ಇತ್ತೀಚಿನ ಸುದ್ದಿರಾಜ್ಯ

ಬಹುದಿನಗಳ ಬೇಡಿಕೆ ನೂತನವಾಗಿ ನ್ಯಾಯಬೆಲೆ‌ ಉಪ ಕೇಂದ್ರ ಉದ್ಘಾಟನೆ ….

ಡಾ ಜಿ ಪರಮೇಶ್ವರ್ ವಿಶೇಷ ಅಧಿಕಾರಿ ನಾಗಯ್ಯ ಚಾಲನೆ…

ಕೊರಟಗೆರೆ:- ಬಹು ವರ್ಷಗಳ ಬೇಡಿಕೆಯಾಗಿದ್ದ ನ್ಯಾಯ ಬೆಲೆ ಅಂಗಡಿ ಉಪ ಕೇಂದ್ರ ಪ್ರಾರಂಭಕ್ಕೆ ಹಲವು ಬಾರಿ ಮನವಿ ಸಲ್ಲಿಸಲಾದ ಸಮಸ್ಯೆಗೆ ಪರಿಹಾರ ದೊರಕಿದ್ದು , ಡಾ. ಜಿ ಪರಮೇಶ್ವರ್ ಅವರ ಆದೇಶದ ಮೇರೆಗೆ ಸ್ವತಹ ಪರಮೇಶ್ವರ್ ವಿಶೇಷ ಅಧಿಕಾರಿ ನಾಗಯ್ಯ ಅವರ ಮುಖಂಡತ್ವದಲ್ಲಿ ಉಪ ಕೇಂದ್ರ ಪ್ರಾರಂಭಿಸುವ ಮೂಲಕ ಬಹು ವರ್ಷಗಳ ಬೇಡಿಕೆ ಈಡೇರಿದಂತಾಗಿದೆ.

ಕೊರಟಗೆರೆ ತಾಲೂಕಿನ ಎಲ್ಲಿರಾಂಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ತಂಗನಹಳ್ಳಿ ಗ್ರಾಮದಲ್ಲಿ ಮಂಗಳವಾರ ನೂತನವಾಗಿ ನ್ಯಾಯಬೆಲೆ ಅಂಗಡಿಯ ಉಪ ಕೇಂದ್ರವನ್ನ ಅಧಿಕೃತವಾಗಿ ಉದ್ಘಾಟಿಸುವ ಮೂಲಕ ಬಿಪಿಎಲ್ ಹಾಗೂ ಅಂತ್ಯೋದಯ ಸೇರಿದಂತೆ ಅಂಗವಿಕಲರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ನೂತನ ಉಪ ಕೇಂದ್ರವನ್ನ ಪ್ರಾರಂಭಿಸಲಾಯಿತು.

ಮೂಲ ನ್ಯಾಯ ಬೆಲೆ ಅಂಗಡಿಯಿಂದ ತಂಗನಹಳ್ಳಿ ಗ್ರಾಮ ಬಹಳಷ್ಟು ದೂರದಲ್ಲಿದ್ದು, ಬಿಪಿಎಲ್ ಹಾಗೂ ಅಂತ್ಯೋದಯ ಕಾಡುದಾರರಿಗೆ ಜೊತೆಗೆ ಅಂಗವಿಕಲ ವೃದ್ಧಾಪ್ಯ ಜನತೆಗೆ ಅನ್ನ ಭಾಗ್ಯ ಯೋಜನೆ ಅಡಿ ಬರುವಂತಹ ದಿನಸಿಗಳನ್ನ ಕೊಂಡೊಯ್ಯಲು ಕಿ.ಮೀ.ಗಟ್ಟಲೆ ಅಲೆಯುವಂತ ಅನಿವಾರ್ಯತೆ ಹೋಗಲಾಡಿಸಲು ಬಹಳಷ್ಟು ಮನವಿಗಳನ್ನು ಸಲ್ಲಿಸಿದರಾದರು ಯಾವುದೇ ಪ್ರಯೋಜನವಾಗದೆ ಬಹಳಷ್ಟು ವರ್ಷಗಳ ಕಾಲ ಸಂಕಷ್ಟ ಅನುಭವಿಸಿದಂತಹ ಜನತೆಗೆ ಉಪ ಕೇಂದ್ರ ಪ್ರಾರಂಭವಾಗಿರುವುದು ಬಹಳ ಸಂತಸ ತಂದಿದೆ ಎಂದು ಬಹಳಷ್ಟು ಸಾರ್ವಜನಿಕರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಡಾ. ಜಿ ಪರಮೇಶ್ವರ್ ಅವರ ವಿಶೇಷ ಅಧಿಕಾರಿ ನಾಗಯ್ಯ ಸ್ವತಃ ಮುಂದೆ ನಿಂತು ಬಡ ಜನತೆಗೆ ಉಪ ಕೇಂದ್ರದಲ್ಲಿ ರೇಷನ್ ಹಂಚುವ ಮೂಲಕ ಜನರೊಂದಿಗೆ ಬೆರೆತು ಹೊಸ ಉಪಕೇಂದ್ರಕ್ಕೆ ಪರಮೇಶ್ವರವರ ಆಶೀರ್ವಾದ ಕಾರಣ ಎನ್ನುವ ಮೂಲಕ ಸಾರ್ವಜನಿಕರ ಕುಂದು ಕೊರತೆ ಸೇರಿದಂತೆ ಯಾವುದೇ ಸಮಸ್ಯೆಗಳಿದ್ದರೂ ನೇರವಾಗಿ ಪರಮೇಶ್ವರ್ ಅಥವಾ ಅವರ ಕಚೇರಿಗೆ ಭೇಟಿ ಮಾಡಿ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿಕೊಳ್ಳಬಹುದು ಗ್ರಾಮೀಣ ಪ್ರದೇಶದ ಜನತೆ ಸರ್ಕಾರದ ಸವಲತ್ತು ಸದ್ಬಳಕೆ ಮಾಡಿಕೊಳ್ಳಬೇಕು ಎಂದರರು.

