ಬೆಂಕಿಯಿಂದ ಅರಣ್ಯ ಸಂರಕ್ಷಣೆ ಬಂಡೀಪುರ ಕಾರ್ಯಾಗಾರ
ಗುಂಡ್ಲುಪೇಟೆ:ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿ ಅರಣ್ಯ ಹಾಗೂ ವನ್ಯಪ್ರಾಣಿ ಸಂಪತ್ತನ್ನು ಬೇಸಿಗೆಯ ಬೆಂಕಿ ಕಾಲದಿಂದ ಸಂರಕ್ಷಿಸುವುದಕ್ಕಾಗಿ ಅನುಸರಿಸಬೇಕಾದ ಮುಂಜಾಗೃತ ಕ್ರಮಗಳ ಬಗ್ಗೆ ಕಾರ್ಯಗಾರ ನಡೆಸಲಾಯಿತು
ಬಂಡೀಪುರ ಹಾಗೂ ಗುಂಡ್ಲುಪೇಟೆ ಉಪವಿಭಾಗಗಳಿಗೆ ಸಂಬಂಧಿಸಿದಂತೆ ಬಂಡೀಪುರ ಸ್ವಾಗತ ಕೇಂದ್ರದಲ್ಲಿ ಹಾಗೂ ಹೆಡಿಯಾಲ ಉಪವಿಭಾಗದ ವಲಯಗಳಿಗೆ ಸಂಬಂಧಿಸಿದಂತೆ ಬೇಲದಕುಪ್ಪೆ ಮಹದೇಶ್ವರ
ಸ್ವಾಮಿ ದೇವಾಲಯದ ಆವರಣದಲ್ಲಿ ನಡೆಸಲಾಯಿತು
ಬಂಡೀಪುರ ಅರಣ್ಯ ಪ್ರದೇಶ ಹಾಗೂ ವನ್ಯಜೀವಿಗಳನ್ನು ಕಾಯ್ದಿಟ್ಟಿನಿಂದ ರಕ್ಷಿಸಲು ಕೈಗೊಳ್ಳಬೇಕಾದ ಎಲ್ಲಾ ಮುಂಜಾಗರು ಕ್ರಮಗಳ ಬಗ್ಗೆ ಕೂಲಂಕುಶವಾಗಿ ಚರ್ಚಿಸಿ ಇಲಾಖಾ ಸಿಬ್ಬಂದಿಗಳಲ್ಲಿ ಕಾಡಿಚ್ಚು ನಿಯಂತ್ರಣದ ಕುರಿತಾಗಿ ಇರುವ ನೂತನ ರೀತಿಯ ಐಡಿಯಾ ಪ್ಲಾನ್ಸ್ಗಳ ಚರ್ಚೆ ನಡೆಸಲಾಯಿತು
ಶೂನ್ಯ ಬೆಂಕಿ ಸಾಧಿಸಲು ಅಗತ್ಯ ಇರುವ ಎಲ್ಲಾ ಪೂರ್ವ ಸಿದ್ಧತೆಗಳನ್ನು ಕೈಗೊಳ್ಳಲು ಹಾಜರಿದ್ದ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರಿಗೆ ತಿಳಿಸಲಾಯಿತು
ವಲಯಗಳ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪರಿಸರ ಅಭಿವೃದ್ಧಿ ಸಮಿತಿಗಳ ಹಾಗೂ ಸುತ್ತಮುತ್ತಲಿನ
ಸಾರ್ವಜನಿಕರ ಸಹಕಾರವನ್ನು ಪಡೆದು ಈ ಬಾರಿಯ ಬೆಂಕಿ ಕಾಲದಲ್ಲಿ ಯಾವುದೇ ಅಗ್ನಿ ಅವಘಡಗಳು ಸಂಭವಿಸದ ಹಾಗೆ ಎಚ್ಚರವಹಿಸಿ ಕಾರ್ಯ ನಿರ್ವಹಿಸಲು ಸಲಹಾ ಸೂಚನೆಗಳನ್ನು ನೀಡಲಾಯಿತು
ಉಪವಿಭಾಗಗಳ ಹಾಗೂ ವಲಯಗಳ ನಡುವೆ ಪರಸ್ಪರ ಸಹಕಾರ ಮನೋಭಾವನೆ ಬೆಳೆಸಿ ಎಲ್ಲಾಸಂದರ್ಭ
