ಇತ್ತೀಚಿನ ಸುದ್ದಿದೇಶ

ಕೊಟ್ಟೋನು ಕೋಡಂಗಿ -ಇಸ್ಕೊಂಡವ್ನು ವೀರಭದ್ರ ಮೈಕ್ರೋ ಫೈನಾನ್ಸ್ ನಿಂದ ಸಾಲ ಪಡೆದ ಮಹಿಳೆಯರಿಂದ 35 ಲಕ್ಷ ಕ್ಕೂ ಹೆಚ್ಚು ಹಣ ಪಡೆದು ಮಹಿಳೆ ಪರಾರಿ…..

ಕೊರಟಗೆರೆ:- ಕೊಟ್ಟೋನು ಕೋಡಂಗಿ- ಇಸ್ಕೊಂಡನು ವೀರಭದ್ರ ಎಂಬ ಗಾದೆ ಮಾತಿನಂತೆ ಇಲ್ಲೊಬ್ಬ ಮಹಿಳೆ ಊರಿನ ಹಲವು ಮಹಿಳೆಯರನ್ನ ನಂಬಿಸಿ ಮೈಕ್ರೋ ಫೈನಾನ್ಸ್ ನಲ್ಲಿ ಅವರ ದಾಖಲೆಗಳು ಇಟ್ಟು ಸರಿಸುಮಾರು 35 ಲಕ್ಷಕ್ಕೂ ಹೆಚ್ಚು ಹಣ ಪಡೆದು ಊರು ಬಿಟ್ಟು ಪರಾರಿಯಾಗಿರುವ ಘಟನೆಯೊಂದು ಕೊರಟಗೆರೆ ತಾಲೂಕಿನಲ್ಲಿ ಜರುಗಿದೆ.

ಕೊರಟಗೆರೆ ತಾಲೂಕಿನ ವಡ್ಡಗೆರೆ ಗ್ರಾಮದ‌ ಮಂಜುನಾಥ್ ಎಂಬುವರ ಮಡದಿ ದ್ರಾಕ್ಷಾಯಿಣಿ ಎಂಬುವರು ಅಲ್ಲಿನ ಕೆಲವು ಮಹಿಳೆಯರನ್ನು ನಂಬಿಸಿ ಮೈಕ್ರೋ ಫೈನಾನ್ಸ್ ನಿಂದ ಅವರಿಗೆ ದುಡ್ಡು ಕೊಡಿಸಿದಂತೆ ಕೊಡಿಸಿ ನಂತರ ಅವರಿಂದ ಸರಿ ಸುಮಾರು 35 ಲಕ್ಷಕ್ಕೂ ಹೆಚ್ಚು ಹಣ ಪಡೆದುಕೊಂಡು ಊರು ಬಿಟ್ಟು ಪರಾರಿಯಾಗಿದ್ದು ಹಣ ನೀಡಿದ ಮಹಿಳೆಯರಿಗೆ ತಲೆ ನೋವಾಗಿ ಪರಿಣಮಿಸಿದೆ, ದಿಕ್ಕು ಕಾಣದೆ ದಂಗುಬಡಿದವರಂತೆ ಮಂಕಾಗಿದ್ದಾರೆ.

ಕೊರಟಗೆರೆ ತಾಲೂಕಿನ ಹಲವು ಮೈಕ್ರೋ ಫೈನಾನ್ಸ್ ಗಳಲ್ಲಿ ವಡ್ಡಗೆರೆ ಗ್ರಾಮದ ಹಲವು ಮಹಿಳೆಯರ ದಾಖಲಾತಿಗಳನ್ನು ನೀಡಿ 50‌ ಸಾವಿರ 60 ಸಾವಿರ 1ಲಕ್ಷ ಹೀಗೆ ಹಲವು ಮಹಿಳೆಯರಿಗೆ ಲೋನ್ ಕೊಡಿಸಿ ಕೊಟ್ಟ ಲೋನ್ನಲ್ಲಿ ಅರ್ಧಕ್ಕೂ ಹೆಚ್ಚು ಮೊತ್ತವನ್ನ ವಾಪಸ್ ಪಡೆದು ನೀವು ಮೊದಲು ಕಂತುಗಳನ್ನು ಕಟ್ಟಿ, ಆನಂತರ ನಾನು ನಿಮ್ಮ ಕಂತುಗಳನ್ನ ಕಟ್ಟುತ್ತೇನೆ ಎಂದು ಉಡಾಫೆ ಉತ್ತರ ನೀಡುತ್ತಾ ಹಣ ಕೊಟ್ಟಿದ್ದ ಮಹಿಳೆ ವಿರುದ್ಧವೇ ಕಿತ್ತಾಡಿಕೊಳ್ಳುತ್ತಿದ್ದ ದ್ರಾಕ್ಷಾಯಿಣಿ ಇದ್ದಕ್ಕಿದ್ದಂತೆ ಊರು ತೊರೆದು ಬೇರೆಡೆ ದೊಡ್ಡಬಳ್ಳಾಪುರ ಭಾಗದಲ್ಲಿ ಮನೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿಯಿಂದ ಮಹಿಳೆಯರಿಗೆ ದಿಕ್ಕು ಕಾಣದಂತಾಗಿದ್ದು, ಮೈಕ್ರೋ ಫೈನಾನ್ಸ್ ನವರಿಗೆ ಹಣ ಕಟ್ಟಲಾಗದೆ ಈ ಕಡೆ ಹಣ ಪಡೆದ ಮಹಿಳೆ ಕೈಗೆ ಸಿಗದೇ ಇರುವುದು ಮಹಿಳೆಯರಿಗೆ ದೊಡ್ಡ ತಲೆನೋವುವಾಗಿದ್ದು ನ್ಯಾಯಕ್ಕಾಗಿ ಪೊಲೀಸ್ ಠಾಣಾ ಮೆಟ್ಟಿಲೇರಿದ್ದಾರೆ.