ಬಾಕ್ಸ್ ಬಳಸಿ..

ಬಿಪಿಎಲ್ ಹಾಗೂ ಅಂತ್ಯೋದಯ ಕಾಡುದಾರರು ಬಹಳ ವರ್ಷಗಳಿಂದ ತಂಗನಹಳ್ಳಿ ಗ್ರಾಮಕ್ಕೆ ಒಂದು ಹೊಸ ನ್ಯಾಯಬೆಲೆ ಅಂಗಡಿಯ ಉಪ ಕೇಂದ್ರ ತೆರೆಯುವ ವಿಚಾರದಲ್ಲಿ ಬಹಳಷ್ಟು ಮನವಿಯನ್ನು ನೀಡಿ ಅಂತಿಮವಾಗಿ ಇಲ್ಲಿಯ ಪರಿಸ್ಥಿತಿಯನ್ನು ಆರಿತು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಜಿ ಪರಮೇಶ್ವರ್ ಆದೇಶದ ಅನ್ವಯ ಉಪ ಕೇಂದ್ರ ಪ್ರಾರಂಭವಾಗಿದ್ದು ಇದರಿಂದ ಬಹಳಷ್ಟು ಜನರಿಗೆ ಉಪಯೋಗವಾಗಲಿದೆ ಇದಕ್ಕೆ ಪರಮೇಶ್ವರ್ ಅವರಿಗೆ ಧನ್ಯವಾದ ಸಲ್ಲಿಸುತ್ತೇವೆ.
ಪ್ರಕಾಶ್ .ಗ್ರಾಮ ಪಂಚಾಯತಿ ಸದಸ್ಯ ತಂಗನಹಳ್ಳಿ.

ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಯೋಜನೆ ಅನ್ನಭಾಗ್ಯಕ್ಕೆ ಸಾರ್ವಜನಿಕರು ಹೆಚ್ಚು ಅಲೆಯುವುದು ಬೇಡ ಎಂಬ ಉದ್ದೇಶದಿಂದ ಕೊರಟಗೆರೆ ಮನೆಮಗ ಡಾ. ಜಿ ಪರಮೇಶ್ವರ್ ಅವರ ಆದೇಶದ ಮೇರೆಗೆ ಸಾರ್ವಜನಿಕರ ಹಿತ ದೃಷ್ಟಿಯಿಂದ ನ್ಯಾಯ ಬೆಲೆ ಅಂಗಡಿ ಉಪ ಕೇಂದ್ರವನ್ನ ಪ್ರಾರಂಭಿಸಲಾಗಿದ್ದು ವೃದ್ದರು ,ಮಹಿಳೆಯರು ಸೇರಿದಂತೆ ಅಸಹಾಯಕ ಜನರು ರೇಷನ್ ಗಾಗಿ ಅಲೆಯುತ್ತಿದ್ದಂತ ಬಹಳಷ್ಟು ಜನರಿಗೆ ಈ ಉಪ ಕೇಂದ್ರದ ಪ್ರಾರಂಭದಿಂದ ಬಹಳಷ್ಟು ಉಪಯೋಗವಾಗಿದ್ದು ಇದನ್ನ ಸದ್ಬಳಕೆ ಮಾಡಿಕೊಳ್ಳಬೇಕು.

ನಾಗಯ್ಯ ಡಾ. ಜಿ ಪರಮೇಶ್ವರ್ ವಿಶೇಷ ಅಧಿಕಾರಿ ತುಮಕೂರು.

ರೇಷನ್ ತರುವ ವಿಚಾರದಲ್ಲಿ ಸಾರ್ವಜನಿಕರಿಗೆ ತುಂಬಾ ಅನಾನುಕೂಲವಾಗುತ್ತಿದ್ದಂತ ಸಂದರ್ಭದಲ್ಲಿ
ಹೊಸದಾಗಿ ನ್ಯಾಯಬೆಲೆ ಅಂಗಡಿಯ ಉಪ ಕೇಂದ್ರ ಪ್ರಾರಂಭಿಸಲಾಗಿರುವುದು ಉತ್ತಮ ಬೆಳವಣಿಗೆಯಾಗಿದ್ದು , 3-4 ಕಿಲೋಮೀಟರ್ ದೂರ ಡಿ ನಾಗೇನಹಳ್ಳಿಗೆ ಹೋಗಿ ರೇಷನ್ ತರಬೇಕಾಯಿತು, ಡಾ. ಜಿ ಪರಮೇಶ್ವರ್ ಅವರ ಮಾರ್ಗದರ್ಶನದಂತೆ ಇಲ್ಲಿ ಉಪ ಕೇಂದ್ರ ಪ್ರಾರಂಭವಾಗಿದ್ದು, ಪರಮೇಶ್ವರ್ ಯಿಂದ ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ನಾವು ನಿರೀಕ್ಷೆ ಮಾಡಲಿದ್ದೇವೆ.

ಚಂದ್ರಶೇಖರ್ .ಅಧ್ಯಕ್ಷರು ಗ್ರಾಮ ಪಂಚಾಯಿತಿ ಎಲೇರಾಂಪುರ

Related Articles

Leave a Reply

Your email address will not be published. Required fields are marked *

Back to top button