ಕತ್ತಲೆಯಿಂದ ಬೆಳಕಿನೆಡೆಗೆ ನಮ್ಮನ್ನು ನಡೆಸುವ ಹಬ್ಬವೇ ದೀಪಾವಳಿ:ವರಲಕ್ಷ್ಮಿ.ಬಿ.ಎಸ್
ಹೊಸಕೋಟೆ:
ಕತ್ತಲೆಯನ್ನು ಹೋಗಲಾಡಿಸಿ ಮನೆ ಹಾಗೂ ಮನದ ಕತ್ತಲೆಯನ್ನು ನಿವಾರಿಸಿ ಬೆಳಕನ್ನು ಉಂಟು ಮಾಡುವ ಹಬ್ಬವೇ ದೀಪಾವಳಿ ಎಂದು ರೈನ್ ಬೋ ಇನ್ನೊವೇಟ್ ಅಕಾಡೆಮಿ ಶಾಲೆ ಮತ್ತು ರೈನ್ ಬೋ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಸಂಸ್ಥಾಪಕರಾದ ವರಲಕ್ಷ್ಮಿ.ಬಿ.ಎಸ್. ರವರು ತಿಳಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯ ರೈನ್ ಬೋ ಇನ್ನೊವೇಟ್ ಅಕಾಡೆಮಿ ಶಾಲೆಮತ್ತು ರೈನ್ ಬೋ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಸಹಯೋಗದಲ್ಲಿ ಬೂದಿಗೆರೆ ಕ್ರಾಸ್ ಇಲ್ಲಿ ಹಮ್ಮಿಕೊಂಡಿದ್ದ *ದೀಪಾವಳಿ ಹಬ್ಬದ ಮಹತ್ವ ಹಾಗೂ ಹಬ್ಬದ ಮುನ್ನೆಚ್ಚರಿಕೆ ನೀಡುವ ಸಲುವಾಗಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸರಳ ದೀಪಾವಳಿ ಹಬ್ಬದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಕ್ಕಳು ಮನೆಗಳಲ್ಲಿ ವಾಯುಮಾಲಿನ್ಯಕ್ಕೆ ಹಾನಿಕಾರಕವಾದ ಪಟಾಕಿಗಳನ್ನು ಹಚ್ಚಬಾರದು, ಹಸಿರು ಪಟಾಕಿಗಳನ್ನು ಬಳಸಬೇಕು. ಆದರೆ ಎಚ್ಚರಿಕೆಯು ತುಂಬಾ ಅಗತ್ಯವಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಸ್ಥಾಪಕರಾದ ವರಲಕ್ಷ್ಮಿ.ಬಿ.ಎಸ್, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಿತ.ಎಸ್ ಮತ್ತು ಪ್ರಾಂಶುಪಾಲರಾದ ಮಂಜುನಾಥ್.ಆರ್.ಎ ಸೇರಿದಂತೆ ಶಾಲೆ ಮತ್ತು ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ಮಕ್ಕಳು ಇದ್ದರು.