ಆರೋಗ್ಯಇತ್ತೀಚಿನ ಸುದ್ದಿರಾಜ್ಯ

ತುಮಕೂರಿನಲ್ಲಿ ಡೆಂಘಿಗೆ 7 ವರ್ಷದ ಬಾಲಕ ಸಾವು.

ಕರ್ನಾಟಕದಲ್ಲಿ ಬೇಸಿಗೆ ಮುನ್ನವೇ ರಣ ಬೀಸಿಲು ಆರಂಭವಾಗಿದೆ. ಚಳಿಗಾಲದಲ್ಲಿ ಕೆಮ್ಮು, ವೈರಲ್ ಜ್ವರ ಜನರನ್ನು ಕಾಡಿತ್ತು. ಇದೀಗ ಬೇಸಿಗೆ ಮುನ್ನವೇ ಡೆಂಘಿ ಹಾವಳಿ ಆರಂಭವಾಗಿದೆ. ಕರ್ನಾಟಕದಲ್ಲಿ ಡೆಂಘಿ ಭೀತಿ ಎದುರಾಗಿದ್ದು, ತುಮಕೂರಿನಲ್ಲಿ ಓರ್ವ ಬಾಲಕ ಡೆಂಘಿ ಜ್ವರಕ್ಕೆ ಮೃತಪಟ್ಟಿದ್ದಾನೆ. ಇದರೊಂದಿಂಗೆ ಆತಂಕ ಹೆಚ್ಚಾಗಿದೆ.

ಕರ್ನಾಟಕದಲ್ಲಿ ವೈರಲ್ ಫಿವರ್ ಜೊತೆಗೆ ಇದೀಗ ಡೆಂಘಿ ಜ್ವರ (Dengue fever) ಕೂಡ ಒಕ್ಕರಿಸಿಕೊಂಡಿದೆ. ಇದಕ್ಕೆ ಸಾಕ್ಷಿಯೆಂಬಂತೆ ಇದೀಗ ತುಮಕೂರು ಜಿಲ್ಲೆಯಲ್ಲಿ ಓರ್ವ ಬಾಲಕ ಬಲಿ ಆಗಿದ್ದಾನೆ. ಹರೀಶ್ ಕುಮಾರ್​ ಎನ್ನುವವರ ಪುತ್ರ ಕರುಣಾಕರ್​(7) ಮೃತ ಬಾಲಕ. ಜಿಲ್ಲೆಯ ಪಾವಗಡ ಪಟ್ಟಣದ ಬಾಬೈಯನ ಗುಡಿಬೀದಿಯಲ್ಲಿ ಘಟನೆ ನಡೆದಿದೆ.ಪಾವಗಡದ ಸುಧಾ ಕ್ಲಿನಿಕ್​ನಲ್ಲಿ ಬಾಲಕ ಕಳೆದ 8 ದಿನದಿಂದ ಚಿಕಿತ್ಸೆ ಪಡೆಯುತ್ತಿದ್ದ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕೊನೆ ಕ್ಷಣದವರೆಗೂ ಡೆಂಘಿ ಜ್ವರ ಎಂದು ವೈದ್ಯರು ಪೋಷಕರಿಗೆ ತಿಳಿಸಿಲ್ಲ.

ಹೀಗಾಗಿ ವೈದ್ಯರ ನಿರ್ಲಕ್ಷ್ಯಕ್ಕೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುಧಾ ಕ್ಲಿನಿಕ್ ಮುಂದೆ ಪ್ರತಿಭಟನೆ ಮಾಡಲಾಗಿದೆ. ಪಾವಗಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಡೆಂಘಿ ರೋಗದ ಲಕ್ಷಣಗಳು ಹೀಗಿವೆ

  • ದದ್ದುಗಳು
  • ಕಣ್ಣು ನೋವು
  • ತೀವ್ರ ತಲೆನೋವು
  • ಹೆಚ್ಚಿನ ಜ್ವರ
  • ವಾಂತಿ ಮತ್ತು ವಾಕರಿಕೆಯ ಭಾವನೆ
  • ಸ್ನಾಯುಗಳು ಮತ್ತು ಕೀಲುಗಳಲ್ಲಿ ನೋವು ಕಾಣಿಸಿಕೊಳ್ಳುವುದು

ಮುನ್ನೆಚ್ಚರಿಕೆಗಳು 

  • ಪ್ಲಾಸ್ಟಿಕ್ ಕಂಟೇನರ್​​ಗಳು, ಬಕೆಟ್​ಗಳು, ಬಳಸಿದ ಆಟೋಮೊಬೈಲ್ ಟೈರ್​ಗಳು, ವಾಟರ್ ಕೂಲರ್ ಗಳು, ಪೆಟ್ ವಾಟರ್ ಕಂಟೇನರ್​ಗಳು ಮತ್ತು ಹೂವಿನ ಹೂದಾನಿಗಳ ನೀರನ್ನು ವಾರಕ್ಕೊಮ್ಮೆಯಾದರೂ ಖಾಲಿ ಮಾಡುವುದು.
  • ಸೊಳ್ಳೆಗಳ ಕಡಿತವನ್ನು ತಡೆಯಲು ಹಗಲಿನಲ್ಲಿ ಏರೋಸಾಲ್ ಅನ್ನು ಬಳಸಬಹುದು.
  • ನೀರು ಶೇಖರಣಾ ಪಾತ್ರೆಗಳನ್ನು ಸರಿಯಾಗಿ ಮುಚ್ಚಳದಿಂದ ಮುಚ್ಚಿಡಬೇಕು.
  • ಹಗಲಿನಲ್ಲಿ ಮಲಗುವಾಗ ಸೊಳ್ಳೆ ಪರದೆಗಳು ಅಥವಾ ಸೊಳ್ಳೆ ನಿವಾರಕಗಳನ್ನು ಬಳಸಬಹುದು.
  • ಕೈಕಾಲುಗಳನ್ನು ಮುಚ್ಚುವ ಬಟ್ಟೆಗಳನ್ನು ಧರಿಸುವುದು.

ಡೆಂಗ್ಯೂ ಕಾಯಿಲೆಯಿಂದ ಬಳಲುತ್ತಿರುವ ಜನರು ವಿಶ್ರಾಂತಿ ಪಡೆಯಬೇಕು. ಜಾಸ್ತಿ ನೀರು ಹಾಗೂ ಜ್ಯೂಸ್ ಕುಡಿಯಬೇಕು. ಜ್ವರ ಮತ್ತು ದೇಹದ ನೋವಿಗೆ ಮಾತ್ರೆ ತೆಗೆದುಕೊಳ್ಳಬಹುದು. ಅಷ್ಟಾಗಿಯೂ ರೋಗಲಕ್ಷಣಗಳು ತೀವ್ರವಾಗಿದ್ದರೆ ವೈದ್ಯರನ್ನು ಸಂಪರ್ಕಿಸಬೇಕು.

Related Articles

Leave a Reply

Your email address will not be published. Required fields are marked *

Back to top button