ಸರ್ವಜ್ಞ ವಿದ್ಯಾಪೀಠದಲ್ಲಿ ಸಂತ ಕವಿ ಸರ್ವಜ್ಞ ಜಯಂತಿ ಆಚರಣೆ
ಮುಂಜಾನೆ ವಾರ್ತೆ ಸುದ್ದಿ ತಾಳಿಕೋಟೆ: -ಪಟ್ಟಣದ ಸರ್ವಜ್ಞ ವಿದ್ಯಾಪೀಠ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಸಂತ ಕವಿ ಸರ್ವಜ್ಞನವರ ಜಯಂತಿಯನ್ನು ಮಂಗಳವಾರ ಆಚರಿಸಲಾಯಿತು.
ಸಂಸ್ಥಾಪಕ ಅಧ್ಯಕ್ಷ ಸಿದ್ದನಗೌಡ ಬ ಮಂಗಳೂರ ರವರು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ, 16ನೆಯ ಶತಮಾನದಲ್ಲಿ ಜೀವಿಸಿದ್ದ ವಾಸ್ತವವಾದಿ ಹಾಗೂ ತತ್ವಜ್ಞಾನಿಯಾಗಿದ್ದರು. ಇವರು ತ್ರಿಪದಿಯಲ್ಲಿ ತಾವು ಕಂಡ ಲೋಕಜ್ಞಾನವನ್ನು ಬರೆದಿಟ್ಟು ಜನರ ಜ್ಞಾನ ವಿಸ್ತರಿಸುವ ಕೆಲಸ ಮಾಡಿದರು ಎಂದರು.
ಕಾರ್ಯಕ್ರಮದಲ್ಲಿ ಮುಖ್ಯಶಿಕ್ಷಕ ಸಂತೋಷ ಪವಾರ ಹಾಗೂ ಶಿಕ್ಷಕರುಗಳಾದ ರಾಜು ಜವಳಗೇರಿ, ಬಸವರಾಜ ಚಳ್ಳಗಿ, ಶಾಂತಗೌಡ ಬಿರಾದಾರ, ರಸುಲಸಾ ತುರಕನಗೇರಿ, ಬಸವರಾಜ ಸವದತ್ತಿ, ಸಿದ್ದನಗೌಡ ಮುದ್ನೂರ, ರವಿಕುಮಾರ ಮಲ್ಲಾಬಾದಿ, ಲಕ್ಷ್ಮೀ ಚುಂಚುರ, ಗಿರೀಶ ಎಚ್, ಭೀಮನಗೌಡ ಸಾಸನೂರ, ಸಂಗಮೇಶ ಬಿರಾದಾರ, ರೂಪಾ ಪಾಟೀಲ, ಮಿನಾಕ್ಷಿ ರಜಪೂತ, ರೂಪಾ ಬಿರಾದಾರ, ಶಿವಲೀಲಾ ಚುಂಚುರ, ಸಂಗೀತಾ ಬಿರಾದಾರ, ಭಾಗ್ಯಶ್ರೀ ಗಿರಿನಿವಾಸ, ಅಂಬೂಜಾ ಹಜೇರಿ, ಜ್ಯೋತಿ ನಾಯ್ಕ, ಜೆಸಮೀನ ಆಲ್ದಾಳ, ವಿದ್ಯಾಶ್ರೀ ಗಿರಿನಿವಾಸ, ಶರಣಗೌಡ ಕಾಚಾಪುರ, ಬಸವರಾಜ ಕೊಣ್ಣೂರ, ಜಯಶ್ರೀ ಮಕಾಸಿ, ರೇಷ್ಮಾ ನಧಾಪ್, ಮುಬಿನ ಮುರಾಳ, ಮೇಘಾ ಬಲಕಲ್ಲ, ನಾಗರತ್ನ ಮೈಲೇಶ್ವರ ಇತರರಿದ್ದರು.