ಇತ್ತೀಚಿನ ಸುದ್ದಿ

ಬಂಡೀಪುರ ಬೆಂಕಿರೇಖೆ ನಿರ್ಮಾಣ ಆರಂಭ

ಗುಂಡ್ಲುಪೇಟೆ:
ಬಂಡೀಪುರವನ್ನು ಆಕಸ್ಮಿಕ ಬೆಂಕಿಯಿಂದ ರಕ್ಷಿಸಲು ಅರಣ್ಯ ಇಲಾಖೆ ಡಿಸೆಂಬರ್ ಆರಂಭದಲ್ಲಿಯೇ ಫೈರ್ ಲೈನ್ ಕಾಮಗಾರಿ ಆರಂಭಿಸಿದೆ.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ 50 ಮೀಟರ್ ವ್ಯಾಪ್ತಿಯಲ್ಲಿ ಬೆಳೆದಿರುವ ಎಲ್ಲ ಕಳೆ ಗಿಡಗಳನ್ನು ತೆರವುಗೊಳಿಸಲಾಗುತ್ತಿದೆ

ರಾಷ್ಟ್ರೀಯ ಹೆದ್ದಾರಿಗಳ ಎರಡೂ ಬದಿಗಳಲ್ಲಿ ತಲಾ 50 ಮೀಟರ್‌ ಅಗಲಕ್ಕೆ ಬೆಂಕಿ ರೇಖೆ ನಿರ್ಮಿಸಲಾಗುತ್ತಿದೆ. ಇತರೆ ಸಂಪರ್ಕ ರಸ್ತೆಗಳಲ್ಲಿ 10 ಮೀಟರ್‌ ಅಗಲಕ್ಕೆ ಬೆಂಕಿ ರೇಖೆ ನಿರ್ಮಿಸಲಾಗುತ್ತಿದೆ. ಅಡ್ಡ ಬೆಂಕಿ ಕೊಡುವುದಕ್ಕೆ ಅನುಕೂಲವಾಗುವಂತೆ ಮತ್ತು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಸುಲಭವಾಗಿ ಬೆಂಕಿ ವ್ಯಾಪಿಸುವುದನ್ನು ತಡೆಗಟ್ಟುವ ಸಲುವಾಗಿ ಬೆಂಕಿ ರೇಖೆ ಅಗಲವನ್ನು ಹಿಂದಿನ ವರ್ಷಗಳಿಗಿಂತ ಹೆಚ್ಚಿಸಲಾಗಿದೆ’

