ಯಾದಗಿರಿ ಮುಂಜಾನೆ ವಾರ್ತೆ:
ರೈತರಿಗೆ ಡಿಸೇಲ್ ಪಂಪ್‌ಸೆಟ್ ವಿತರಣೆ: ಶರಣಗೌಡ ಕಂದಕೂರ
ಯಾದಗಿರಿ : ಕೃಷಿ ಇಲಾಖೆ ಅಧಿಕಾರಿಗಳಿಗೆ ಹೆಚ್ಚಾಗಿ ಜನರ ಕೆಲಸ ಮಾಡಿಕೊಡ್ರಿ ಪುಣ್ಯರ‍್ತಾದಾ. ನೀವು ರೈತರನ್ನು ಸತಾಯಿಸಬೇಡಿ, ನಿಮ್ಮ ಇಲಾಖೆಯಿಂದ ಸರ್ಕಾರದ ಗೌರವ ಇದೇ ಅದನ್ನು ನೀವು ಅರ್ಥಮಾಡಿಕೊಳ್ಳಬೇಕು, ಸುಖಾಸುಮ್ಮನೇ ಯಾವುದೇ ಸಣ್ಣ ರೈತರಿಗೆ ನೀವು ಇಲಾಖೆ ಕಚೇರಿಗೆ ಅಲೆದಾಡುವಂತೆ ಮಾಡಬೇಡಿ ಎಂದು ಕಿವಿಮಾತು ಹೇಳಿದರು.
ನಗರದ ಗುರುಮಠಕಲ್ ಶಾಸಕರ ಜನಸಂಪರ್ಕ ಕಚೇರಿಯಲ್ಲಿ ಶನಿವಾರ ಬೆಳಗ್ಗೆ ಕ್ಷೇತ್ರದ ಬಂದಳ್ಳಿ, ಚಾಮನಳ್ಳಿ, ಚಾಮನಳ್ಳಿ ತಾಂಡಾ, ಕಂಚಗಾರಹಳ್ಳಿ ರೈತರಿಗೆ ಡಿಸೇಲ್ ಪಂಪ್‌ಸೆಟ್ ವಿತರಿಸಿ ಮಾತನಾಡಿದರು.
ಕೃಷಿ ಪ್ರಧಾನವಾದ ದೇಶ ನಮ್ಮದಾಗಿರುವುದರಿಂದ ನಾವು ರೈತರನ್ನು ಅತ್ಯಂತ ಕಾಳಜಿಯಿಂದ ನೋಡಿಕೊಳ್ಳಬೇಕಿದೆ. ಅನ್ನದಾತರಿಂದ ದೇಶದ ಸಮೃದ್ಧಿ ಇದೆ, ಅಂತಹ ರೈತರಿಗೆ ಸಾಧ್ಯವಾದಷ್ಟು ನಾವು ಸಹಕಾರ ನೀಡಿ ಅವರ ಅಭಿವೃದ್ಧಿಗೆ ಚಿಂತನೆ ಮಾಡಬೇಕಿದೆ, ಅವರ ಶ್ರಮದಿಂದ ದೇಶವಿಂದು ಆರ್ಥಿಕ ಸಬಲತೆ ಹೊಂದಲು ಸಾಧ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ರಾಮಣ್ಣಗೌಡ ಮಲ್ಹಾರ, ಬಸವರಾಜಗೌಡ ಚಾಮನಳ್ಳಿ, ಅಜಯರಡ್ಡಿ ಎಲ್ಹೇರಿ, ಸುಭಾಸ ಕಟಕಟಿ, ಕೃಷಿ ಇಲಾಖೆ ಅಧಿಕಾರಿಗಳಾದ ಸುರೇಶ, ಯಾಮರಡ್ಡಿ, ಶರಣಗೌಡ ಚಾಮನಳ್ಳಿ, ಅಂಬ್ರೇಶಗೌಡ ಬಂದಳ್ಳಿ, ಜಿ. ತಮ್ಮಣ್ಣ ಗುರುಮಠಕಲ್, ಯಂಕೋಬ ಕಂಚಗಾರಹಳ್ಳಿ, ಭೀಮರಾತಯ ಕಂಚಗಾರಹಳ್ಳಿ, ಬಂದಪ್ಪಗೌಡ ಲಿಂಗೇರಿ, ಮಹಿಪಾಲರೆಡ್ಡಿ ಸಾವೂರ, ಸಂತೋಷ ಚಾಮನಳ್ಳಿ ತಾಂಡಾ, ನಾಗರಾಜ ಬಂದಳ್ಳಿ, ಚಂದ್ರಶೇಖರ ಕಂಚಗಾರಹಳ್ಳಿ ಸೇರಿದಂತೆ ಇತರರಿದ್ದರು.
