ಪಶು ಆಹಾರ ಕಳೆಪ ಗುಣಮಟ್ಟ : ಮದ್ದೂರು ತಾಲೂಕಿನ ಹಾಲು ಉತ್ಪಾದಕರು ಚನ್ನಸಂದ್ರ ಗ್ರಾಮ ಆರೋಪ
ಮದ್ದೂರು: ಜಿಲ್ಲಾ ಹಾಲು ಒಕ್ಕೂಟದಿಂದ ಜಾನುವಾರುಗಳಿಗೆ ಕೊಡುತ್ತಿರುವ ಪಶು ಆಹಾರ ಕಳೆಪ ಗುಣಮಟ್ಟದಿಂದ ಕೂಡಿದೆ ಎಂದು ಆರೋಪಿಸಿ ಹಾಲು ಉತ್ಪಾದಕರು ಚನ್ನಸಂದ್ರ ಗ್ರಾಮದಲ್ಲಿ ರಾಸುಗಳೊಂದಿಗೆ ಪ್ರತಿಭಟನೆ ಮಾಡಿದರು.
ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಕಚೇರಿ ಎದುರು ಸೋಮವಾರ ಜಮಾಯಿಸಿದ ಹಾಲು ಉತ್ಪಾದಕರು
ಜಾನುವಾರುಗಳೊಂದಿಗೆ ಚೆಲ್ಲಾಟವಾಡುತ್ತಿರುವ ಆಡಳಿತ ಮಂಡಳಿ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ತೆಂಗು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಲಕ್ಷ್ಮಣ್ ಚಂಸಂದ್ರ ಮಾತನಾಡಿ ಮನಮುಲ್ ವತಿಯಿಂದ ನೀಡಿರುವ ಪಶು ಆಹಾರ ಕಳಪೆ ಗುಣಮಟ್ಟದಿಂದ ಕೂಡಿದ್ದು, ಈ ಮೇವನ್ನು ತಿಂದ ರಾಸುಗಳು ಬೇಧಿ ಮಾಡಿಕೊಂಡು ಅಸ್ವಸ್ಥವಾಗುವ ಜತೆಗೆ, ಗಣನೀಯ ಪ್ರಮಾಣದಲ್ಲಿ ಹಾಲನ್ನು ಕಡಿಮೆ ನೀಡುತ್ತಿದೆ. ಗರ್ಭವನ್ನು ಕೂಡ ಭರಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸುಮಾರು 15 ದಿನಗಳಿಂದ ಗ್ರಾಮದಲ್ಲಿ 50ಕ್ಕೂ ಹೆಚ್ಚು ರಾಸುಗಳು ಈ ರೀತಿ ಅಸ್ವಸ್ಥಗೊಂಡಿದ್ದು, ಪ್ರತಿನಿತ್ಯ 300 ರಿಂದ 400 ರೂಪಾಯಿಗಳನ್ನು ಖರ್ಚು ಮಾಡಿ ಹಸುಗಳ ಹಾರೈಕೆ ಮಾಡಬೇಕಾದ ಸ್ಥಿತಿ
ಬಂದಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ರಾಸುಗಳು ಅಸ್ವಸ್ಥಗೊಂಡ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದರು ರಾಸುಗಳನ್ನು ತಪಾಸಣೆ ಮಾಡಲು ಬರುತ್ತಿಲ್ಲ ಎಂದು ಆರೋಪಿಸಿದರು.
ಒಕ್ಕೂಟ ಡಿಢೀರ್ ಎಂದು ಲೀಟರ್ ಹಾಲಿಗೆ ೧.೫೦. ರೂ ಕಡಿಮೆ ಮಾಡಿ ಕಡಿಮೆ ಗುಣಮಟ್ಟದ ಪಶು ಆಹಾರ ನೀಡಿ ಉತ್ತಮ ಗುಣಮಟ್ಟದ ಹಾಲು ನೀಡಿ ಎಂದು ಹೇಳುತ್ತಿರುವ ಅಧಿಕಾರಿಗಳ ಕ್ರಮ ಸರಿಯಿಲ್ಲ ಎಂದರು.
ಈ ಸಂಬಂಧ ಜಿಲ್ಲಾ ಹಾಲು ಒಕ್ಕೂಟ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹ ಮಾಡಿದರು.
ಪ್ರತಿಭಟನೆಯಲ್ಲಿ ಪ್ರಕಾಶ್ ಬಾಬು, ಪ್ರಮೋದ್, ಸಿ .ರಾಜು , ವಿಜಯ್, ಜಯಲಕ್ಷ್ಮಿ, ಚಂದ್ರಮ್ಮ, ರವೀಶ್, ಸೋಮ , ರಮೇಶ್, ಲೋಕೇಶ್ ಬಾಬು, ಮಹದೇವ ಸುರೇಶ್, ಕೃಷ್ಣ ಸೇರಿದಂತೆ ಇತರರು ಇದ್ದರು.