ಇತ್ತೀಚಿನ ಸುದ್ದಿರಾಜ್ಯ

ಭಯಪಟ್ಟು ಬದುಕುವ ವ್ಯಕ್ತಿ ನಾನಲ್ಲ- ಶಾಸಕ ನಾಡಗೌಡ(ಅಪ್ಪಾಜಿ)

ಮುಂಜಾನೆ ವಾರ್ತೆ ಸುದ್ದಿ ತಾಳಿಕೋಟಿ. ನನ್ನ 40 ವರ್ಷದ ರಾಜಕೀಯ ಜೀವನದಲ್ಲಿ ನಾನೆಂದೂ ಹೇಡಿ ರಾಜಕಾರಣ ಮಾಡಿಲ್ಲ ನನಗೆ ದೇವರನ್ನು ಹೊರತುಪಡಿಸಿ ಬೇರೆ ಯಾರ ಭಯವೂ ಇಲ್ಲ ಸಹನೆ ನನ್ನ ಸಂಸ್ಕೃತಿ ದೌರ್ಬಲ್ಯ ಅಲ್ಲ ನಾನು ಸಮಯ ಬಂದಾಗ ಎಲ್ಲವನ್ನು ಮಾಡಿ ತೋರಿಸಬಲ್ಲೆ ಎಂದು ಕರ್ನಾಟಕ ಸರ್ಕಾರದ ಸಾಬೂನು ಮತ್ತು ಮಾಜ೯ಕ ನಿಗಮದ ಅಧ್ಯಕ್ಷ.ಶಾಸಕ ಸಿ.ಎಸ್. ನಾಡಗೌಡ (ಅಪ್ಪಾಜಿ) ಹೇಳಿದರು. ಪಟ್ಟಣದ ಮಹಲ್ ಗಲ್ಲಿ ಸಮಾಜದ ವತಿಯಿಂದ ಹಮ್ಮಿಕೊಂಡ ಸನ್ಮಾನ ಮತ್ತು ಅಭಿನಂದನಾ ಸಮಾರಂಭದಲ್ಲಿ ಸನ್ಮಾನವನ್ನು ಸ್ವೀಕರಿಸಿ ಅವರು ಮಾತನಾಡಿದರು. ಈ ಮತಕ್ಷೇತ್ರದಲ್ಲಿ ಜನರು ನನಗೆ 35 ವರ್ಷಗಳಿಂದ ಆಶೀರ್ವದಿಸಿ ಸೇವೆ ಮಾಡುವ ಅವಕಾಶವನ್ನು ಮಾಡಿಕೊಟ್ಟಿದ್ದಾರೆ ನಾನೆಂದೂ ಕೆಟ್ಟ ರಾಜಕಾರಣ ಮಾಡಿ ಅವರ ವಿಶ್ವಾಸಕ್ಕೆ ಧಕ್ಕೆ ತರುವ ಕೆಲಸ ಮಾಡಿಲ್ಲ. ಕ್ಷೇತ್ರದ ಜನರು ತೋರಿದ ಪ್ರೀತಿ ವಿಶ್ವಾಸದ ಋಣವನ್ನು ನಾನು ಯಾವ ಜನ್ಮದಲ್ಲಿಯೂ ಈಡೇರಿಸಲು ಸಾಧ್ಯವಿಲ್ಲ ಎಂದು ಹೇಳುತ್ತಾ ಅವರು ಬಾವುಕರಾದರು. ನಾನು ಸುಸಂಸ್ಕೃತ ಮನೆತನದಿಂದ ಬಂದ ವ್ಯಕ್ತಿ ನನಗೆ ಚಿಲ್ಲರೆ ರಾಜಕಾರಣ ಗೊತ್ತಿಲ್ಲ ಎಂದ ಅವರು ಯಾರು ಏನೇ ಕುತಂತ್ರ ಮಾಡಿದರೂ ನನ್ನ ಮತ ಕ್ಷೇತ್ರದ ಜನರು ಬುದ್ಧಿವಂತರು ಅವರೇ ನಿಮಗೆ ತಕ್ಕ ಪಾಠ ಕಲಿಸುತ್ತಾರೆ ಎಂದರು.