ಗಳಲ್ಲಿಯೂ ಪರಸ್ಪರ ಸಹಕರಿಸುವಂತೆ ತಿಳಿಸಲಾಯಿತು
ವಾಹನ ಬಂದೂಕು ಹಾಗೂ ಬೆಂಕಿ ಉಪಕರಣಗಳನ್ನು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಲು ಹಾಗೂ ದಿನದ 24 ಗಂಟೆಗಳ ಕಾಲವು ಸಹ ಕಟ್ಟೆಚ್ಚರ ವಹಿಸಿ ಕಾರ್ಯ ನಿರ್ವಹಿಸುವಂತೆ ಸಲಹಾ ಸೂಚನೆಗಳನ್ನು ಬೆಂಕಿಯ ಕಾಲದಲ್ಲಿ ಉಪವಿಭಾಗ ಹಾಗೂ ವಲಯವಾರು ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಒಳಗೊಂಡ ವಾಟ್ಸ್ಆಪ್ ಗ್ರೂಪ್ ಒಂದನ್ನು ರಚಿಸಿ ಕಾಲಕಾಲಕ್ಕೆ ಮಾಹಿತಿಗಳನ್ನು ವಿನಿಮಯ ಮಾಡಿಕೊಳ್ಳಲು ಬೆಂಕಿ ರಕ್ಷಣೆಯ ಕುರಿತಾಗ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಂಬಂಧ ಬೀದಿ ನಾಟಕಗಳನ್ನು ಆಯೋಜಿಸಲು ಹಾಗೂ ಇನ್ನಿತರೆ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ತಿಳಿಸಲಾಯಿತು
ಬೆಂಕಿ ನಿರ್ವಹಣಾ ಯೋಜನೆಗಳನ್ನು ಸೂಕ್ತ ರೀತಿಯಲ್ಲಿ ತಯಾರಿಸಿ ಅವುಗಳನ್ನು ರೂಪುರೇಷೆಗಳ ಅನ್ವಯ ಅನುಷ್ಠಾನಕ್ಕೆ ತರಲು ಎಲ್ಲಾ ರೀತಿಯ ಸಿದ್ಧತೆಗಳನ್ನು ಕೈಗೊಳ್ಳಲು ಸಲಹೆಗಳನ್ನು ನೆರೆದಿದ್ದ ಅಧಿಕಾರಿ ಹಾಗೂ ಸಿಬ್ಬಂದಿ ವೃಂದದವರಿಗೆ ತಿಳಿಸಲಾಯಿತು ಜವಬ್ದಾರಿಯುತ ಅರಣ್ಯ ಸಿಬ್ಬಂದಿಗಳು ದಿನದ 24 ಗಂಟೆಗಳ ಕಾಲವು ಸಹ ಕಟ್ಟೆಚ್ಚರದಿಂದ ಇದು ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಗೆ ಮುಂದಾಗಬೇಕು ಎಂದು ಬಂಡೀಪುರ ಸಿ.ಎಫ್. ಡಾ.ರಮೇಶ್ ಕುಮಾರ ತಿಳಿಸಿದರು
ಈ ಸಂದರ್ಭದಲ್ಲಿ ಎ.ಸಿ.ಎಫ್,ಗಳಾದ ನವೀನ, ರವೀಂದ್ರ ಹಾಗೂ ಆರ್.ಎಫ್.ಓ.ಗಳಾದ ನವೀನ ಕುಮಾರ್,ಶಶಿಧರ್,ನರೇಶ,ಶ್ರೀನಿವಾಸನಾಯಕ್,ಪುನೀತ್,ಶಿವಕುಮಾರ್, ಅಮೃತೇಶ ಹಾಗೂ ಇತರರು ಹಾಜರಿದ್ದರು