ಗ್ರಾಮ ಆಡಳಿತ ಅಧಿಕಾರಿಗಳ ಬೇಡಿಕೆ ಈಡೇರಿಕೆಗೆ ಮುಷ್ಕರ

ಕೊರಟಗೆರೆ:- ಸರ್ಕಾರವು ಗ್ರಾಮ ಆಡಳಿತ ಅಧಿಕಾರಿಗಳಿಗೆ ಒಂದೇ ಭಾರಿ ಹತ್ತು ಹಲವಾರು ಆಪ್ ಗಳನ್ನು ನೀಡಿ ಕಂದಾಯ ಇಲಾಖೆ ಕೆಲಸದ ಜೊತೆಗೆ ಬೇರೆ ಇಲಾಖೆಗಳ ಕೆಲಸಗಳನ್ನು ಮಾಡುವಂತೆ ಮಾಡಿ ಒಂದೇ ಬಾರಿ ಪ್ರಗತಿ ಕೇಳಿ ರಜಾ ದಿನಗಳಲ್ಲೂ ಕೆಲಸ ಮಾಡಿಸಿ ರಾತ್ರಿ ವೇಳೆಯಲ್ಲೂ ಆನ್‍ಲೈನ್ ಸಭೆ ಮಾಡಿ ಅನಗ್ಯತವಾಗಿ ಕೆಲವರನ್ನು ಅಮಾನತ್ತು ಗೊಳಿಸಿದ್ದು ಇದರಿಂದ ನಮಗೆ ಆಗುತ್ತಿರುವ ಮಾನಸಿಕ ಒತ್ತಡ ಕಿನ್ನತೆ ಕಷ್ಟಗಳನ್ನು ತಪ್ಪಿಸುವಂತೆ ಸರ್ಕಾರವನ್ನು ಒತ್ತಾಯಿಸಿ ಅನಿರ್ದಿಷ್ಟ ಮುಷ್ಕರ ನಡೆಸುತ್ತಿದ್ದೇವೆ ಎಂದು ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ಕೊರಟಗೆರೆ ತಾಲ್ಲೂಕು ಅದ್ಯಕ್ಷ ಬಸವರಾಜು ತಿಳಿಸಿದರು.
ಅವರು ಕೊರಟಗೆರೆ ತಾಲ್ಲೂಕು ಕಛೇರಿ ಆವರಣದಲ್ಲಿ ತಾಲ್ಲೂಕು ಗ್ರಾಮ ಆಡಳಿತ ಅಧಿಕಾರಿಗಳ ಬೇಡಿಕೆ ಈಡೇರಿಕೆ ಮುಷ್ಕರದಲ್ಲಿ ಮಾತನಾಡಿ ಸರ್ಕಾರವು ನಮ್ಮ ಮೇಲೆ ವಿವಿಧ ಆಪ್‍ಗಳ ಕೆಲಸ ನೀಡಿ ಅವುಗಳನ್ನು ಬಳಕೆ ಮಾಡಲು ಮೂಲಭೂತ ಸೌಕರ್ಯಗಳನ್ನು ನೀಡಿಲ್ಲ, ಗ್ರಾಮಾಧಿಕಾರಿಗಳು 30 ವರ್ಷಗಳ ಸೇವೆ ಸಲ್ಲಿಸಿದರೂ ಪದೋನ್ನತಿ ಇಲ್ಲ, ಸರ್ಕಾರದ ರೂಲ್ 6 ರ ಅನ್ವಯದ ಮೂರು ವರ್ಷದ ಪತಿಪತ್ನಿ ಅಂತರ ಜಿಲ್ಲಾ ವರ್ಗಾವಣೆ ನಿಲ್ಲಿಸಿದ್ದಾರೆ. ಗ್ರಾಮಾಡಳಿತ ಅಧಿಕಾರಿಗಳಿಗೆ ಕಚೇರಿ ಇಲ್ಲ ನಮ್ಮ ತಾಲ್ಲೂಕು ಸೇರಿದಂತೆ ರಾಜ್ಯದಲ್ಲಿ ಕಂದಾಯ ಆಡಳಿತಾಧಿಕಾರಿಗಳ ಹುದ್ದೆಗಳು ಸಾಕಷ್ಟು ಇದ್ದು ಒಬ್ಬ ಅಧಿಕಾರಿ ಮೂರು ನಾಲ್ಕು ಕಂದಾಯ ವೃತ್ತಗಳ ಹೆಚ್ಚವರಿ ಕೆಲಸ ಮಾಡುತ್ತಿದ್ದಾರೆ ಕೂಡಲೇ ಸರ್ಕಾರ ಇದನ್ನು ಪರಿಹರಿಸಬೇಕು ಎಂದರು.