ಈ ಬಾರಿ ಸಾಕಷ್ಟು ಮಳೆಬೀಳದ ಪರಿಣಾಮ ಅರಣ್ಯ ಪ್ರದೇಶದಲ್ಲಿ ಕೆರೆಕಟ್ಟೆಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ ಆದರೂ ಆಗಾಗ ಬೀಳುತ್ತಿರುವ ಸಣ್ಣ ಪುಟ್ಟ ಮಳೆಯಿಂದ ಹುಲ್ಲು ಹಾಗೂ ಮರಗಿಡಗಳು ಹಸುರಾಗಿವೆ. ಆದರೂ ಅರಣ್ಯ ಇಲಾಖೆ ಬೆಂಕಿ ಆಕಸ್ಮಿಕದ ಬಗ್ಗೆ ಅಗತ್ಯವಾದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ
ಎಲ್ಲಾ 13ವಲಯಗಳಲ್ಲಿಯೂ 2859 ಕಿಮೀ ಉದ್ದಕ್ಕೂ ಲಾಂಟಾನ ಮುಂತಾದ ಕಳೆಗಳನ್ನು ತೆಗೆದು ಫೈರ್ ಲೈನ್ ನಿರ್ಮಾಣ ಮಾಡಲಾಗಿದೆ. ಇಲಾಖೆಯ ಸಿಬ್ಬಂದಿಯ ಜತೆಗೆ ಫೈರ್ ವಾಚರುಗಳು ಹುಲಿ ಯೋಜನೆಯ ಅರಣ್ಯ ಪ್ರದೇಶಗಳ ನಿಗದಿತ ಸ್ಥಳಗಳಲ್ಲಿ ಕಳೆಗಳನ್ನು ತೆರವುಗೊಳಿಸಲಾರಂಭಿಸಿದ್ದಾರೆ.
ಬಂಡೀಪುರ ಹುಲಿ ಯೋಜನೆಯ ಅರಣ್ಯ ಪ್ರದೇಶದಲ್ಲಿ ತಮಿಳುನಾಡು ಹಾಗೂ ಕೇರಳವನ್ನು ಸಂಪರ್ಕಿಸುವ ಎರಡು ರಾಷ್ಟೀಯ ಹೆದ್ದಾರಿಗಳು ಹಾದುಹೋಗಿದ್ದು ಇಲ್ಲಿ ಪ್ರತಿದಿನವೂ ಸಾವಿರಾರು ವಾಹನಗಳು ಸಂಚರಿಸುತ್ತಿವೆ. ಪ್ರತಿ ವರ್ಷವೂ ರಸ್ತೆ ಬದಿಗಳಲ್ಲಿ ಬೆಳೆದಿರುವ ಪೊದೆಗಳನ್ನು ತೆರವುಗೊಳಿಸುತ್ತಿದ್ದರೂ ಮತ್ತೆ ಬೆಳೆಯುತ್ತಿರುವುದರಿಂದ ರಾಷ್ಟೀಯ ಹೆದ್ದಾರಿ ಬದಿಗಳಲ್ಲಿ ವ್ಯೂ ಲೈನ್ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದೆ.
ಉಪಗ್ರಹ ಹಾಗೂ ಡ್ರೋಣ್ ೨೦೧೮ರಲ್ಲಿ ಬಂಡೀಪುರಕ್ಕೆ ಬೆಂಕಿಬಿದ್ದು ಭಾರೀ ಅನಾಹುತ ಸಂಭವಿಸಿದ ನಂತರ ಸ್ಯಾಟಲೈಟ್ ನೆರವಿನಿಂದ ಅರಣ್ಯಪ್ರದೇಶವನ್ನು ಗಮನಿಸಲಾಗುತ್ತಿದೆ. ಅಕಸ್ಮಾತ್ ಯಾವುದೇ ಪ್ರದೇಶದಲ್ಲಿ ಬೆಂಕಿ ಕಾಣ ಸಿಕೊಂಡರೆ ಕಂಟ್ರೋಲ್ ರೋಂಗೆ ಎಚ್ಚರಿಕೆ ಕರೆ ಬರುವಂತೆ ಮುನ್ನೆಚ್ಚರಿಕೆ ಕೈಗೊಂಡಿದೆ. ಅಲ್ಲದೆ ಕಾಡಂಚಿನಲ್ಲಿ ಡ್ರೋಣ್ ಕ್ಯಾಮೆರಾಗಳನ್ನು ಹಾರಿಸಿ ಕಣ್ಗಾವಲು ನಡೆಸಲಾಗುತ್ತದೆ. ಬಿಸಿಲಿನ ಝಳ ಹೆಚ್ಚಿದಂತೆ ಹಗಲು ರಾತ್ರಿ ಗಸ್ತು ನಡೆಸಲಾಗುವುದು. ತುರ್ತುಸಹಾಯಕ್ಕೆ ಅಕ್ಕಪಕ್ಕದ ರೆಸಾರ್ಟ್ನವರಿಂದ ವಾಹನ ಹಾಗೂ ಸಿಬ್ಬಂದಿ ಸಹಾಯ ಪಡೆದುಕೊಳ್ಳಲಾಗುವುದು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ಈಗಾಗಲೇ ಎಲ್ಲಾ ವಲಯಗಳ ಅರಣ್ಯಾಧಿಕಾರಿಗಳೊಂದಿಗೆ ಸಭೆ ನಡೆಸಿ ಬೇಸಿಗೆಯಲ್ಲಿ ಅರಣ್ಯವನ್ನು ಬೆಂಕಿಯಿAದ ರಕ್ಷಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ನಿರ್ದೇಶನ ನೀಡಲಾಗಿದೆ. ಸದ್ಯ ಫೈರ್ ಲೈನ್ ಮಾರ್ಗಗಳು ಹಾಗೂ ಹೆದ್ದಾರಿ ಬದಿಗಳಲ್ಲಿ ಕಳೆಗಳನ್ನು ತೆಗೆಯಲಾಗುತ್ತಿದ್ದು ಒಣಗಿದ ನಂತರ ಸುಡಲಾಗುವುದು.
ಡಾ.ರಮೇಶ್ ಕುಮಾರ್, ಬಂಡೀಪುರ ಹುಲಿ ಯೋಜನೆಯ ನಿರ್ದೇಶಕರು

Related Articles

Leave a Reply

Your email address will not be published. Required fields are marked *

Back to top button