ಸಾಗರ :- ಮುಂಜಾನೆ ವಾರ್ತೆ.
ಪಟ್ಟಣ ವ್ಯಾಪ್ತಿಯ ಸೂರನಗದ್ದೆಯ ಬೀರೇಶ್ವರ ದೇವಸ್ಥಾನದ ಬಳಿಯ ಮನೆಯೊಂದರಲ್ಲಿ ಜಿಂಕೆ ಮಾಂಸ ಇರುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸಾಗರ ವಲಯ ಅರಣ್ಯಾಧಿಕಾರಿ ನೇತೃತ್ವದ ತಂಡವು ಬಾನುವಾರ ತಡರಾತ್ರಿ ದಾಳಿ ನಡೆಸಿ ಅಂದಾಜು 2 ಕೆಜಿಯಷ್ಟು ಜಿಂಕೆ ಮಾಂಸ ವಶಕ್ಕೆ ಪಡೆದಿದ್ದಾರೆ.ದಾಳಿ ವೇಳೆ ಕರ್ನಾಟಕ ರಕ್ಷಣಾ ವೇದಿಕೆ ಸಾಗರ ತಾಲ್ಲೂಕು ಅಧ್ಯಕ್ಷ ಜಯರಾಮ್ ಸೂರನಗದ್ದೆ ಪರಾರಿಯಾಗಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳು ಹುಡುಕಾಟ ನಡೆಸಿದ್ದಾರೆ.
ಪಟ್ಟಣದ ಹೊರವಲಯದ ಸೂರನಗದ್ದೆ ಬೀರೇಶ್ವರ ದೇವಸ್ಥಾನದ ಬಳಿಯ ಜಯರಾಮ್‌ರ ಮನೆಯಲ್ಲಿ ಜಿಂಕೆ ಮಾಂಸದ ಅಡುಗೆ ಮಾಡುತ್ತಿದ್ದ ಖಚಿತ ಮಾಹಿತಿಯನ್ನು ಆಧರಿಸಿ ವಲಯ ಅರಣ್ಯಾಧಿಕಾರಿ ಅಣ್ಣಪ್ಪ ನೇತೃತ್ವದ ತಂಡ ಭಾನುವಾರ ತಡರಾತ್ರಿ ಸುಮಾರು 1 ಗಂಟೆಗೆ ದಾಳಿ ನಡೆಸಿದೆ. ದಾಳಿ ವೇಳೆ ಜಯರಾಮ್‌ರ ಮನೆಯಲ್ಲಿ ಸುಮಾರು 2 ಕೆಜಿಯಷ್ಟು ಜಿಂಕೆ ಮಾಂಸ ಪತ್ತೆಯಾಗಿದ್ದು, ಜಯರಾಮ್ ಪರಾರಿಯಾಗಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಪ್ರಕರಣದ ಪ್ರಮುಖ ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಎರಡು-ಮೂರು ಜನರ ತಂಡ ಜಿಂಕೆಯನ್ನು ಹತ್ಯೆ ಮಾಡಿ, ಮಾಂಸವನ್ನು ಹಂಚಿಕೊoಡಿದ್ದರು. ಪ್ರಕರಣದ ಪ್ರಮುಖ ಆರೋಪಿ ಜಯರಾಮ್ ಸಿಕ್ಕರೆ ಉಳಿದವರನ್ನು ಹುಡುಕಲು ಸಹಾಯವಾಗುತ್ತದೆ ಎಂದು ವಲಯ ಉಪ ಅರಣ್ಯಾಧಿಕಾರಿ ಅಣ್ಣಪ್ಪ ಮಾಹಿತಿ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.
ದಾಳಿಯ ಸಂದರ್ಭದಲ್ಲಿ ಉಪ ವಲಯ ಅರಣ್ಯಾಧಿಕಾರಿ ವಿಜಯ್ ಕುಮಾರ್, ಗಸ್ತು ಅರಣ್ಯ ಪಾಲಕರಾದಂತ ಯುವರಾಜ್, ಸುಮಿತ, ವೇದ ನಾಯ್ಕ್, ಉಮೇಶ್, ಶಿವನಗೌಡ್ರು ಮೊದಲಾದವರಿದ್ದರು.
ಸಾಗರದ ಸೂರನಗದ್ದೆಯಲ್ಲಿ ಜಿಂಕೆ ಮಾಂಸ ಪತ್ತೆ: ಆರೋಪಿ ಪರಾರಿ.