ಇತ್ತೀಚಿನ ಸುದ್ದಿಕ್ರೀಡೆ
ಮಲೇಷ್ಯಾ ಮಾಸ್ಟರ್ಸ್: ಸೆಮೀಸ್ನಲ್ಲಿ ಸೋತ ಸಿಂಧು
ಡಬಲ್ ಒಲಿಂಪಿಕ್ ಪದಕ ವಿಜೇತೆ ಪಿ ವಿ ಸಿಂಧು ಇಂಡೋನೇಷ್ಯಾದ ಗ್ರೆಗೋರಿಯಾ ಮರಿಸ್ಕಾ ತುಂಜಂಗ್ ವಿರುದ್ಧ 14-21, 17-21 ರಿಂದ ಸೆಮಿಪೈನಲ್ನಲ್ಲಿ ಸೋಲು ಅನುಭವಿಸಿದರು. ಇದರಿಂದ ಮಹಿಳೆಯರ ಸಿಂಗಲ್ಸ್ನ ಪ್ರಶಸ್ತಿ ನಿರೀಕ್ಷೆ ಹುಸಿಯಾಗಿದೆ. ಇಂಡೋನೇಷ್ಯಾದ ಆಟಗಾರ್ತಿ ವಿರುದ್ಧ ಇದುವರೆಗೂ ಸಿಂಧು ಸತತ ಏಳು ಗೆಲುವು ಕಂಡಿದ್ದರು, ಆದರೆ ಕಳೆದ ಎರಡು ಪಂದ್ಯಗಳಲ್ಲಿ ಸೋಲನುಭವಿಸಿದ್ದಾರೆ.
ಸಿಂಧು ಕ್ವಾರ್ಟರ್-ಫೈನಲ್ನಲ್ಲಿ 21-16, 13-21, 22-20 ರಲ್ಲಿ ಚೀನಾದ ಜಾಂಗ್ ಯಿ ಮಾನ್ ವಿರುದ್ಧ ರೋಚಕ ಪಂದ್ಯದಲ್ಲಿ ಟೈ ಸಾಧಿಸಿ, ಇಂಡೋನೇಷ್ಯಾದ ಗ್ರೆಗೋರಿಯಾ ಮರಿಸ್ಕಾ ತುಂಜಂಗ್ ಅವರ ವಿರುದ್ಧ ಇಂದು ಕಣಕ್ಕಿಳಿದಿದ್ದರು. ಸಿಂಧು ಗಾಯದಿಂದಾಗ ಕಳೆದ ಒಂದು ವರ್ಷ ಆಟದಿಂದ ಹೊರಗುಳಿದಿದ್ದರು. ಇದಾದ ನಂತರ ಅವರು ಭಾಗವಹಿಸಿದ ಪಂದ್ಯಗಳನ್ನು ಫೈನಲ್ ಹಂತಕ್ಕೆ ತಲುಪಲು ಕಷ್ಟ ಪಡುತ್ತಿದ್ದರು. ಆದರೆ ಈ ಬಾರಿ ಸೆಮೀಸ್ ಪ್ರವೇಶಿಸದ ಅವರ ಮೇಲೆ ಭರವಸೆ ಹೆಚ್ಚಿಸಿತ್ತು.