ರಾಜ್ಯ
Trending

ಹಿಂದೂಪರ ಸಂಘಟಿಕರಿಂದ ಪೂರ್ವಭಾವಿ ಸಭೆ೨ ರಂದು ಯತ್ನಾಳ ಉಚ್ಚಾಟನೆ ಖಂಡಿಸಿ ಬೃಹತ್ ಪ್ರತಿಭಟನೆ

ಮುಸ್ಸಂಜೆವಾಣಿ ಸುದ್ದಿ ತಾಳಿಕೋಟೆ, ಕೇಂದ್ರದ ಮಾಜಿ ಸಚೀವ ವಿಜಯಪುರ ನಗರದ ಹಾಲಿ ಶಾಸಕ ಬಸನಗೌಡ ಪಾಟೀಲ(ಯತ್ನಾಳ) ಅವರನ್ನು ಬಿಜೆಪಿ ಪಕ್ಷದಿಂದ ಉಚ್ಚಾಟಿಸಿರುವದನ್ನು ಖಂಡಿಸಿ ತಾಳಿಕೋಟೆ ನಗರದಲ್ಲಿ ಇದೇ ದಿ.೨ ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಪಕ್ಷದ ಹಿರಿಯ ಮುಖಂಡ ಕಾಶಿನಾಥ ಮುರಾಳ ಅವರು ಹೇಳಿದರು.

ಪಟ್ಟಣದ ಎಪಿಎಂಸಿ ಮಾರ್ಕೇಟ್ ಯಾರ್ಡಿನ್ ಸಭಾ ಭವನದಲ್ಲಿ ಕರೆಯಲಾದ ಹಿಂದೂಪರ ಸಂಘಟನೆಗಳ ಮುಖಂಡರ ಪೂರ್ವಭಾವಿ ಸಭೆಯ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು ಹಿಂದೂ ಪೈಯರ್ ಬ್ರ್ಯಾಂಡ್ ಎಂದೇ ಹೆಸರಾಗಿರುವ ಬಸನಗೌಡ ಪಾಟೀಲ(ಯತ್ನಾಳ) ಅವರನ್ನು ಬಿಜೆಪಿ ಪಕ್ಷದಿಂದ ಉಚ್ಚಾಟಿಸಿರುವದು ಸರಿಯಲ್ಲಾ ಇದರಿಂದ ಬಿಜೆಪಿ ಪಕ್ಷಕ್ಕೆ ತುಂಬಾ ನಷ್ಟ ಉಂಟಾಗಲಿದೆ ಅಲ್ಲದೇ ಅವರ ಉಚ್ಚಾಟನೆಯಿಂದ ಹಿಂದೂ ಸಮಾಜ ಬಾಂದವರಿಗೆ ತುಂಬಾ ನೋವು ಉಂಟು ಮಾಡಿದೆ ಬಿಜೆಪಿ ಪಕ್ಷ ಸದ್ಯ ರಾಜ್ಯದಲ್ಲಿ ಅಪ್ಪ ಮಕ್ಕಳ ಪಕ್ಷವೆಂದು ಹೆಸರು ಪಡೆಯುತ್ತಾ ಸಾಗಿದೆ ಅದನ್ನು ಬದಲಿಸುವ ಕೆಲಸ ಬಿಜೆಪಿ ಪಕ್ಷದ ವರಿಷ್ಠರು ಮಾಡಬೇಕು ಅದನ್ನು ಬಿಟ್ಟು ನಿಷ್ಠುರವಾದಿ ಪ್ರಕರ ಹಿಂದೂತ್ವವಾದಿ ಬಸನಗೌಡ ಪಾಟೀಲ(ಯತ್ನಾಳ) ಅವರನ್ನು ಪಕ್ಷದಿಂದ ಉಚ್ಚಾಟಿಸಿರುವದು ಏಷ್ಟು ಸರಿ ಎಂದು ಪ್ರಶ್ನೀಸಿದ ಅವರು ಬಸನಗೌಡ ಪಾಟೀಲ(ಯತ್ನಾಳ) ಅವರು ಸದ್ಯ ಒಬ್ಬಂಟಿಗರೆಂದು ತಿಳಿಯಬೇಡಿ ಅವರ ಹಿಂದೂ ಇಡೀ ಕರ್ನಾಟಕ ರಾಜ್ಯದ ಹಿಂದೂ ಸಮಾಜವೇ ಬೆನ್ನೇಲುಬಾಗಿ ನಿಂತಿದೆ ಇದನ್ನು ಬಿಜೆಪಿ ಪಕ್ಷದ ವರಿಷ್ಠರು ತಿಳಿದುಕೊಳ್ಳಬೇಕು ಯತ್ನಾಳ ಅವರ ಉಚ್ಚಾಟಿಸಿದ ಕೇವಲ ೫ ದಿನಗಳಲ್ಲಿ ೩೦ ಲಕ್ಷಕ್ಕೂ ಅಧಿಕ ಬಿಜೆಪಿ ಕಾರ್ಯಕರ್ತರು ಪ್ರಾಥಮಿಕ ಸದಸ್ಯತ್ವದಿಂದ ಹೊರಬಂದಿದ್ದಾರೆ ಮುಂದೆ ಹೀಗೆ ಬಿಟ್ಟರೆ ಬಿಜೆಪಿ ಪಕ್ಷಕ್ಕೆ ದೊಡ್ಡ ನಷ್ಠ ಉಂಟಾಗಲಿದೆ ಎಂದ ಅವರು ಇದೇ ದಿ. ಏಪ್ರೀಲ್ ೨ ರಂದು ತಾಳಿಕೋಟೆ ನಗರದಲ್ಲಿ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು, ವಿವಿಧ ಎಲ್ಲ ಸಮಾಜ ಬಾಂದವರು ಅಲ್ಲದೇ ಮುದ್ದೇಬಿಹಾಳ ಮತ್ತು ದೇವರ ಹಿಪ್ಪರಗಿ ಮತಕ್ಷೇತ್ರಗಳ ಹಿಂದೂ ಸಮಾಜ ಬಾಂದವರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಅಂದು ಬೆಳಿಗ್ಗೆ ೧೦ ಗಂಟೆಗೆ ರಾಜವಾಡೆಯಿಂದ ಪ್ರತಿಭಟನೆ ಪ್ರಾರಂಭಗೊಂಡು ಕತ್ರಿ ಭಜಾರ ಮಾರ್ಗವಾಗಿ ಬಾಲಾಜಿ ಮಂದಿರ ರಸ್ತೆ, ವಿಠ್ಠಲ ಮಂದಿರ ರಸ್ತೆ, ಶಿವಾಜಿ ಮಹಾರಾಜರ ವೃತ್ತ, ಮಹಾರಾಣಾಪ್ರತಾಪಸಿಂಹರ ವೃತ್ತ, ಬಸ್ ನಿಲ್ದಾಣದ ರಸ್ತೆಯ ಮೂಲಕ ಬಸವೇಶ್ವರ ವೃತ್ತಕ್ಕೆ ಆಗಮಿಸಿ ಭಹಿರಂಗ ಸಭೆಯಾಗಿ ಮಾರ್ಪಡಲಿದೆ ಕಾರಣ ಯತ್ನಾಳ ಅಭಿಮಾನಿಗಳು, ಹಾಗೂ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು, ಸಮಾಜ ಬಾಂದವರು ಪಾಲ್ಗೊಂಡು ಪ್ರತಿಭಟನಾ ಮೇರವಣಿಗೆಯನ್ನು ಯಶಸ್ವಿಗೊಳಿಸಬೇಕೆಂದರು.

ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿಗೆ ಪಕ್ಷದ ಸಿದ್ದಾಂತವೇ ಗೊತ್ತಿಲ್ಲಾ ಎಲ್ಲ ಪಕ್ಷಗಳನ್ನು ಸುತ್ತಾಡಿ ಬಂದ ನಡಹಳ್ಳಿ ಈಗ ಬಿಜೆಪಿ ಸಿದ್ದಾಂತ ತತ್ವ ಸಿದ್ದಾಂತದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲದ ವ್ಯಕ್ತಿಯಾಗಿದ್ದಾನೆ ಯತ್ನಾಳ ಅವರ ಬಗ್ಗೆ ಮಾತನಾಡಿದರೆ ದೊಡ್ಡವನಾಗುತ್ತೇನೆಂದು ತಿಳಿದಿರುವ ನಡಹಳ್ಳಿ ಕೊನೇವರೆಗೂ ಮಾಜಿಯಾಗಿಯೇ ಉಳಿಯುತ್ತಾರೆಂದು ಬಿಜೆಪಿ ಪಕ್ಷದ ಹಿರಿಯ ಮುಖಂಡ ಸುರೇಶ ಅವರು ನಡಹಳ್ಳಿ ಹೇಳಿಕೆಗೆ ತಿರುಗೇಟು ನೀಡಿದರು.

