ಇತ್ತೀಚಿನ ಸುದ್ದಿ

ಪರಿಸರ ಉಳಿದರೆ ಮನುಕುಲ ಉಳಿಯತ್ತದೆ, ಭೂಮಿತಾಯಿ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯ-ಆಚಾರ್ಯ ಶ್ರೀ ರಾಕುಂ ಗುರೂಜಿ

ಬೆಂಗಳೂರು:ಆಚಾರ್ಯ ಶ್ರೀ ರಾಕುಂ ಶಾಲೆ ಮತ್ತು ಮೋಟೋ ಟೂರರ್ಸ್ ಮತ್ತು ಬೈಕಿಂಗ್ ಕಮ್ಯುನಿಟಿ ಫೆಡರೇಶನ್ ವತಿಯಿಂದ
ಸೇವ್ ಅರ್ಥ್ ಬೈಕ್ ಜಾಥ ಮತ್ತು ಸಸಿ ನೆಡುವ ಕಾರ್ಯಕ್ರಮ.

ಹೆಬ್ಬಾಳದಿಂದ ಆಚಾರ್ಯ ಶ್ರೀ ರಾಕುಂ ಶಾಲೆ ದೇವನಹಳ್ಳಿ 30ಕಿಲೋ ಮೀಟರ್ ದೂರವನ್ನು 500ಕ್ಕೂ ಹೆಚ್ಚು ಬೈಕ್ ಗಳ ಮೂಲಕ ಜಾಥ ಮೂಲಕ ತೆರಳಿ ದೇವನಹಳ್ಳಿಯಲ್ಲಿರುವ ಶಾಲೆಯ ಸುತ್ತಮುತ್ತಲು ಸಸಿ ನೆಟ್ಟು ಸೇವ್ ಅರ್ಥ್ ಕಾರ್ಯಕ್ರಮ ನೇರವೆರಿತು.

ಆಚಾರ್ಯ ಶ್ರೀ ರಾಕುಂಶಾಲೆಯ ಸಂಸ್ಥಾಪಕರಾದ ಆಚಾರ್ಯ ಶ್ರೀ ರಾಕುಂ ಗುರೂಜಿರವರು, ಐ.ಎನ್.ಟಿ.ಯು.ಸಿ ಅಧ್ಯಕ್ಷರಾದ ಲಕ್ಷ್ಮೀವೆಂಕಟೇಶ್,
ಪಂಚಾಯ್ತಿ ಅಭಿವೃದ್ದಿ ಅಧಿಕಾರಿ ಪ್ರಕಾಶ್, ಪಂಚಾಯ್ತಿ ಉಪಾಧ್ಯಕ್ಷರಾದ ಬಾಲಸುಬ್ರಮಣ್ಯ, ಗ್ರಾಮ ಪಂಚಾಯ್ತಿ ಸದಸ್ಯರುಗಳಾದ ಮಹೇಶ್, ಆಶ್ವಿನಿ, ಶಿವಲಿಂಗಮ್ಮ, ಮಿಸ್ಟರ್ ಇಎಡಿಯ ಅರುಣ್ ಗೌಡ, ಚಲನಚಿತ್ರ ನಟ ಪೃಥ್ವಿ ಸುಬ್ಬಯ್ಯ , ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷರಾದ ರಾಜಣ್ಣ, ಸಂಜೀವ್ ಗುಪ್ತಾ, ವರುಣ್ ಕುಮಾರ್, ಬಾಲನಟ ಶರೀನ್ ಅರೋರಾರವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಆಚಾರ್ಯ ಶ್ರೀ ರಾಕುಂ ಗುರೂಜಿರವರು ಮಾತನಾಡಿ ಮನುಷ್ಯ ಅತಿಯಾದ ಆಸೆ ಮತ್ತು ಅಭಿವೃದ್ದಿ ಹೆಸರಿನಲ್ಲಿ ಹಸಿರುವನ ಸಿರಿಯನ್ನ ಕಡಿದು ಕಾಂಕ್ರೀಟ್ ನಗರ ನಿರ್ಮಾಣ ಮಾಡಿದರು.

ಪರಿಸರದ ಮೇಲೆ ಸತತ ಮನುಷ್ಯನ ದಾಳಿಯ ಪರಿಣಾಮ ಮತ್ತು ಬೆಳಯುವ ಬೇಳೆ ಮೇಲೆ ರಾಸಯನಿಕ ಸಿಂಪಡನೆ ಕಾರಣದಿಂದ ಇಂದು ಪರಿಸರ ನಾಶದತ್ತ ಸಾಗುತ್ತಿದೆ.

ಮುಂದಿನ ಮನುಕುಲ ಉಳಿಯಬೇಕಾದರೆ ಪರಿಸರ ಉಳಿಸಲು ಅಂದೋಲನವಾಗಬೇಕು ಮತ್ತು ಪ್ರತಿಯೊಬ್ಬ ನಾಗರಿಕರು ಇದರಲ್ಲಿ ಪಾಲ್ಗೊಳ್ಳಬೇಕು.

ಪ್ಲಾಸ್ಟಿಕ್ ಬಳಕೆ ಮಾಡದೇ ಬಟ್ಟೆ ಬ್ಯಾಗ್ ಗಳನ್ನು ಉಪಯೋಗಿಸಬೇಕು.

ಸಕ್ಕರೆ ಖಾಯಿಲೆ , ಬಿ.ಪಿ ಮತ್ತು ಮಾರಕಖಾಯಿಲೆ ವಾಸಿಯಾಗಬೇಕು ಎಂದರೆ ನಾವು ತಿನ್ನುವ ಆಹಾರ ಮತ್ತು ಉತ್ತಮ ವಾತವರಣ ಇದ್ದಾಗ ಮತ್ತು ಪ್ರತಿ ದಿನ 1ಗಂಟೆ ಯೋಗ, ಧ್ಯಾನ ಮಾಡಿದಾಗ ರೋಗ ಮುಕ್ತ ಸಮಾಜ ನಿರ್ಮಾಣ ಮಾಡಬಹುದು ಎಂದು ಹೇಳಿದರು.

ಕಾರ್ಯಕ್ರಮ ಸೇವ್ ಅರ್ಥ್ ಅಂದೋಲನದಲ್ಲಿ ಶಾಲೆಯ ಮತ್ತು ಬೈಕ್ ಟೂರಸ್ ತಮ್ಯುನಿಟ್ ಫೆಡರೇಷನ್ ಸದಸ್ಯರುಗಳ ಜೊತೆಯಲ್ಲಿ ಜಾಲಿಗೆ ಪಂಚಾಯ್ತಿ ವ್ಯಾಪ್ತಿಯಲ್ಲಿ ನೂರಾರು ಸಸಿಗಳನ್ನು ನೆಡಲಾಯಿತು.

Related Articles

Leave a Reply

Your email address will not be published. Required fields are marked *

Back to top button