ರಾಜ್ಯ
Trending

ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣದಲ್ಲಿ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ನೀಡಿ, ದಲಿತ ವಿದ್ಯಾರ್ಥಿ ಪರಿಷತ್

ಮುದ್ದೇಬಿಹಾಳ :- ರಾಜ್ಯದಲ್ಲಿ ಈ ಹಿಂದೆ ನಡೆದಿರುವ ಧರ್ಮಸ್ಥಳದ ಸೌಜನ್ಯ ಎಂಬ ಹೆಣ್ಣು ಮಗಳನ್ನು ಅತ್ಯಾಚಾರ ಎಸಗಿ ಭಿಕರವಾಗಿ ಕೋಲೆ ಮಾಡಿದ ನರಹಂತಕರನ್ನು ತನಿಖೆ ಮಾಡಿ ಗಲ್ಲು ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿ ದಲಿತ ವಿಧ್ಯಾರ್ಥಿ ಪರಿಷತ್ ತಾಲೂಕ ಘಟಕದಿಂದ ತಹಶೀಲ್ದಾರ ಬಲರಾಮ ಕಟ್ಟಿಮನಿಯವರಿಗೆ ಮನವಿ ಸಲ್ಲಿಸಿದರು

ಮಾತನಾಡಿ ರಾಜ್ಯದ ಪುಣ್ಯ ಕ್ಷೇತ್ರವಾಗಿರುವ ಧರ್ಮಸ್ಥಳದಲ್ಲಿ ವಾಸವಾಗಿರುವ ಬಡಕುಟುಂಬದ ಸೌಜನ್ಯ ಎಂಬ ವಿಧ್ಯಾರ್ಥಿನಿ. ಕಾಲೇಜು ಬಿಟ್ಟು ಬರದೆ ಇದ್ದಾಗ ಹುಡು ಕಾಟದಲ್ಲಿದ್ದ ಕುಟುಂಬಸ್ಥರು ಮತ್ತು ಗ್ರಾಮಸ್ಥರಿಗೆ ಸೌಜನ್ಯ ಸಿಕ್ಕಿದ್ದು ಹೆಣವಾಗಿ ಕಾಲೇಜು ಮುಗಿಸಿಕೋಂಡು ಮನೆಗೆ ಬರುವ ಮಧ್ಯದಲ್ಲಿ ಆ ಹೆಣ್ಣು ಮಗಳನ್ನು ಅಪಹರಿಸಿ ಅತ್ಯಾಚಾರವೆಸಗಿ ಕ್ರೂರವಾಗಿ ಕೊಲೆ ಮಾಡಿರುವ ಘಟನೆ ಧರ್ಮಸ್ಥಳ ನೆಲದಲ್ಲಿ ನಡೆದಿದೆ, ಹನ್ನೊಂದು ವರ್ಷದಿಂದ ಅತ್ಯಾಚಾರ ಕೋಲೆಗಿಡಾದ ಸೌಜನ್ಯಳ ಕುಟುಂಬ ಹಾಗೂ ಸಂಭಂಧಿಕರು ನಿರಂತರವಾಗಿ ಹೋರಾಡುತ್ತಿದ್ದಾರೆ. ಆದರೂ ಇನ್ನೂ ಆ ಹೆಣ್ಣು ಮಗಳಿಗೆ ನ್ಯಾಯ ಸಿಕ್ಕಿಲ್ಲ.ಅನ್ಯಾಯ ಎಸಗಿದ್ದವರು ಧರ್ಮಸ್ಥಳದ ದೋಡ್ಡ ಕುಟುಂಬದ ವ್ಯಕ್ತಿಗಳು ಎಂಬ ಶಂಕೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ, ಸೌಜನ್ಯಳ ಪರ ಹೋರಾಟ ಮಾಡಿದ ಹೋರಾಟಗಾರರೂ ಸಾಕ್ಷಿಯನ್ನೂ ಒದಗಿಸಿದ್ದಾರೆ. ಆದರೂ ಇವತ್ತಿನ ವ್ಯವಸ್ಥೆ ಅವರನ್ನು ಏನು ಮಾಡದ ಸ್ಥಿತಿಯಲ್ಲಿದೆ, ಎಂಬುದು ವಿಪರ್ಯಾಸ.ಆದರಿಂದ ಅತ್ಯಾಚಾರ ಎಸಗಿದ ಮತ್ತು ಕೋಲೆ ಮಾಡಿದ ವ್ಯಕ್ತಿಗಳು ಯಾರೇ ಆಗಿರಲಿ ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೋಂಡು ಅನ್ಯಾಯಕ್ಕೆ ಒಳಗಾದ ಸೌಜನ್ಯಳ ಕುಟುಂಬಕ್ಕೆ ನ್ಯಾಯ ಕೋಡಿಸುವ ಕೆಲಸವಾಗಬೇಕೆಂದು ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆಯಲ್ಲಿ ಉಪಾಧ್ಯಕ್ಷರಾದ ಮುತ್ತು ಚಲವಾದಿ,ಮುತ್ತಾರಾಜ ಹರಿಜನ,ಗಣೇಶ ಮೂಕಾಲಜಿ,ರೋಹಿತ್ ಚಲವಾದಿ,ರವಿಕುಮಾರ ಕಲಮಗೇರಿ,ಪವಿತ್ರಾ ಹೊಸಮನಿ,ಯಶೋದಾ ಚಲವಾದಿ,ಅಕ್ಷತಾ ಪಾಟೀಲ್,ಶರಣಮ್ಮ ಗರಸಂಗಿ,ಪೂಜಾ ಚಿಮ್ಮಲಗಿ, ಅಪ್ಪಾಜಿ ಶಿಂದೆ ಇನ್ನೀತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button