ವಡ್ಡಗೆರೆ ಗ್ರಾಮದ ಹಲವು ಮಹಿಳೆಯರು ಮನೆಯ ಯಜಮಾನರಿಗೆ ತಿಳಿದಂತೆ ಹಾಗೂ ತಿಳಿಯದಂತೆ ಒಂದಷ್ಟು ಜನ ಮೈಕ್ರೋ ಫೈನಾನ್ಸ್ ಸಂಸ್ಥೆಯಲ್ಲಿ ಹಣ ಪಡೆದು ಸಣ್ಣಪುಟ್ಟ ಒಡವೆ ವಸ್ತ್ರ ತೆಗೆದುಕೊಳ್ಳುವ ಆಸೆಯಲ್ಲಿ ಮೈಕ್ರೋ ಫೈನಾನ್ಸ್ ನಲ್ಲಿ ಹಣ ಪಡೆದು ಹಲವಾರು ಕಂತು ಕಟ್ಟುವ ಸಂದರ್ಭದಲ್ಲಿ ಅರ್ಧ ಹಣ ಪಡೆದ ಕೆಲವು ಮಹಿಳೆಯರಿಂದ ಪೂರಾ ಹಣ ಪಡೆದ ಇನ್ನೂ ಕೆಲವು ಮಹಿಳೆಯರಿಂದ ಸಾಲ ಪಡೆದ ಮಹಿಳೆಯರು ದ್ರಾಕ್ಷಾಯಿಣಿ ಹಣ ಪಡೆದು ಊರಿನಿಂದ ಪಲಾಯನ ಮಾಡಿದ್ದು, ಕೆಲವು ದಿನಗಳ ಹಿಂದೆ ರಾತ್ರೋರಾತ್ರಿ ಊರು ಬಿಟ್ಟು ಬೇರೆಡೆ ಸ್ಥಳಾಂತರವಾಗಿರುವುದು ಮಹಿಳೆಯರಿಗೆ ದಿಕ್ಕು ಕಾಣದಂತಾಗಿ, ಕೆಲವರು ತಮ್ಮ ಗಂಡಂದಿರಿಂದ ನೋವು ಪಡೆಯುತ್ತಿದ್ದರೆ ಇನ್ನೂ ಕೆಲವರು ಗಂಡ ಮಕ್ಕಳಿಂದಲೂ ಚಿಮಾರಿ ಹಾಕಿಸಿಕೊಂಡು ಕಂತು ಕಟ್ಟಲಾಗದೆ ಈ ಕಡೆ ಮನೆಯಲ್ಲೂ ಇರಲಾಗದೆ ಮನೆಗೆ ಫೈನಾನ್ಸ್ ನವರು ಮನೆಗೆ ಕಂತಿನ ಹಣ ಕಟ್ಟಿಲ್ಲ ಎಂದು ಹುಡುಕಿಕೊಂಡು ಬಂದಾಗ ಉತ್ತರ ನೀಡಲಾಗದೆ , ಮನೆಯ ಪೋಷಕರಿಗೆ ಉತ್ತರ ನೀಡಲಾಗದೆ ದೊಡ್ಡ ಮಟ್ಟದ ಸಮಸ್ಯೆಗೆ ಸಿಲುಕಿಕೊಂಡು ನೋವು ಅನುಭವಿಸುವಂತಾಗಿದೆ ಎಂದು ಮಹಿಳೆಯರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಸಾಮೂಹಿಕವಾಗಿ ಆತ್ಮಹತ್ಯೆಯ ನಿರ್ಧಾರ

