ಇತ್ತೀಚಿನ ಸುದ್ದಿರಾಜ್ಯ

ಸಮಾಜಕ್ಕೆ ಮಠಮಾನ್ಯರ ಕೊಡುಗೆ ಅಪಾರ- ರಾಜುಗೌಡ ಪಾಟೀಲ

ಮುಂಜಾನೆ ವಾರ್ತೆ ಸುದ್ದಿ ತಾಳಿಕೋಟಿ: ಜನರನ್ನು ಸುಶಿಕ್ಷಿತರನ್ನಾಗಿ ಮಾಡಿ ಅವರಿಗೆ ಉತ್ತಮ ಸಂಸ್ಕಾರಗಳನ್ನು ಕೊಟ್ಟು ಒಬ್ಬ ಒಳ್ಳೆಯ ವ್ಯಕ್ತಿಯನ್ನಾಗಿ ಮಾಡಲು ನಮ್ಮ ಮಠಮಾನ್ಯರು ಸಾಕಷ್ಟು ಕಷ್ಟಪಡುತ್ತಿದ್ದಾರೆ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆಯುವುದರಿಂದಲೇ ನಮ್ಮ ಜೀವನ ಸಾರ್ಥಕ ಆಗಲು ಸಾಧ್ಯ ಎಂದು ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ಹೇಳಿದರು. ರವಿವಾರ ತಾಲೂಕಿನ ಗುಂಡಕನಾಳ ಗ್ರಾಮದ ಬೃಹನ್ ಮಠದಲ್ಲಿ ಲಿಂಗೈಕ್ಯ ಪೂಜ್ಯರ ಪುಣ್ಯ ಸ್ಮರಣೋತ್ಸವ ಹಾಗೂ ಶ್ರೀ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳ 18ನೇ ವರ್ಷದ ಪಟ್ಟಾಧಿಕಾರ ವಾರ್ಷಿಕೋತ್ಸವ ಹಾಗೂ ಗುರುವಂದನಾ ಸಮಾರಂಭದ ಅಂಗವಾಗಿ ಹಮ್ಮಿಕೊಂಡ ಪುರಾಣ ಪ್ರವಚನ ಮಹಾಮಂಗಲೋತ್ಸವ ಹಾಗೂ ಧರ್ಮಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇವತ್ತು ನಮಗೆ ಸಂಪತ್ತಿನ ಹಾಗೂ ಸವಲತ್ತಿನ ಕೊರತೆ ಇಲ್ಲ ಆದರೆ ನೆಮ್ಮದಿ ಮತ್ತು ಶಾಂತಿಯ ಕೊರತೆ ಇದೆ ಇದಕ್ಕೆ ನಮ್ಮಲ್ಲಿರುವ ಅತಿಯಾಸೆಯೇ ಕಾರಣ ಸಂಪತ್ತು ಅಧಿಕಾರ ಎಲ್ಲವೂ ಅಳಿದು ಹೋಗುತ್ತದೆ ಅದರ ಹಿಂದೆಯೇ ಬೀಳದೆ ಜೀವನ ಸಾರ್ಥಕಗೊಳಿಸಲು ನಾವೆಲ್ಲರೂ ಪ್ರಯತ್ನಿಸಬೇಕಾಗಿದೆ ಅದು ಇಂಥಹ ಆಧ್ಯಾತ್ಮಿಕ ಸತ್ಸಂಗಗಳಿಂದ ಮಾತ್ರ ಸಾಧ್ಯ ಎಂದರು. ಅನುಗ್ರಹ ಫೌಂಡೇಶನ್ ಅಧ್ಯಕ್ಷ ನಾಡಿನ ಖ್ಯಾತ ನೇತ್ರ ತಜ್ಞ ಡಾ. ಪ್ರಭುಗೌಡ ಲಿಂಗದಳ್ಳಿ ಮಾತನಾಡಿ ಇವತ್ತು ನಾವೆಲ್ಲರೂ ಒತ್ತಡದ ಬದುಕು ನಡೆಸುತ್ತಿದ್ದೇವೆ ನಮಗೆ ಶಾಂತಿ ಎಂಬುದು ಇಲ್ಲ ಈ ಕಾರಣಕ್ಕಾಗಿ ಸಾವುಗಳ ಸಂಖ್ಯೆ ಹೆಚ್ಚಾಗುತ್ತಿದೆ ನಾಲಿಗೆ ನಿಯಂತ್ರಣವಿಲ್ಲದ ಕಾರಣ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದೇವೆ ಮಿತವಾದ ಆಹಾರ ಸೇವನೆ ಆಧ್ಯಾತ್ಮಿಕ ಚಿಂತನೆಗಳು