ಹೊನ್ನಶೆಟ್ಟರಹುಂಡಿ ಪ್ರಮೋದ್ ಕುಮಾರ್ :ಸಿ.ಎಮ್ ವಿಶೇಷ ಕರ್ತವ್ಯಾಧಿಕಾರಿಯಾಗಿ ನೇಮಕ
ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ವಿಶೇಷ ಕರ್ತವ್ಯಾಧಿ
ಕಾರಿಯಾಗಿ ಗುಂಡ್ಲುಪೇಟೆಯ ಪ್ರಮೋದ್ ಕುಮಾರ್ .ಜೆ ನೇಮಕಗೊಳಿಸಿ ರಾಜ್ಯ ಸರ್ಕಾರ ಆದೇಶ ಮಾಡಿದೆ
ಗುಂಡ್ಲುಪೇಟೆ ತಾಲೂಕಿನ ಹೊನ್ನಶೆಟ್ಟರಹುಂಡಿ ಗ್ರಾಮದ ನಿವೃತ್ತ ಪೋಲಿಸ್ ಅಧಿಕಾರಿ ಜವರೇಗೌಡ ಪುತ್ರರಾದ ಜೆ.ಪ್ರಮೋದ್ ಕುಮಾರ್ ನೇಮಕಗೊಂಡಿರುವುದು ತಾಲೂಕಿನ ಹಿರಿಮೆಯನ್ನು ಹೆಚ್ಚಿಸಿದೆ
2018 ರಲ್ಲಿ ಗುಂಡ್ಲುಪೇಟೆ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾಗಿ ಎರಡೂವರೆ ವರ್ಷ ಕರ್ತವ್ಯ ನಿರ್ವಹಿಸಿದ್ದರು ನಂತರ
ಚಾಮರಾಜನಗರ ವಾಲ್ಮೀಕಿ ನಿಗಮ ವ್ಯವಸ್ದಾಪರಾಗಿ ನಂತರ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ ಜಿಲ್ಲಾ ವ್ಯವಸ್ಥಾಪಕರಾಗಿ ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿದ್ದರು
ಪುಟ್ಟಹಳ್ಳಿಯ ಯುವಕ
ರೊಬ್ಬರು ರಾಜ್ಯದ ಮುಖ್ಯ ಮಂತ್ರಿ ವಿಶೇಷ ಕರ್ತವ್ಯಾಧಿಕಾರಿ
ಯಾಗಿ ನೇಮಕಗೊಂಡಿರುವ ತುಂಬಾ ಸಂತಸದ ವಿಶೇಷವಾಗಿ ಎಂದು ನಿವೃತ್ತ ಸಹಾಯಕ ಸಬ್ ಇನ್ ಪೆಕ್ಟರ್ ಜವರೇಗೌಡ ಸಂತೋಷ ವ್ಯಕ್ತಪಡಿಸಿದ್ದಾರೆ
ಮುಖ್ಯ ಮಂತ್ರಿ ವಿಶೇಷ ಕರ್ತವ್ಯಾಧಿಕಾರಿಯಾಗಿ ನೇಮಕಗೊಳಿಸಿ ಸರ್ಕಾರದ ಅಧೀನ ಕಾರ್ಯದರ್ಶಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಕೆ.ವಿ.ಅಶೋಕ ಆದೇಶ ಮಾಡಿದ್ದಾರೆ