ಎ.ಎಸ್.ಪಾಟೀಲ(ನಡಹಳ್ಳಿ) ಹಿಂದೂತ್ವ ಮರೆತಿದ್ದಕ್ಕೆ ಚುನಾವಣೆಯಲ್ಲಿ ಸೋತು ಮಾಜಿ ಆಗಿದ್ದಾರೆ ಮುಂದೇನೂ ಮಾಜಿ ಆಗಿಯೇ ಉಳಿಯುತ್ತಾರೆ ಇತ ಎಂದೂ ಮತ್ತೇ ಹಾಲಿಯಾಗುವದಿಲ್ಲಾ ಇವತ್ತು ಮುದ್ದೇಬಿಹಾಳ ಕ್ಷೇತ್ರದ ಹಿಂದೂಗಳು ಶಪತ್ತು ಮಾಡುತ್ತಿದ್ದೇವೆ ನಡಹಳ್ಳಿ ಖಾಯಂ ಮಾಜಿ ಶಾಸಕನ್ನಾಗಿ ಮಾಡುತ್ತೇವೆ ಯಾಕೆಂದರೆ ನಡಹಳ್ಳಿಗೆ ಬಿಜೆಪಿ ಪಕ್ಷದ ಸಿದ್ದಾಂತ ಗೊತ್ತಿಲ್ಲಾ. ಹಿಂದೂತ್ವ ಗೊತ್ತಿಲ್ಲದ ವ್ಯಕ್ತಿಯಾಗಿದ್ದಾರೆ ಯತ್ನಾಳ ಅವರ ಬಗ್ಗೆ ಮಾತಾಡಿದರೆ ನಾನು ದೊಡ್ಡವನಾಗುತ್ತೇನೆಂದು ಬಾಯಿ ಚಪಲದಿಂದ ಮಾತನಾಡುತ್ತಿರುವ ನಡಹಳ್ಳಿ ಯತ್ನಾಳ ಬಿಜೆಪಿ ಪಕ್ಷದ ಹಿರಿಯ ನಾಯಕರೆಂಬುದು ಅರೀವಿನಲ್ಲಿರಬೇಕು ಚುನಾವಣೆಯಲ್ಲಿ ನಡಹಳ್ಳಿ ಅವರು ಹಿಂದೂಗಳನ್ನು ಮರೆತಿದ್ದಕ್ಕೆ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಿ ಮಾಜಿ ಮಾಡಿದ್ದೇವೆ ಮುಂದೆಯೂ ಮಾಜಿ ಆಗಿಯೇ ಉಳಿಯುತ್ತಾರೆಂದು ಕಿಡಿ ಕಾರಿದರು.

ಯತ್ನಾಳ ಅವರನ್ನು ಪಕ್ಷದಿಂದ ಉಚ್ಚಾಟಿಸಿದಕ್ಕೆ ಕೆಲವರು ಪಟಾಕ್ಷಿ ಸಿಡಿಸಿ ಸಂಬ್ರಮೀಸಿದವರು ಎಲ್ಲರೂ ಕೂಡಾ ಮಾಜಿಗಳೇ ಆಗಿದ್ದಾರೆ ಮುಂದೆ ಎಂದೂ ಹಾಲಿಯಾಗುವದಿಲ್ಲಾ ಅವರು ಪಟಾಕ್ಷಿ ಸಿಡಿಸುವದಕ್ಕೆ ಮಾತ್ರ ಸಿಮೀತವಾಗಿದ್ದಾರೆಂದು ಟಿಕಿಸಿದರು.

