಬಳಿಚಕ್ರ ಹೋಬಳಿ ಘಟಕ ಅಧ್ಯಕ್ಷ: ಹಣಮಂತ ನಾಯಕ ನೇಮಕ

ಯಾದಗಿರಿ: ನಗರದ ಹಳೆ ಪ್ರವಾಸಿ ಮಂದಿರದಲ್ಲಿ ನಡೆದ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಯಾದಗಿರಿ ಬಳಿಚಕ್ರ ಹೋಬಳಿ ಘಟಕದ ನೊತನ ಅಧ್ಯಕ್ಷರಾಗಿ ಹಣಮಂತ ನಾಯಕನ್ನು ನೇಮಕಾತಿಯನ್ನು ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಯುವ ಘಟಕ ಜಿಲ್ಲಾಧ್ಯಕ್ಷರಾದ ನರಸಪ್ಪ ನಾಯಕ ಆದೇಶ ಪತ್ರ ನೀಡಿದ್ದರು.

ವಾಲ್ಮೀಕಿ ನಾಯಕ ಸಮುದಾಯದ ಸಂಘಟನೆ ಕಾರ್ಯದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡು ಯುವ ಘಟಕದ ಸಬಲೀಕರಣ, ಸಂಘಟನೆ, ಬಲವರ್ದನೆ ಕಾರ್ಯದಲ್ಲಿ ಸಮರ್ಪಣ ಭಾವದಿಂದ ತೊಡಗಿಸಿಕೊಳ್ಳಬೇಕೆಂದು ಎಂದು ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಯುವ ಘಟಕ ಜಿಲ್ಲಾಧ್ಯಕ್ಷರಾದ ನರಸಪ್ಪ ನಾಯಕ ಸಭೆಯನ್ನು ಉದ್ದೆಶಿಸಿ ಮಾತನಾಡಿದ್ದರು.

ವಾಲ್ಮೀಕಿ ಸಮಾಜವನ್ನು ಅಭಿವೃದ್ಧಿ ಪಡಿಸುವ ಕಾರ್ಯ ಹಾಗೂ ಯುವ ಸಂಘಟನೆಯನ್ನು ಮಾಡಿ ಸಮಾಜದ ಹೇಳಿಕೆಗಾಗಿ ಸದಾ ದುಡಿಯುತ್ತೇನೆ ಹಾಗೂ ಸಮಾಜದಲ್ಲಿ ಆರ್ಥಿಕವಾಗಿ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಹಿಂದುಳಿದವರ ನೊಂದವರ ಪರವಾಗಿ ಅನ್ಯಾಯದ ವಿರುದ್ಧವಾಗಿ ಧ್ವನಿ ಎತ್ತಿ ನ್ಯಾಯುತ್ತಾವಾದ ನ್ಯಾಯವನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯವನ್ನು ನಿರ್ವಹಿಸುತ್ತೇನೆ ಎಂದು ನೂತನವಾಗಿ ಬಳಿಚಕ್ರ ಹೋಬಳಿ ಅಧ್ಯಕ್ಷರಾದ ಎಸ್.ಎಂ. ಹಣಂಮತ ನಾಯಕ ಮಾತನಾಡಿ ಹೇಳಿದರು.

ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ಗೌರವ ಅಧ್ಯಕ್ಷ ಸುಭಾಷ್ ನಾಯಕ ಹೆಡಗಿಮದ್ರ, ಸಿಂಧೊರ ಲಕ್ಷ್ಮಣ ಸಂಘಟನೆಯ ಜಿಲ್ಲಾಧ್ಯಕ್ಷರಾದ ಸಾಬಣ್ಣ ಪರಸು ನಾಯಕ , ತಾಲೂಕ ಗೌರವ ಅಧ್ಯಕ್ಷ ಅಶೋಕ ನಾಯಕ, ತಾಲೂಕ ಅಧ್ಯಕ್ಷ ದೇವಿಂದ್ರ ನಾಯಕ ವರ್ಕನಳಿ, ಉಪಧ್ಯಕ್ಷ ಶರಣು ನಾಯಕ ನಾಗ್ಲಪೂರ, ಬಳಿಚಕ್ರ ಗ್ರಾಮ ಘಟಕದ ಅಧ್ಯಕ್ಷ ಮಹೇಶ ನಾಯಕ ಕೊಂಗಿ , ಶಿವು ನಾಯಕ, ತಿಮ್ಮಣ್ಣ ಪರಸು ನಾಯಕ, ಸಂಗಮೇಶ ಭಿಮನಹಳ್ಳಿ, ಮಲ್ಲಯ್ಯ ಬಳಿಚಕ್ರ, ಆಂಜನೇಯ ನಾಂದ್ವಾರ ಮುಂತದವರು ಇದ್ದರು.

Related Articles

Leave a Reply

Your email address will not be published. Required fields are marked *

Back to top button