ಬಾಕ್ಸ್ ಬಳಸಿ…
ಗುರುಮಠಕಲ್ ಶಾಸಕ ಶರಣಗೌಡ ಕಂದಕೂರರವರ ಯಾದಗಿರಿ ನಗರದ ಜನಸಂಪರ್ಕ ಕಚೇರಿ ಸದಾ ಜನಸಂದಣಿಯ ತಾಣ..ಏನಣ್ಣ ಬಂದ್ರಿ, ಏನ್ ಕೆಲಸ ಇತ್ತಾ?
ಯಾದಗಿರಿ : ಏನಣ್ಣ ಬಂದ್ರಿ, ಏನ್ ಕೆಲಸ ಇತ್ತಾ? ಹೀಗೆ ತಮ್ಮ ಜನಸಂಪರ್ಕ ಕಚೇರಿಗೆ ಬಂದವರನ್ನು ಅತಿಪ್ರೀತಿ ಕಾಳಜಿಯಿಂದ ಮಾತನಾಡಿಸಿ ನಾಗರೀಕರ ಕುಂದುಕೊರತೆಗಳನ್ನು ಕೇಳುವ ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಇಲ್ಲಿನ ಬಹುಮೆಚ್ಚಿನ ಯುವ ನಾಯಕರಾಗಿ ಹೊರಹೊಮ್ಮಿದ್ದಾರೆ.
ಶಾಸಕರು ಕಚೇರಿಗೆ ಬಂದಿದ್ದಾರೆ ಎನ್ನುವ ಸುದ್ದಿ ಕಿವಿಗೆ ಬಿಳುತ್ತಲೇ ಇರುವೆ ಸಾಲಿನಂತೆ ದೌಡಾಯಿಸುವ ಜನತೆ ತಮ್ಮ ಅಹವಾಲುಗಳನ್ನು ಇಟ್ಟುಕೊಂಡು ಸದಾ ಕಚೇರಿ ಎದುರು ನಿಂತಿರುವುದನ್ನು ನಾವು ಗಮನಿಸಬಹುದು.
ಜನರ ಸಮಸ್ಯೆಗಳನ್ನು ಆಲಿಸುತ್ತಲೇ ಸಂಬಂಧಿಸಿದ ಅಧಿಕಾರಿಗಳಿಗೆ ಪೋನಾಯಿಸುವ ಶಾಸಕರು ನೋಡಿ ಜನರು ನಮ್ಮ ಬಳಿಗೆ ಬರುವ ಮುಂಚೆ ಅವರ ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಡಿ. ಅತಿಸಣ್ಣ ಸಣ್ಣ ಕೆಲಸಗಳಿಗೂ ಜನರು ಶಾಸಕರ ಕಚೇರಿಗೆ ಬರುವ ಹಾಗೆ ಯಾವೊಬ್ಬ ಅಧಿಕಾರಿಗಳು ನಡೆದುಕೊಳ್ಳಬಾರದು ಯಾವುದೇ ರೀತಿಯ ಜನರ ಶೋಷಣೆ ನಾ ಸಹಿಸಲ್ಲ ಎನ್ನುತ್ತಾ ಮತಕ್ಷೇತ್ರದ ಜನರು ಹೊತ್ತುತಂದ ಸಮಸ್ಯೆಗಳನ್ನು ಪರಿಹರಿಸುವ ಸಮಯದಲ್ಲಿ ಅಧಿಕಾರಿಗಳಿಗೆ ಶಾಸಕರು ಚಾಟಿಬಿಸುವ ಪರಿ ಇದು.