ಗ್ರಾಮ ಆಡಳಿತಧಿಕಾರಿ ಭಾಗ್ಯಮ್ಮ ಮಾತನಾಡಿ ನಾನು ಎಸ್.ಎಸ್.ಎಲ್,ಸಿ ಅರ್ಹತೆ ಮೇಲೆ ಉದ್ಯೋಗಕ್ಕೆ ಸೇರಿ ಹಲವು ವರ್ಷಗಳಿಂದ ಸೇವೆ ಮಾಡುತ್ತಿದ್ದು ಮೊಬೈಲ್ ಅಪ್ ಹೊಸದಾಗಿದ್ದು ದಿನವೆಲ್ಲಾ ಕಳೆದು ಹೋಗುತ್ತಿದೆ ಪಹಣಿ ಅಧಾರ್ ಲಿಂಕ್ ರೈತರು ಹಲವರು ಮೃತರಾಗಿದ್ದರೆ ಹಲವರು ಸರಿಯಾಗಿ ಸ್ಪಂದಿಸುತ್ತಿಲ್ಲ ಅಧಿಕಾರಿಗಳು ನಮ್ಮ ಮೇಲೆ ಒತ್ತಡ ಹಾಕಿದರೆ ಹೇಗೆ ಎಂದರು, ಗ್ರಾಮಾಧಿಕಾರಿ ಹಾರಿಕಾ ಮಾತನಾಡಿ ಜಿಲ್ಲಾ ವರ್ಗವಣೆ ನಿಲ್ಲಿಸಿರುವುದರಿಂದ ನಾವುಗಳು ನಮ್ಮ ತಂದೆ ತಾಯಿ ಕುಟುಂಬದಿಂದ ದೂರ ಉಳಿದು ವೇದನೆಯಾಗಿದೆ ಎಂದರು, ಗ್ರಾಮಾಧಿಕಾರಿ ದೀಪಿಕಾ ಮಾತನಾಡಿ ನಾವುಗಳು ಸರ್ಕಾರ ಜಾಗ ಗುರುತಿಸಲು ಮೋಬೈಲ್ ಹಿಡಿದು ಗ್ರಾಮಗಳ ಹೊರಗೆ ಬೆಟ್ಟ, ಗುಡ್ಡ, ಹಳ್ಳ, ಕಾಡುಗಳು ಸೇರಿದಂತೆ ಹಲವು ಜಾಗಗಳಿಗೆ ಹೋಗಬೇಕು ಈ ಕೆಲಸದಲ್ಲಿ ನಮಗೆ ರಕ್ಷಣೆ ಇರುವುದಿಲ್ಲ, ಪ್ರಾಣಿ ಹಾವುಗಳ ದಾಳಿಗಳ ಭಯ, ಈ ಅಪ್ ಗಳಿಂದ ರಾತ್ರಿ ವೇಳೆ ಗೂಗಲ್ ಸಭೆ, ತಾಲ್ಲೂಕು ಕಛೇರಿಯಲ್ಲಿ ಸಭೆ ನಡೆದು ನಾವು ಮನೆಗೆ ಹೋಗುವುದರಲ್ಲಿ ತಡ ರಾತ್ರಿಯಾಗುತ್ತಿದ್ದು ಇದರಿಂದ ಕುಟುಂಬದಲ್ಲಿ ಕಿರಿಕಿರಿ ನಮ್ಮ ಮಕ್ಕಳನ್ನು ನೋಡಿಕೋಳ್ಳದ ಸ್ಥಿತಿ ಉಂಟಾಗಿದ್ದು ಸರ್ಕಾರವು ಹೆಣ್ಣು ಮಕ್ಕಳನ್ನು ಈ ಸಂಕಟದಿಂದ ಪಾರು ಮಾಡಬೇಕಿದೆ ಎಂದರು.
ಗ್ರಾಮ ಆಡಳಿತಾಧಿಕಾರಿಗಳ ಮುಷ್ಕರಕ್ಕೆ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅದ್ಯಕ್ಷ ರುದ್ರೇಶ್, ಸಂಘದ ಪದಾಧಿಕಾರಿಗಳು, ಶಿಕ್ಷಕರು ಬಂದು ಬೆಂಬಲ ವ್ಯಕ್ತಪಡಿಸಿದರು.
ಮುಷ್ಕರದಲ್ಲಿ ಗ್ರಾಮ ಆಡಳಿತಾಧಿಕಾರಿಗಳಾದ ರಮೇಶ್, ಸಲ್ಮಾನ್, ಮಂಜುನಾಥ್, ಗುರುಶಂಕರ್, ಅನಂದ್ , ಪವನ್, ಸಬೀಹಾ ಭಾನು, ಕುಮಾರಿ, ಭವ್ಯ, ಆಶಾ ರಾಣಿ ಸೇರಿದಂತೆ ಹಲವರು ಹಾಜರಿದ್ದರು.