ಇತ್ತೀಚಿನ ಸುದ್ದಿರಾಜ್ಯ

ಕಾಂಗ್ರೆಸ್‌ ಶಾಸಕ ರವಿ ಗಣಿಗ ಫ್ಲೆಕ್ಸ್‌ ಹರಿದು ಛಿದ್ರಗೊಳಿಸಿದ ಜೆಡಿಎಸ್, ಬಿಜೆಪಿ ಕಾರ್ಯಕರ್ತರು, ಲಾಠಿ ಚಾರ್ಜ್

ಮಂಡ್ಯ, (ಜನವರಿ 29): ಮಂಡ್ಯದ ಕೆರಗೋಡುವಿನಲ್ಲಿ ಹನುಮ ಧ್ವಜ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಮಂಡ್ಯದ ಕಾಂಗ್ರೆಸ್‌ ಶಾಸಕ ರವಿ ಗಣಿಗ ಅವರ ಫ್ಲೆಕ್ಸ್, ಬ್ಯಾನರ್ ಕಂಡರೆ ಸಾಕು ಕಿತ್ತೆಸೆದು ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮಂಡ್ಯದ ಮಹಾವೀರ ಸರ್ಕಲ್​ನಲ್ಲಿ ಪಾದಯಾತ್ರೆ ವೇಳೆ ಬ್ಯಾನರ್​ ಬೆಂಕಿ ಹಚ್ಚುತ್ತಿದ್ದಂತೆಯೇ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಇಬ್ಬರು ಕಾರ್ಯಕರ್ತರ ತಲೆಗೆ ಗಾಯವಾಗಿದೆ. ಇದರಿಂದ ಮತ್ತಷ್ಟು ಆಕ್ರೋಶಗೊಂಡ ಕಾರ್ಯಕರ್ತರು ಬೆಂಗಳೂರು-ಮೈಸೂರು ಹಳೇ ಹೆದ್ದಾರಿಯಲ್ಲಿ ಕುಳಿತು ಪ್ರತಿಭಟನೆ ನಡೆಸಿದ್ದಾರೆ

ಇನ್ನು ಸಾರ್ವಜನಿಕ ವಿದ್ಯಾರ್ಥಿ ನಿಲಯದ ಮೇಲೆ ಹಾಕಿದ್ದ ಫ್ಲೆಕ್ಸ್​​ ಹಾಗೂ KSRTC ಬಸ್ ಮೇಲೆ ಅಂಟಿಸಿದ್ದ ಭಾವಚಿತ್ರ ಕಿತ್ತುಹಾಕಿ ಆಕ್ರೋಶ ಹೊರಹಾಕಿದ್ದಾರೆ. ಇದೀಗ ಪಾದಯಾತ್ರೆ ಮಂಡ್ಯ ಜಿಲ್ಲಾಧಿಕಾರಿ ಕಚೇರಿ ತಲುಪಿದ್ದು, ಈ ವೇಳೆ ಸಿಟಿ ರವಿ ಸೇರಿದಂತೆ ಹಲವು ಬಿಜೆಪಿ ನಾಯಕರ ಉಪಸ್ಥಿತರಿದ್ದು, ಇವರಿಗೆ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್​ಡಿ ಕುಮಾರಸ್ವಾಮಿ ಸಹ ಸ್ಥಳಕ್ಕಾಗಮಿಸಿ ಬಿಜೆಪಿ ಪ್ರತಿಭಟನೆಗೆ ಬೆಂಬಲ ನೀಡಿದ್ದಾರೆ.

ಈ ವೇಳೆ ಮಾತನಾಡಿದ ಸಿಟಿ ರವಿ, ನಾವು ಮನೆ ಮನೆ ಮೇಲೆ ಹನುಮ ಧ್ವಜ ಹಾರಿಸುತ್ತೇವೆ. ತಾಕತ್ ಇದ್ದರೆ ಇದನ್ನು ತಡೆಯಿರಿ. ನಮ್ಮ ಹೋರಾಟ ಹಿಂದೂ ವಿರೋಧಿಗಳ ಮೇಲೆ. ಧ್ವಜ ತೆಗೆದ ಕಾಂಗ್ರೆಸ್ ಸರ್ಕಾರ ರಾಜಕೀಯವಾಗಿ ಭಸ್ಮ ಆಗಬೇಕು. ಹನುಮನ ಬಾಲಕ್ಕೆ ಬೆಂಕಿ ಹಾಕಿದ್ದರಿಂದ ಲಂಕೆ ಭಸ್ಮ ಆಯ್ತು. ಲಂಕೆಗೆ ಆದ ಪರಿಸ್ಥಿತಿ ಈ ಸರ್ಕಾರಕ್ಕೂ ಆಗುತ್ತೆ. ಯಾರನ್ನು ತೃಪ್ತಿ ಪಡಿಸಲು ಬಾವುಟ ತೆಗೆದ್ರಿ. ನಮ್ಮ ಹೆಸರಿನಲ್ಲಿ ರಾಮ ಇದ್ದಾನೆ, ತಂದೆ ಹೆಸರಲ್ಲೂ ರಾಮ ಇದ್ದಾನೆ ಆಂದ್ರಿ. ನಿಮಗೆ ರಾಮ ಭಕ್ತಿ ಇಲ್ಲ ಎಂದು ನಿಮ್ಮ ಕೃತ್ಯ ತೋರಿಸಿದೆ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ಯಾವುದಾದರೂ ಭೂತ ಪ್ರೇತ ಮೆಟ್ಟಿದವರು ಹೀಗೆ ಆಡುತ್ತಾರೆ. ಕಾಂಗ್ರೆಸ್‌ಗೆ ಮೆಟ್ಟಿರೋ ದೆವ್ವ ಟಿಪ್ಪು ಸುಲ್ತಾನ್ ದೆವ್ವ. ಟಿಪ್ಪು ಶ್ರೀರಂಗಪಟ್ಟಣದ ಮೂಡಲ ಬಾಗಿಲು ಆಂಜನೇಯಸ್ವಾಮಿ ದೇಗುಲ ತೆಗೆದು ಅವನತಿ ತೆಗೆದುಕೊಂಡ. ಸಿದ್ದರಾಮಯ್ಯ ಅಧುನಿಕ ಟಿಪ್ಪು ಸುಲ್ತಾನ್. 28 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಸೋಲುತ್ತೆ. ಆಧುನಿಕ ಟಿಪ್ಪು ಸುಲ್ತಾನ್ ಸಿದ್ದರಾಮಯ್ಯ ಹನುಮ ಧ್ವಜ ತೆಗೆದು ಅವನತಿಗೆ ತೆಗದುಕೊಂಡಿದ್ದಾರೆ ಎಂದು ಕಿಡಿಕಾರಿದರು.

ಸಿಎಂ ಸಾರ್ವಜನಿಕರ ಕ್ಷಮೆ ಕೇಳಬೇಕು. ನಿಮ್ಮ ತಪ್ಪಿಗೆ ಪ್ರಾಯಶ್ಚಿತ್ತವಾಗಿ ಸಾರ್ವಜನಿಕವಾಗಿ ಕ್ಷಮೆ ಕೇಳಿ ಮತ್ತೆ ಕೆರಗೋಡಿನಲ್ಲಿ ಹನುಮ ಧ್ವಜ ಹಾಕಿಸಬೇಕೆಂದು ಆಗ್ರಹಿಸಿದರು.

Related Articles

Leave a Reply

Your email address will not be published. Required fields are marked *

Back to top button