ಸಂವಿಧಾನ ಜಾಗೃತಿ ಜಾತಾ ಸಿದ್ಧತಾ ಸಭೆ ಇಂದು(ಫೆ.12.
ಮುಂಜಾನೆ ವಾರ್ತೆ ಸುದ್ದಿ ತಾಳಿಕೋಟಿ. ಭಾರತದ ಸಂವಿಧಾನದ ಆಶಯ ಮತ್ತು ಅದರ ಮೌಲ್ಯಗಳ ಕುರಿತು ಜನಸಾಮಾನ್ಯರಿಗೆ ಅರಿವು ಮೂಡಿಸುವ ಆಶಯದಿಂದ ನಡೆಸಲಾಗುತ್ತಿರುವ ಸಂವಿಧಾನ ಜಾಗೃತಿ ಜಾತಾವು ಫೆ. 19 ರಿಂದ ತಾಲೂಕಿನಲ್ಲಿ ಸಂಚರಿಸಲಿದ್ದು ಸದರಿ ಕಾರ್ಯಕ್ರಮದ ರೂಪರೇಷೆಗಳನ್ನು ಸಿದ್ಧಪಡಿಸಲು ಇಂದು( ಫೆ.12) ಪೂರ್ವಭಾವಿ ಸಿದ್ಧತಾ ಸಭೆಯನ್ನು ಕರೆಯಲಾಗಿದೆ. ಮುಂಜಾನೆ 11:00 ಘಂಟೆಗೆ ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ನಡೆಯಲಿರುವ ಈ ಸಭೆಯ ಅಧ್ಯಕ್ಷತೆಯನ್ನು ತಹಸಿಲ್ದಾರ ಶ್ರೀಮತಿ ಕೀರ್ತಿ ಚಾಲಕ್ ವಹಿಸುವರು. ಸಂವಿಧಾನ ಜಾಗೃತಿ ಜಾತಾದ ಸ್ತಬ್ಧ ಚಿತ್ರಗಳನ್ನು ಹೊತ್ತ ರಥವು ತಾಳಿಕೋಟಿ ಪಟ್ಟಣ ಹಾಗೂ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಫೆ. 19 ರಿಂದ 22 ರವರೆಗೆ ಸಂಚರಿಸಲಿದ್ದು ಕಾರ್ಯಕ್ರಮದ ಕುರಿತು ಚರ್ಚಿಸಿ ನಿರ್ಧಾರಗಳನ್ನು ಈ ಸಭೆಯಲ್ಲಿ ತೆಗೆದುಕೊಳ್ಳಲಾಗುವುದು ಕಾರಣ ತಾಲೂಕ ಮಟ್ಟದ ಎಲ್ಲ ಅಧಿಕಾರಿಗಳು ಕಡ್ಡಾಯವಾಗಿ ಸಭೆಗೆ ಹಾಜರಿರಬೇಕು ಜೊತೆಗೆ ಪಟ್ಟಣದ ದಲಿತಪರ .ಕನ್ನಡಪರ ಸಂಘ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಪಟ್ಟಣದ ಗಣ್ಯರು ಸಭೆಯಲ್ಲಿ ಭಾಗವಹಿಸಬೇಕೆಂದು ತಹಶೀಲ್ದಾರ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.
ವರದಿ ಸುನೀಲ್ ಎಲ್ ತಳವಾರ ಮುಂಜಾನೆ ವಾರ್ತೆ ತಾಳಿಕೋಟಿ.