ಮೈಕ್ರೋ ಫೈನಾನ್ಸ್ ನಲ್ಲಿ ಹಣ ಪಡೆದು ಹಣವನ್ನು ಸ್ವಂತಕ್ಕೆ ಬಳಸಿಕೊಳ್ಳದೆ ನಮ್ಮ ದಾಖಲಾತಿ ನೀಡಿ ಹಣ ಪಡೆದು ಬೇರೆ ಯಾರೋ ದ್ರಾಕ್ಷಾಯಿಣಿ ಎಂಬುವರಿಗೆ ಹಣ ಕೊಟ್ಟಿದ್ದು, ಆಕೆ ಈಗ ಊರು ತೊರೆದಿರುವುದು ಬಹಳಷ್ಟು ಮಹಿಳೆಯರಿಗೆ ತಲೆ ನೋವಾಗಿ ಪರಿಣಮಿಸಿದ್ದು, 35 ಲಕ್ಷಕ್ಕೂ ಹೆಚ್ಚು ಮೊತ್ತವನ್ನು ಪಡೆದು ಊರು ಖಾಲಿ ಮಾಡಿರುವುದು ಬಹಳಷ್ಟು ಮಹಿಳೆಯರ ನಿದ್ದೆಗೆಡಿಸಿದ್ದು, ನಾವು ಬೇರೆ ಕಡೆ ಕೈ ಸಾಲ ಮಾಡಿಕೊಂಡಿದ್ದೇವೆ ಈಗ ಮೈಕ್ರೋ ಫೈನಾನ್ಸ್ ನಲ್ಲೂ ಸಾಲ ಮಾಡಿದ್ದೇವೆ, ಮನೆ ಕಟ್ಟಲು ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಹೀಗೆಲ್ಲಾ ಸಾಲ ಮಾಡಿದ್ದೇವೆ ಈಗ ಅವರಿಗೆ ಕೊಡುವುದ ಮೈಕ್ರೋ ಫೈನಾನ್ಸ್ ಗೆ ಕೊಡುವುದ ಗೊತ್ತಾಗ್ತಾ ಇಲ್ಲ, ಯಾರಿಗೂ ಹಣ ಕೊಡಲು ಸಾಧ್ಯವಾಗುತ್ತಿಲ್ಲ, ನಮ್ಮಿಂದ ಹಣ ಪಡೆದ ಮಹಿಳೆ ಊರು ಬಿಟ್ಟು ಖಾಲಿಯಾಗಿದ್ದಾರೆ, ದಯಮಾಡಿ ನಮಗೆ ನ್ಯಾಯ ಕೊಡಿ ಇಲ್ಲವಾದರೆ ನಾವು ಸಾಮೂಹಿಕವಾಗಿ ಈಗ ಹೆಂಗೋ ಎಲ್ಲಾ ಕಡೆ ನೀರು ಹರಿಯುತ್ತಿವೆ ಯಾವುದಾದರೂ ನದಿಗೆ ಹಾರಿ ನಾವೆಲ್ಲರೂ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಮಹಿಳೆಯರು ನೋವು ತೋಡಿಕೊಂಡಿದ್ದಾರೆ.

ಪೊಲೀಸ್ ಠಾಣೆಯ ಮೊರೆ

ಹಣ ಕಳೆದುಕೊಂಡ ಹತ್ತಾರು ಮಹಿಳೆಯರು ಪೊಲೀಸರ ಮೊರೆ ಹೋಗಿದ್ದು, ಮೈಕ್ರೋ ಫೈನಾನ್ಸ್ ನಿಂದ ನಮ್ಮ ದಾಖಲಾತಿಗಳನ್ನ ನೀಡಿ ಹಣ ಪಡೆದು ಬೇರೆಯವರಿಗೆ ಬಡ್ಡಿ ಇಲ್ಲದಂತೆ ಕೈ ಬದಲಿಗೆ ಹಣ ನೀಡಿದ್ದೆವು ಆದರೆ ಆಕೆ ಈಗ 35 ಲಕ್ಷಕ್ಕೂ ಹೆಚ್ಚು ಹಣ ಪಡೆದು ಊರು ಖಾಲಿ ಮಾಡಿರುವುದು ನಮಗೆ ದಿಕ್ಕು ಕಾಣದಂತಾಗಿದ್ದು, ನಿಷ್ಠಾವಂತ ಪೊಲೀಸ್ ಅಧಿಕಾರಿ ಸಿಪಿಐ ಅನಿಲ್ ಹಾಗೂ ಪ್ರಾಮಾಣಿಕ ಹಾಗೂ ಬಡವರ ಪರವಾಗಿ ಕೆಲಸ ಮಾಡುವ ಪಿಎಸ್ಐ ಚೇತನ್ ಗೌಡ ದಯಮಾಡಿ ನಮಗೆ ದ್ರಾಕ್ಷಾಯಿಣಿ ಎಂಬುವರನ್ನು ಠಾಣೆಗೆ ಕರೆಸಿ ದುಡ್ಡು ಮತ್ತೆ ನಮಗೆ ವಾಪಸ್ ಕೊಡಿಸುವ ಮೂಲಕ ನಮಗೆ ನ್ಯಾಯ ದೊರಕಿಸಿಕೊಡಬೇಕು ಇಲ್ಲವಾದರೆ ನಾವು ಹಣ ಕಟ್ಟಲಾಗದೆ ಅನಿವಾರ್ಯವಾಗಿ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಪೊಲೀಸ್ ಮೇಲಾಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.