ಯತ್ನಾಳ ಅವರು ಜನರನ್ನು ದುಡ್ಡು ಕೊಟ್ಟು ಸೇರಿಸಿ ಪ್ರತಿಭಟನೆ ಮಾಡಿಸುತ್ತಿದ್ದಾರೆಂಬ ಮಾಜಿ ಶಾಸಕ ನಡಹಳ್ಳಿ ಹೇಳಿಕೆ ಹಾಸ್ಯಾಸ್ಪದ ಯತ್ನಾಳ ಅವರ ಪರ ವಿಜಯಪುರ ಜಿಲ್ಲೆಯಲ್ಲಿ ಮಾತ್ರ ಹೋರಾಟ ನಡೆದಿಲ್ಲಾ ಕರ್ನಾಟಕ ರಾಜ್ಯದ ತುಂಬಾ ನಡೆದಿದೆ ಕರಾವಳಿ ಭಾಗದಲ್ಲಿಯೂ ಹೆಚ್ಚಾಗಿ ನಡೆದಿದೆ ನಡಹಳ್ಳಿ ಕಣ್ಣು ತೆರೆದು ನೋಡಬೇಕು ಮತ್ತು ಇದನ್ನು ಬಿಜೆಪಿ ಹೈಕಮಾಂಡ ಅವಲೋಕಿಸಬೇಕು.ಈ ಹಿಂದೆ ಹರ್ಷಾಕೊಲೆಯಾದಾಗ ಸ್ನೇಹಾ ಹಿರೇಮಠ ಕೊಲೆಯಾದಾಗ ಅವರ ಕುಟುಂಬದ ಜೊತೆ ನಿಂತವರು ಹೋರಾಟ ಮಾಡಿದವರು ಬಸನಗೌಡ ಪಾಟೀಲ ಯತ್ನಾಳ ಅವರು ಆಗಿದ್ದಾರೆ ಆ ಸಮಯದಲ್ಲಿ ಶಾಸಕರಾಗಿದ್ದ ನಡಹಳ್ಳಿ ಎಲ್ಲಿದ್ದರೂ ಗೊತ್ತಿಲ್ಲಾ ಈಗ ಬಾಯಿ ಚಪಲದ ಮಾತುಗಳನ್ನು ಹೇಳಿ ಯಡಿಯೂರಪ್ಪ ಕುಟುಂಭದ ಜೊತೆ ಸಂಬಂದ ಗಟ್ಟಿಗೊಳಿಸಿಕೊಳ್ಳಲು ಹೊರಟಿದ್ದಾರೆ ಇದು ಬಹಳ ದಿನ ಉಳಿಯುವದಿಲ್ಲಾ ವಿಜಯ ದಶಮಿ ಹಬ್ಬದೊಳಗೆ ರಾಜ್ಯದಲ್ಲಿ ದೊಡ್ಡ ಬದಲಾವಣೆಯಾಗಲಿದೆ ನಡಹಳ್ಳಿ ಅವರು ಮುಂದಿನ ದಾರಿ ಈಗಲೇ ನೋಡಿಕೊಳ್ಳುವದು ಒಳ್ಳೆಯದೆಂದು ಸುರೇಶ ಹಜೇರಿ ಕುಟುಕಿದರು.

ಈ ಸಮಯದಲ್ಲಿ ಮುಖಂಡರುಗಳಾದ ಬಿಜೆಪಿ ಪಕ್ಷದ ಮುಖಂಡರುಗಳಾದ ಪ್ರಭು ಬಿಳೇಭಾವಿ, ಮುದಕಣ್ಣ ಬಡಿಗೇರ, ಡಿ.ವ್ಹಿ.ಪಾಟೀಲ, ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ನಾಗಪ್ಪ ಚಿನಗುಡಿ, ಈಶ್ವರ ಹೂಗಾರ, ಮಂಜುನಾಥ ಶೆಟ್ಟಿ, ರಾಘವೇಂದ್ರ ಮಾನೆ, ರತನಸಿಂಗ್ ಕೊಕಟನೂರ, ವಿರೇಶ ಬಾಗೇವಾಡಿ, ರಾಮನಗೌಡ ಬಾಗೇವಾಡಿ, ಸಂತೋಷ ಹಜೇರಿ, ವಿಠ್ಠಲ ಮೋಹಿತೆ, ರವಿ ಕಟ್ಟಿಮನಿ, ರಾಮಚಂದ್ರ ಸುಭೇದಾರ, ಮಯೂರ ಪಾಟೀಲ, ಬಸ್ಸು ಮಾಲಿಪಾಟೀಲ, ನಾಗರಾಜ ಬಳಿಗಾರ, ಪ್ರಕಾಶ ಸಾಸಾಬಾಳ, ಮುತ್ತು ಕಶೆಟ್ಟಿ, ಲಂಕೇಶ ಪಾಟೀಲ, ಬಸನಗೌಡ ಪಾಟೀಲ, ಶಂಕ್ರಗೌಡ ಪಾಟೀಲ, ಅಣ್ಣಾಜಿ ಜಗತಾಪ, ಪ್ರಕಾಶ ಹಜೇರಿ, ಅಶೋಕ ಜಾಲವಾದಿ, ಚಂದ್ರು ಗೆಜ್ಜಿ, ನಿಂಗು ಕುಂಟೋಜಿ, ಸಂಗು ಹಾರಿವಾಳ, ವಿರೇಶ ಸಾಸನೂರ, ಸಿದ್ದು ಬೆಳಗುಂಪಿ, ಅಶೋಕ ಚಿನಗುಡಿ, ಭೀಮು ಸೂಳಿಭಾವಿ, ಅರುಣ ದಡೇದ, ದೇಗಿನಾಳ, ಕೋರಿ, ಪ್ರಕಾಶ ಪಾಟೀಲ ಒಳಗೊಂಡು ನೂರಾರು ಕಾರ್ಯಕರ್ತರು ಇದ್ದರು.

Related Articles

Leave a Reply

Your email address will not be published. Required fields are marked *

Back to top button