ಬಂಡೀಪುರ ಸಫಾರಿಯಲ್ಲಿ ಹುಲಿ ಕಂಡು ಬೆರಗಾದ ಬಿಗ್ ಬಾಸ್ ಸಂಗೀತಾ ಶೃಂಗೇರಿ

ಗುಂಡ್ಲುಪೇಟೆ:ಬಿಗ್ ಬಾಸ್ ಖ್ಯಾತಿಯ ನಟಿ ಸಂಗೀತಾ ತುಂಬಾನೆ ಖುಷಿಯಲ್ಲಿದ್ದಾರೆ. ಇವರ ಖುಷಿಗೆ ಬೇರೆ ಏನೋ ಕಾರಣ ಇಲ್ಲ. ಈಗಾಗಲೇ ಹೇಳಿದ ಹುಲಿ ಕಂಡ ಖುಷಿ ಇವರ ಮನದಲ್ಲಿಯೇ ಇದೆ. ಅದನ್ನ ಎಲ್ಲರಿಗೂ ತೋರಿಸೋಕೆ ಆಗೋದಿಲ್ಲ. ಆದರೆ ಅವರೇ ಕ್ಯಾಪ್ಚರ್ ಮಾಡಿರೋ ಹುಲಿಯ ದೃಶ್ಯವನ್ನ ಎಲ್ಲರೊಟ್ಟಿಗೆ ಹಂಚಿಕೊಂಡು ಮತ್ತಷ್ಟು ಹ್ಯಾಪಿ ಹ್ಯಾಪಿ ಫೀಲ್ ಆಗಿದ್ದಾರೆ.

ಬಂಡಿಪುರದಲ್ಲಿ ಸಂಗೀತಾ ಶೃಂಗೇರಿ ಸಫಾರಿ ಹೋಗಿದ್ದರು. ಕೈಯಲ್ಲಿ ಒಂದು ದೊಡ್ಡ ಕ್ಯಾಮರಾ ಹಿಡಿದು ಕೊಂಡು ಹೋಗಿದ್ದಾರೆ. ಈ ಕ್ಯಾಮರಾದಲ್ಲಿ ತಮಗೆ ಇಷ್ಟವಾಗೋ ಎಲ್ಲ ದೃಶ್ಯಗಳನ್ನ ಕ್ಯಾಪ್ಚರ್ ಮಾಡಿದ್ದಾರೆ. ಆದರೆ ಹುಲಿ ಕಂಡಾಗ ಅದನ್ನ ಹೆಚ್ಚು ಕಡಿಮೆ ಒಂದು ಗಂಟೆ ನೋಡಿದ್ದಾರೆ. ಹುಲಿಯ ಪ್ರತಿ ಚಲನವಲನ ಕಂಡು ಬೆರಗಾಗಿದ್ದಾರೆ. ಅದನ್ನ ಅಷ್ಟೇ ಪ್ರೀತಿಯಿಂದಲೇ ಸೆರೆಹಿಡಿದಿದ್ದಾರೆ
ಹುಲಿಯನ್ನ ಮೃಗಾಲಯದಲ್ಲಿಯೇ ಹೆಚ್ಚಾಗಿ ನೋಡಿರುತ್ತೇವೆ. ಆದರೆ ಕಾಡಿನಲ್ಲಿ ನೋಡೋದು ಬಹುತೇಕ ಕಡಿಮೇನೆ ನೋಡಿ. ಆದರೆ ಬಂಡಿಪುರ ಅರಣ್ಯದ ಸಾಫಾರಿಯಲ್ಲಿ ಸಂಗೀತಾ ಶೃಂಗೇರಿ ಹುಲಿಯನ್ನ ಕಂಡಿದ್ದಾರೆ. ಅದನ್ನ ಕಂಡು ತುಂಬಾನೆ ಖುಷಿಪಟ್ಟಿದ್ದಾರೆ. ಆ ಒಂದು ಅನುಭವವನ್ನ ಹೀಗೆ ಬಣ್ಣಿಸಿದ್ದಾರೆ.
ಹುಲಿಯನ್ನ ನೋಡಿದ ಬಳಿಕ ಸಂಗೀತಾ ಶೃಂಗೇರಿ ಈ ರೀತಿ ಬರೆದು ಕೊಂಡಿದ್ದಾರೆ. ತುಂಬಾನೆ ಅದ್ಭುತ ಕ್ಷಣ ಇದಾಗಿದೆ. ಒಂದು ಗಂಟೆಗೂ ಹೆಚ್ಚು ಸಮಯ ಹುಲಿಯನ್ನ ನೋಡಿರೋದು ತುಂಬಾನೆ ಆನಂದ ಕೊಟ್ಟಿದೆ. ಇದು ನಿಜಕ್ಕೂ ಖುಷಿಯ ಕ್ಷಣ ಅಂತಲೇ ಬರೆದುಕೊಂಡಿದ್ದಾರೆ. ಇದಾದ್ಮೇಲೆ ಬಿಗ್ ಬಾಸ್ ಮನೆಯಲ್ಲಿ ಅಬ್ಬರಿಸಿದರು. ಇಡೀ ನಾಡಿನ ಜನರ ಫೇವರಿಟ್ ಕೂಡ ಆದ್ರು. ಅಲ್ಲಿಂದ ಬಂದ್ಮೇಲೆ ಸಂಗೀತಾ ಶೃಂಗೇರಿ ಅಭಿನಯದ ಮಾರಿಗೋಲ್ಡ್ ಸಿನಿಮಾ ರಿಲೀಸ್ ಆಯಿತು. ಒಳ್ಳೆ ರೆಸ್ಪಾನ್ಸ್ ಕೂಡ ಪಡೆದುಕೊಂಡಿದೆ. ಇನ್ನುಳಿದಂತೆ ಬಂಡಿಪುರದಲ್ಲಿ ಸಫಾರಿ ಮಾಡಿಕೊಂಡು ಸಂಗೀತಾ ಶೃಂಗೇರಿ ಪ್ರತಿ ಕ್ಷಣವನ್ನು ಎಂಜಾಯ್ ಮಾಡಿದ್ದಾರೆ