ವಸಂತು ಗೆ ಕೈ ಕಾಲು ಹಿಡಿಯುತ್ತಿರುವ ಮಹಿಳೆಯರು

ಮೈಕ್ರೋ ಫೈನಾನ್ಸ್ ನಿಂದ ಹಣ ಪಡೆದು ಮೋಸಗೊಳಗಾದ ಹತ್ತಾರು ಮಹಿಳೆಯರು ಊರಿನ ಮುಖಂಡರು ಹಾಗೂ ಗ್ರಾಮ ಪಂಚಾಯತಿ ಸದಸ್ಯರಾದ ವಸಂತು ಎಂಬವರನ್ನು ಕೈಕಾಲು ಹಿಡಿಯುತ್ತಿದ್ದು, ನಮಗೆ ನೆಮ್ಮದಿ ಇಲ್ಲ ರಾತ್ರಿ ವೇಳೆ ನಿದ್ದೆ ಬರುತ್ತಿಲ್ಲ, ಗಂಡ ಮಕ್ಕಳಿಂದ ನಮಗೆ ನೆಮ್ಮದಿ ಇಲ್ಲ ನಮ್ಮಿಂದ ಬದುಕಲು ಸಾಧ್ಯವಾಗುತ್ತಿಲ್ಲ ದಯಮಾಡಿ ನಮಗೆ ಪೊಲೀಸ್ ಠಾಣೆಯಲ್ಲಿ ಆ ಮಹಿಳೆಯನ್ನ ಕರೆಸಿ ನಮಗೆ ದುಡ್ಡು ಕೊಡಿಸಿಕೊಡು ವಸಂತಣ್ಣ ಎಂದು ಅಂಗಲಚುತಿದ್ದು, ಮಹಿಳೆಯರನ್ನ ಸಮಾಧಾನಪಡಿಸಿ ಸ್ವಲ್ಪ ಸಮಾಧಾನ ಪಡ್ಕೊಳ್ರಿ ಆಯಮ್ಮ ಎಲ್ಲಿದ್ದರು ಕರ್ಸಿ ನಿಮಗೆ ನ್ಯಾಯ ಕೊಡಿಸೋಣ ಎಂದು ಸಮಾಧಾನ ಪಡಿಸುತ್ತಿದ್ದು ಕಂಡು ಬಂತು ಒಟ್ಟಾರೆ ಮಹಿಳೆಯರ ಪರಿಸ್ಥಿತಿ ತ್ರಿಶಂಕು ಸ್ಥಿತಿಗೆ ಮುಟ್ಟಿದ್ದು, ಇತ್ತ ಮನೆಯಲ್ಲೂ ನೆಮ್ಮದಿ ಇಲ್ಲ ಇತ್ತ ಹಣವನ್ನು ಕಟ್ಟಕ್ ಆಗುತ್ತಿಲ್ಲ ಎಂಬುವ ಸ್ಥಿತಿಯಲ್ಲಿರುವುದು ಕಂಡು ಬಂತು ..

ಈ ಸಂದರ್ಭದಲ್ಲಿ ಗೀತಮ್ಮ ,ರಾಜಮ್ಮ , ನಾಗಲಕ್ಷ್ಮಿ ರತ್ನಮ್ಮ, ರತ್ನಮ್ಮ, ನಾಗರತ್ನಮ್ಮ ,
ಬಾಡಿಗೆ ಮನೆಯವರಾದ ಮಾಲೀಕರಾದ ರಾಜಮ್ಮನ ಕಡೆಯಿಂದ ಒಂದುವರೆ ಲಕ್ಷ ದುಡ್ಡು ಪಡೆದಿದ್ದು ನಮಗೆ ನ್ಯಾಯ ದೊರಕಿಸಿಕೊಡಲಿ ಎಂದು ಮನವಿ ಮಾಡಿಕೊಂಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button