ಕಾಂಗ್ರೆಸ್ ಪಕ್ಷ ನನಗೆ ಎಲ್ಲವನ್ನು ಕೊಟ್ಟಿದೆ ನನ್ನ ಹಿರಿತನದ ಆಧಾರದಲ್ಲಿ ನನಗೆ ಸೂಕ್ತ ಸ್ಥಾನ ಸಿಗಬೇಕಾಗಿತ್ತು ಖಂಡಿತವಾಗಿಯೂ ನಿಮಗೆ ಬೇಜಾರಾಗಿದೆ ರಾಜಕೀಯದಲ್ಲಿ ಇದೆಲ್ಲವೂ ಸಾಮಾನ್ಯ ಏನು ಮಾಡಲು ಆಗುವುದಿಲ್ಲ ನನಗೆ ಅಧಿಕಾರ ಮುಖ್ಯವಲ್ಲ ನಿಮ್ಮ ಸೇವೆ ಮುಖ್ಯವಾಗಿದೆ ಎಂದರು. ಬರಲಿರುವ ಚುನಾವಣೆಗಳು ದೇಶದ ಭವಿಷ್ಯವನ್ನು ನಿರ್ಧರಿಸಲಿವೆ ಯೋಚಿಸಿ ಮತ ಚಲಾಯಿಸಿ ದೇಶದ ಜಾತ್ಯತೀತ ವ್ಯವಸ್ಥೆ ಬಲಗೊಳಿಸಲು ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬಿ ಎಂದರು. ಈ ಸಮಯದಲ್ಲಿ ಮುಸ್ಲಿಂ ಧಾರ್ಮಿಕ ಮುಖಂಡ ಸಯ್ಯದ ಶಕೀಲ ಅಹ್ಮದ ಖಾಜಿ. ಮಹಲಗಲ್ಲಿ ಜಮಾತ ಅಧ್ಯಕ್ಷ ಹಸನಸಾಬ ಕೊರ್ಕಿ. ಗನಿಸಾಬ ಲಾಹೋರಿ. ಮೆಹಬೂಬ ಸಾಬ ಹಂಡೆಬಾಗ .ಹಸನಸಾಬ ಮನಗೂಳಿ. ಅಬ್ದುಲ್ ರೆಹಮನ ಸಮಾಜ ಕಟ್ಟಿ .ಹೈದರಶಾ ಮಕಾನದಾರ. ಕೆ. ಆಯ್. ಸಗರ. ರೋಶನ ಡೋಣಿ. ಇಬ್ರಾಹಿಂ ಮನ್ಸೂರ .ಎಂ.ಕೆ. ಚೋರಗಸ್ತಿ. ಸಿದ್ದನಗೌಡ ಪಾಟೀಲ. ಕಾಸಿಮ ಪಟೇಲ ಮೂಕಿಹಾಳ.ಯಾಸೀನ ಮಮದಾಪೂರ. ಮಹಲ್ ಗಲ್ಲಿ ಜಮಾತ ಸದಸ್ಯರು ಇದ್ದರು. ಮುಜಾಹೀದ ನಮಾಜಕಟ್ಟಿ ಸ್ವಾಗತಿಸಿದರು. ಅಬ್ದುಲ್ ಗನಿ ನಿರೂಪಿಸಿದರು. ನಿವೃತ್ತಿ ಶಿಕ್ಷಕ ಇಕ್ಬಾಲ್ ಖಾಜಿ ಕುರಾನ್ ಪಠಸಿದರು.

ವರದಿ ಸುನೀಲ್ ಎಲ್ ತಳವಾರ ಮುಂಜಾನೆ ವಾರ್ತೆ ತಾಳಿಕೋಟಿ

Related Articles

Leave a Reply

Your email address will not be published. Required fields are marked *

Back to top button