75ನೇ ವರ್ಷದ ಅಮೃತ ಮಹೋತ್ಸವದ ಪ್ರಯುಕ್ತ ಸಂವಿಧಾನ ಜಾಥಾ ಕಾರ್ಯಕ್ರಮ.
ಮಾಲೂರು: ಸಂವಿಧಾನದ ಪಿತಾಮಹಾ ಡಾ. ಬಿ.ಆರ್ ಅಂಬೇಡ್ಕರ್ ಅವರ ಆಶಯದಂತೆ ಪ್ರತಿಯೊಬ್ಬರೂ ಶಿಕ್ಷಣವನ್ನು ಪಡೆದು ವಿದ್ಯಾವಂತರಾಗಬೇಕು ಎಂದು ತಹಶೀಲ್ದಾರ್ ಕೆ.ರಮೇಶ್ ಸಾರ್ವಜನಿಕರಿಗೆ ಕರೆ ನೀಡಿದರು.
ಪಟ್ಟಣದ ಬಸ್ ನಿಲ್ದಾಣದ ಡಾ.ಅಂಬೇಡ್ಕರ್ ಉದ್ಯಾನವನದಲ್ಲಿ ಸಮಾಜ ಕಲ್ಯಾಣ ಇಲಾಖೆ, ತಾಲ್ಲೂಕು ಆಡಳಿತ, ಪುರಸಭೆ, ವತಿಯಿಂದ ಹಮ್ಮಿಕೊಂಡಿದ್ದ 75 ನೇ ವರ್ಷದ ಸಂವಿಧಾನ ಜಾಥಾ ರಥ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಜಾಥಾಕ್ಕೆ ತಮಟೆ ಹೊಡೆಯುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಸಂವಿಧಾನ ಜಾರಿಯಾದ 75ನೇ ವರ್ಷದ ಅಮೃತ ಮಹೋತ್ಸವದ ಪ್ರಯುಕ್ತ ರಾಜ್ಯ ಸರ್ಕಾರ, ಸಂವಿಧಾನ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಂಡು ನಾಡಿನ ಜನತೆಯಲ್ಲಿ ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದು, ಇದರ ಮಹತ್ವವನ್ನು ಪ್ರತಿಯೊಬ್ಬ ನಾಗರೀಕರೂ ಅರಿಯಬೇಕಾಗಿದೆ.
ರಾಷ್ಟ್ರ ಮತ್ತು ನಾಡ ಹಬ್ಬಗಳಂತೆ ಇಂದು ರಾಜ್ಯದ ಪ್ರತಿ ಗ್ರಾಮಗಳಲ್ಲಿಯೂ ಸಂವಿಧಾನ ಹಬ್ಬವನ್ನು ಸಂವಿಧಾನ ಜಾಗೃತಿ ಜಾಥಾದ ಮೂಲಕ ಆಚರಿಸಲಾಗುತ್ತಿದೆ ಎಂದು ಹೇಳಿದರು.
ಇದಕ್ಕೂ ಮೊದಲು ಸಂವಿಧಾನ ಪ್ರಸ್ತಾವನೆಯನ್ನು ಶಾಲಾ ಮಕ್ಕಳು ಮತ್ತು ಜನ ಪ್ರತಿನಿಧಿಗಳು ಹಾಗೂ ಸರ್ಕಾರಿ ಸಿಬ್ಬಂದಿಗಳು, ಸಾರ್ವಜನಿಕರು ಸೇರಿದಂತೆ ಎಲ್ಲರಿಗೂ ಸಂವಿಧಾನ ಪೀಠಿಕೆ ಪ್ರಮಾಣ ವಚನ ಬೋಧಿಸಿದರು.
ಈ ಸಂದರ್ಭದಲ್ಲಿ ಸಮಾಜಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ವಿ.ಶಿವಕುಮಾರ್, ಪುರಸಭಾ ಮುಖ್ಯಾಧಿಕಾರಿ ಪ್ರದೀಪ್, ಬಿಇಒ ಚಂದ್ರಕಲಾ, ಪುರಸಭಾ ಸದಸ್ಯರಾದ ಎನ್.ವಿ.ಮುರಳೀಧರ್, ಭಾರತಮ್ಮ ಶಂಕರ್, ದರಖಾಸ್ತು ಸಮಿತಿ ಸದಸ್ಯ ನಾಗಪುರ ನವೀನ್, ದಮನಿತರ ಸಂರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ ಸಂತೋಷ್, ದಲಿತ ನಾಗರೀಕರ ಸಮಿತಿ ರಾಜ್ಯಾಧ್ಯಕ್ಷ ಕೋಡೂರುಗೋಪಾಲ್, ದಸಂಸ ತಾಲ್ಲೂಕು ಅಧ್ಯಕ್ಷ ಎಸ್.ಎಂ.ವೆಂಕಟೇಶ್, ಆಟೋ ಶ್ರೀನಿವಾಸ್, ಅಲಂಬಾಡಿ ಅಶೋಕ್, ಸೊಣ್ಣೂರು ಗೋವಿಂದ್, ಮುನಿರಾಜು, ಪುರಸಭಾ ಅಧಿಕಾರಿಗಾಳದ ಸಿಡಿಮಂಜುನಾಥ್, ಶ್ರೀನಿವಾಸ್, ವೆಂಕಟೇಶ್, ಸಮಾಜಕಲ್ಯಾಣ ಇಲಾಖೆ ಎಲ್.ಬಾಬು, ವಿದ್ಯಾರ್ಥಿ ನಿಲಯಗಳ ಮೇಲ್ವಿಚಾರಕರಾದ ಕೆ.ಅಶ್ವಥಪ್ಪ, ಭಾರತಮ್ಮ, ಲೋಕೇಶ್, ಸುಹಾಸ್ ಸೇರಿದಂತೆ ಹಲವಾರು ಮುಖಂಡರು, ಅಧಿಕಾರಿಗಳು, ವಿಧ್ಯಾರ್ಥಿಗಳು ಹಾಜರಿದ್ದರು.