ಪಲ್ಸ್ ಪೋಲಿಯೋ ಪೂರ್ವಭಾವಿ ಸಭೆ
ಆಲೂರು ತಾಲೂಕು ಕಚೇರಿಯಲ್ಲಿ ಆಯೋಜಿಸಲಾಗಿದ್ದ ಪಲ್ಸ್ ಪೋಲಿಯೋ ಪೂರ್ವಬಾವಿ ಸಭೆಯಲ್ಲಿ ತಾಲೂಕು ಆರೋಗ್ಯ ಅಧಿಕಾರಿ ಡಾಕ್ಟರ್ ನಿಸಾರ್ ಫಾತಿಮಾ ಅವರು ಸಭೆಯಲ್ಲಿ ಮಾತನಾಡುತ್ತಾ ಪ್ರತಿಯೊಂದು ಮಗುವಿಗೂ ಪಲ್ಸ್ ಪೋಲಿಯೋ ಲಸಿಕೆ ಹಾಕಿಸಲು ಪೋಷಕರು ತಪ್ಪದೆ ಸಹಕರಿಸಬೇಕು 0.5ವರ್ಷದ 6598ಮಕ್ಕಳು ಇದ್ದಾರೆ ತಾಲೂಕಿನಲ್ಲಿ ಒಟ್ಟು ಮನೆಗಳು 21736, ಜನ ವಸತಿ ಪ್ರದೇಶ 7737ಹಾಗೂ 179ಪ್ರದೇಶಗಳನ್ನು ಹೊಡಿದ್ದೆ ಪಟ್ಟಣ್ಣದಲ್ಲಿ 4ಬೂತು ಗ್ರಾಮೀಣದಲಿ 42ಬೂತುಗಳನ್ನು ಹಾಗೂ 4ಶಾಲೆಗಳಲ್ಲಿ 184 ಪಲ್ಸ್ ಪೋಲಿಯೋ ಲಸಿಕ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ.
ಅದೇ ರೀತಿ ಆಲೂರು ತಾಲೂಕಿನಲ್ಲಿ ಒಟ್ಟು 85668 ಜನಸಂಖ್ಯೆ ಹೊಂದಿದೆ 2553 ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ಹಾಕುವ ಗುರಿ ಹೊಂದಿದೆ ಎಂದು ಸಭೆಯಲ್ಲಿ ತಿಳಿಸಿದರು.
ಇದೇ ಸಂದರ್ಭದಲ್ಲಿ ತಾಸಿಲ್ದಾರ್ ನಂದಕುಮಾರ್, ನರೇಗಾ ಕೇಶವಮೂರ್ತಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕರು ರಮೇಶ್, ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಸ್ಟೀಫನ್ ಪ್ರಕಾಶ್, ಆರೋಗ್ಯ ಸಿಬ್ಬಂದಿ ಸತೀಶ್ ಮತ್ತಿತ್ತರು ಉಪಸ್ಥಿತರಿದ್ದರು.