ರಾಜ್ಯ
Trending

೬ ರಂದು ತಾಳಿಕೋಟೆಯಲ್ಲಿ ಶ್ರೀರಾಮ ನವಮಿ ಉತ್ಸವ

ಶ್ರೀರಾಮ ನವಮಿ ಉತ್ಸವ ಸಮಿತಿಯ ನೇತೃತ್ವದಲ್ಲಿ ಪ್ರಥಮಭಾರಿಗೆ ಹಿಂದೂ ಹೃದಯ ಸಾಮ್ರಾಟ, ಮರ್ಯಾದಾ ಪುರುಷೋತ್ತಮ, ಆದಿಪುರುಷ, ಧಶರಥ ನಂದನ ಶ್ರೀ ರಾಮಚಂದ್ರನ ನವಮಿ ಉತ್ಸವನ್ನು ಇದೇ ದಿ.೬ ರಂದು ಆಯೋಜಿಸಲಾಗಿದೆ ಎಂದು ಶ್ರೀರಾಮ ನವಮಿ ಉತ್ಸವ ಸಮಿತಿಯ ಮುಖಂಡ ಅಮೀತಸಿಂಗ್ ಮನಗೂಳಿ ಅವರು ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು ಶ್ರೀರಾಮ ಅನ್ನುವದು ಒಂದು ಹೆಸರಲ್ಲಾ ಅದೊಂದು ಹಿಂದೂತ್ವದ ಕಿರೀಟವಾಗಿದೆ ಅಲ್ಲದೇ ಇಡೀ ವಿಶ್ವವೇ ಪೂಜಿಸುವಂತಹ ಆರಾಧಿಸುವಂತಹ ಶಕ್ತಿಯುತ ಶ್ರೀರಾಮಲಲ್ಲಾನ ಈ ಉತ್ಸವವು ಅಂದು ಸಾಯಂಕಾಲ ೪ ಗಂಟೆಗೆ ಶ್ರೀ ಮಹಾರಾಣಾಪ್ರತಾಪಸಿಂಹ್ ವೃತ್ತದಿಂದ ಶ್ರೀರಾಮಚಂದ್ರನ ಭಾವಚಿತ್ರದ ಭವ್ಯ ಶೋಭಾಯಾತ್ರೆಯು ಪ್ರಾರಂಭಗೊಂಡು ಶಿವಾಜಿ ಮಹಾರಾಜರ ವೃತ್ತ, ವಿಠ್ಠಲ ಮಂದಿರ ರಸ್ತೆ, ಕತ್ರಿ ಭಜಾರ, ಶ್ರೀ ಅಂಬಾಭವಾನಿ ಮಂದಿರ ರಸ್ತೆ, ಅಂಬೇಡ್ಕರ್ ವೃತ್ತ, ಬಸವೇಶ್ವರ ಸರ್ಕಲ್ ಮಾರ್ಗವಾಗಿ ಮರಳಿ ಮಹಾರಾಣಾಪ್ರತಾಪಸಿಂಹ್ ವೃತ್ತಕ್ಕೆ ಮುಕ್ತಾಯಗೊಳ್ಳಲಿದೆ. ಕಾರಣ ತಾಳಿಕೋಟೆ ನಗರದ ಮತ್ತು ಸುತ್ತಮುತ್ತಲಿನ ಗ್ರಾಮಗಳ ಹಿಂದೂ ಸಮಾಜ ಬಾಂದವರು, ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಭವ್ಯ ಶೋಭಾಯಾತ್ರೆಯನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ಈ ಸಮಯದಲ್ಲಿ ಮಾರ್ಗದರ್ಶಕ ಸದಸ್ಯರಾದ ಸುರೇಶ ಹಜೇರಿ, ಗೋವಿಂದಸಿಂಗ್ ಹಜೇರಿ, ಸುದೀರ ತಿವಾರಿ, ಗಂಗಾರಾಮಸಿಂಗ್ ಕೊಕಟನೂರ, ರಾಜು ಹಜೇರಿ, ಸಂದೀಪ ಬನಸಿ, ರಾಘು ಹಜೇರಿ, ವಿಠ್ಠಲಸಿಂಗ್ ಹಜೇರಿ, ನೀತಿನ ವಿಜಾಪೂರ, ಸುರಜ್ ಹಜೇರಿ ಮೊದಲಾದವರು ಇದ್ದರು.

Related Articles

Leave a Reply

Your email address will not be published. Required fields are marked *

Back to top button