ಸಾಧಕರೊಬ್ಬರು ತಮ್ಮ ಜೀವನದ ಸಾಧನೆಯ ಗಾಥೆಯನ್ನು ಬರೆದು . ಕೃತಿಯನ್ನು ಪ್ರಕಟಿಸಿದಾಗ ಮುಂದಿನ ಪೀಳಿಗೆಗೆ ಅದು ಪ್ರೇರಣೆಯಾಗುತ್ತದೆ
ಮಾಲೂರು:
ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಆತ್ಮಕಥೆ ಅಥವಾ ಜೀವನ ಚರಿತ್ರೆಗೆ ಬಹಳ ಪ್ರಾಮುಖ್ಯತೆ ಇದೆ. ಸಾಧಕರೊಬ್ಬರು ತಮ್ಮ ಜೀವನದ ಸಾಧನೆಯ ಗಾಥೆಯನ್ನು ಬರೆದು ಅಥವಾ ಬರೆಸಿ ಕೃತಿಯನ್ನು ಪ್ರಕಟಿಸಿದಾಗ ಮುಂದಿನ ಪೀಳಿಗೆಗೆ ಅದು ಪ್ರೇರಣೆಯಾಗುತ್ತದೆ ಹಾಗೂ ಮಾದರಿಯಾಗುತ್ತದೆ.
ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಮಡಿವಾಳದ ಸಿ.ವಿ.ರಾಮನ್ ರವರ ಜೀವನ ಕಥೆಯನ್ನು ಹಿರಿಯ ಸಾಹಿತಿ ಕೆ.ಮುನಿಕೃಷ್ಣಪ್ಪರವರು ‘ಮಾತೃ ಹೃದಯಿ ಸಿ.ವಿ.ರಾಮನ್’ ಎಂಬ ಕೃತಿಯ ಮೂಲಕ ಹೊರ ತಂದಿರುವುದು ಅಭಿನಂದನಾರ್ಹ ವಿಷಯ.” ಎಂದು ದಲಿತ ಸಾಹಿತ್ಯ ಪರಿಷತ್ ಕೋಲಾರ ಜಿಲ್ಲಾಧ್ಯಕ್ಷ ಹಾಗೂ ಕವಿ ಡಾ. ಜಯಮಂಗಲ ಚಂದ್ರಶೇಖರ್ ತಿಳಿಸಿದರು.
ಕೆ.ಮುನಿಕೃಷ್ಣಪ್ಪ ರವರು ನಿವೃತ್ತ ಶಿಕ್ಷಕರಾಗಿ, ವಕೀಲರಾಗಿ, ಸಾಹಿತ್ಯ, ಸಂಸ್ಕೃತಿಯ ಪರಿಚಾರಕರಾಗಿ ಸಮಾಜ ಸೇವಕರಾಗಿ, ನಾಡಿಗೆ ವಿಶೇಷ ಸೇವೆಯನ್ನು ಸಲ್ಲಿಸಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಜಿ.ಅಶ್ವಥ್ ನಾರಾಯಣ ವಹಿಸಿದ್ದರು. ಕೆ.ಮುನಿಕೃಷ್ಣಪ್ಪ ಮತ್ತು ರಮಾಮಣಿ, ಸುಮಿತ್ರಮ್ಮ ಮತ್ತು ಮಡಿವಾಳದ ಸಿ.ವಿ.ರಾಮನ್ ದಂಪತಿಗಳನ್ನು ಹಾಗೂ ನಿವೃತ್ತ ಉಪನ್ಯಾಸಕ ದೊಡ್ಡಿ ಮುನಿಯಪ್ಪ ಅವರನ್ನು ಸನ್ಮಾನಿಸಲಾಯಿತು. ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ನಾರಿಗಾನಹಳ್ಳಿ ಶ್ರೀನಿವಾಸ್, ಗಾಯಕರಾದ ಕೋಳಾಲಪ್ಪ, ಸಿ.ಎಂ.ನಂಜುಂಡಪ್ಪ, ಮಿಮಿಕ್ರಿ ರಾಜಪ್ಪ, ಎಸ್.ನಳಿನಾಕ್ಷಿ ಕವಿಗಳಾದ ರಾಧಾ ಡಾ.ಪ್ರಕಾಶ್ ಎನ್.ವನಿತಾ, ಪಿ.ಎಂ. ಕೃಷ್ಣಪ್ಪ,ವಕೀಲ ಹಾಗೂ ಕವಿ ಬಂಡಟ್ಟಿ ನಾರಾಯಣಸ್ವಾಮಿ ಮುಂತಾದವರು ಭಾಗವಹಿಸಿದ್ದರು