2023 -24 ನೇ ಸಾಲಿನ ಸಾಂಸ್ಕೃತಿಕ ಕ್ರೀಡೆ ರಾಷ್ಟ್ರೀಯ ಸೇವಾ ಯೋಜನೆ ಉದ್ಘಾಟನಾ ಸಮಾರಂಭ ಕಾಲೇಜು ಆವರಣದಲ್ಲಿ ನಡೆಯಿತು.
ಕರ್ನಾಟಕ ಸರ್ಕಾರ. ಕಾಲೇಜು ಶಿಕ್ಷಣ ಇಲಾಖೆ. ಮೈಸೂರು ವಿಶ್ವವಿದ್ಯಾನಿಲಯ. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಲಗೂರು. 2023 -24 ನೇ ಸಾಲಿನ ಸಾಂಸ್ಕೃತಿಕ ಕ್ರೀಡೆ ರಾಷ್ಟ್ರೀಯ ಸೇವಾ ಯೋಜನೆ ಚಟುವಟಿಕೆಗಳ ಕಾರ್ಯಕ್ರಮ ಉದ್ಘಾಟನಾ ಸಮಾರಂಭ ಕಾಲೇಜು ಆವರಣದಲ್ಲಿ ನಡೆಯಿತು,
ಹಲಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ರಕ್ಷಿತಾ ಜೀವನ್ ಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು
ಪ್ರಾಧ್ಯಾಪಕರಾದ ಶಂಕರೇಗೌಡ ಮಾತನಾಡಿ ಪ್ರತಿಯೊಬ್ಬ ವಿದ್ಯಾರ್ಥಿಯು ತಪಸ್ವಿಯಾಗೆ ತಪಸ್ವಿ ಅಂದರೆ ಋಷಿ ಅಲ್ಲ. ಭತ್ತ ತುಂಬುವ ಚೀಲವಾಗಬಾರದು. ಬತ್ತ ತುಂಬವ ಕಣಜವಾಗಬಾರದು. ಭತ್ತ ಬೆಳೆಯುವ ಗದ್ದೆಯಾಗಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯು ಒಳ್ಳೆಯ ವಿದ್ಯಾಭ್ಯಾಸ ಪಡೆದು ಒಳ್ಳೆಯ ಹುದ್ದೆಗೆ ಹೋಗಬೇಕು. ಪ್ರಥಮ ಬಿಎ. ಬಿಕಾಂ ವಿದ್ಯಾರ್ಥಿಗಳಿಗೆ ಸ್ವಾಗತ ಬಯಸುತ್ತೇನೆ ಎಂದರು,
ಹಲಗೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಆಲಂಗೂರು ಮಂಜುನಾಥ್ ಅವರು ಮಾತನಾಡಿಸಾಂಸ್ಕೃತಿಕ ಕ್ರೀಡೆ ರಾಷ್ಟ್ರೀಯ ಸೇವಾ ಯೋಜನೆಗಳು ಒಂದು ದೇಶದ ಸಾಂಸ್ಕೃತಿಕ ಹೊಣೆಯನ್ನು ಬೆಳೆಸುವ ಮತ್ತು ಸಮಾಜದ ಕ್ಷೇಮವನ್ನು ಹೆಚ್ಚಿಸುವ ಉದ್ದೇಶದಿಂದ ನಡೆಯುತ್ತವೆ. ಈ ಯೋಜನೆಗಳ ಚಟುವಟಿಕೆಗಳಲ್ಲಿ ಸಾಂಸ್ಕೃತಿಕ ಸಂರಕ್ಷಣೆ, ಕ್ರೀಡಾ ಪ್ರಕಟನೆ, ಕಲೆ ಹಾಗೂ ಸಂಗೀತ ಕಾರ್ಯಕ್ರಮಗಳ ನೆರವೇರಿಕೆ, ಸಾಂಸ್ಕೃತಿಕ ಗಣತಂತ್ರ ಮತ್ತು ಹರಿಜನರ ಸಾಂಸ್ಕೃತಿಕ ಪ್ರಮುಖತೆಯ ಬೆಳವಣಿಗೆ ಮತ್ತು ಅಭಿವೃದ್ಧಿ ಸೇರಿದೆ. ಈ ಯೋಜನೆಗಳನ್ನು ಅನುಷ್ಠಾಪನೆ ಮಾಡುವುದು ಸಾರ್ವಜನಿಕ ಸ್ವಾಗತಾರ್ಹವಾಗಿದೆ, ಏಕೆಂದರೆ ಅವು ಸಾಮಾಜಿಕ ಸಾಮರ್ಥ್ಯವನ್ನು ಉತ್ತೇಜಿಸುತ್ತವೆ ಮತ್ತು ಜನರಿಗೆ ಸಂತೋಷವನ್ನು ತರುತ್ತವೆ. ನಮ್ಮ ಕಾಲೇಜಿನ ಬಗ್ಗೆ ಅಪಾರ ಕಾಳಜಿ ಹೊಂದಿರುವ ಪಿಎಂ ನರೇಂದ್ರಸ್ವಾಮಿ ರವರು ಅನಿವಾರ್ಯ ಕಾರಣ ಕಾರ್ಯಕ್ರಮಕ್ಕೆ ಹಾಜರಾಗಲಿಲ್ಲ ಅವರು ಕೂಡ ಫೋನಿನ ಮುಖಾಂತರ ವಿದ್ಯಾರ್ಥಿಗಳಿಗೆ ಶುಭಾಶಯ ಕೋರಿದ್ದಾರೆ ಮಳವಳ್ಳಿ ತಾಲೂಕನ್ನು ಪ್ರವಾಸೋದ್ಯಮಕ್ಕೆ ಇಲಾಖೆಗೆ ಸೇರಿಸಬೇಕು ಎಂದು ಗುರಿ ಇಟ್ಟಿದ್ದಾರೆ ಆ ಕೆಲಸ ಆದರೆ ಹಲವಾರು ವಿದ್ಯಾರ್ಥಿಗಳಿಗೆ ಕೆಲಸ ಸಿಕ್ಕಂತೆ ಎಂದರು,
ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ರಕ್ಷಿತಾ ಉಪಾಧ್ಯಕ್ಷರಾದ ಲತಾಮಹದೇವು. ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಕುಮಾರ್. ಜೀವನ್ ಕುಮಾರ್. ಕುಂತೂರು ಗೋಪಾಲ್. ಯಶ್ವಂತ್. ಜಮೀನ್ ಪಾಶ. ಪ್ರಸನ್ನ ಮತ್ತಿತರರು ಇದ್ದರು.