ನಮಗೆ ಮಾನಸಿಕ ನೆಮ್ಮದಿ ಕೊಡುತ್ತವೆ ಆರೋಗ್ಯವಂತ ಸಮಾಜದಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದರು. ತಾಳಿಕೋಟಿ ಖಾಸ್ಗತೇಶ್ವರ ಮಠದ ಬಾಲ ಶಿವಯೋಗಿ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಮಾತನಾಡಿ ನಾವೆಲ್ಲರೂ ಈ ಜಗತ್ತನ್ನು ಒಂದು ದಿನ ತೊರೆಯಬೇಕಾಗಿದೆ ನಮ್ಮ ಪೈಕಿ ಯಾರು ಶಾಶ್ವತವಾಗಿ ಇಲ್ಲಿ ಇರಲಿಕ್ಕೆ ಬಂದವರಲ್ಲ ಭೂಮಿ ಮೇಲೆ ಇದ್ದಷ್ಟು ದಿವಸ ಮನುಷ್ಯತ್ವವನ್ನು ಬೆಳಸಿಕೊಂಡು ಒಳ್ಳೆಯ ಮನುಷ್ಯರಾಗಿ ಬದುಕಬೇಕಾಗಿದೆ ಎಂದ ಅವರು ಈ ಮಠದ ಪೂಜ್ಯರಾದ ಶ್ರೀ ಗುರುಲಿಂಗ ಮಹಾಸ್ವಾಮಿಗಳು ನಿಮ್ಮನ್ನು ಸಂಸ್ಕಾರವಂತರನ್ನಾಗಿ ಮಾಡಲು ಸಾಕಷ್ಟು ಶ್ರಮ ಪಟ್ಟಿದ್ದಾರೆ ಅವರಿಗೆ ನಿಮ್ಮೆಲ್ಲರ ಪ್ರೀತಿ ಮತ್ತು ಸಹಕಾರ ಬೇಕು ಎಂದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಮಹನೀಯರಾದ ತಾಳಿಕೋಟಿ ವಿ.ವಿ ಸಂಘದ ಅಧ್ಯಕ್ಷ ವಿ.ಸಿ. ಹಿರೇಮಠ ಅಖಿಲ ಭಾರತ ವಚನ ಸಾಹಿತ್ಯ ಪರಿಷತ್ ತಾಲೂಕ ಅಧ್ಯಕ್ಷ ಮಹಾಂತೇಶ ಮುರಾಳ. ಮೌರ್ಯ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಶಿವಮ್ಮ ಬಿರಾದಾರ ಇವರನ್ನು ಶ್ರೀಮಠದಿಂದ ಸನ್ಮಾನಿಸಿ ಗೌರವಿಸಲಾಯಿತು. ಜಾಲಹಳ್ಳಿ ಬ್ರಾಹ್ಮಠದ ಶ್ರೀ ವಿದ್ಯಾಮಾನ್ಯ ಶಿವಾನುಭೀನವ ಜಯಶಾಂತ್ ಲಿಂಗೇಶ್ವರ ಶಿವಾಚಾರ್ಯರು ಸಾನಿಧ್ಯ ವಹಿಸಿದ್ದರು. ಹಿರೂರು ಅನ್ನದಾನೇಶ್ವರಿ ಸಂಸ್ಥಾನ ಹಿರೇಮಠದ ಪೂಜ್ಯಶ್ರೀ ಜಯಸಿದ್ಧೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಪೂಜ್ಯಶ್ರೀ ಗುರುಲಿಂಗ ಶಿವಾಚಾರ್ಯರು ಗುಂಡಕನಾಳ. ಶ್ರೀ ಸಿದ್ಧ ರೇಣುಕ ಶಿವಾಚಾರ್ಯರು. ಶ್ರೀ ಸಿದ್ದ ಮಲ್ಲಿಕಾರ್ಜುನ ಶಿವಾಚಾರ್ಯರು .ಶ್ರೀ ಕುಮಾರ ದೇವರು .ಶ್ರೀ ಅಡವಿಲಿಂಗ ಮಹಾರಾಜರು. ಶ್ರೀ ನೀಲಕಂಠ ಸ್ವಾಮಿಗಳು ಪ್ರವಚನಕಾರ ಶರಣ ಬಸವ ಶಾಸ್ತ್ರಿಗಳು. ಪ್ರಭಯ್ಯ ಆಲಾಳ ಮಠ. ಬಸಯ್ಯ ಶಾಸ್ತ್ರಿಗಳು. ರಾಜಕೀಯ ದುರೀಣರು. ಸಮಾಜ ಸೇವಕರು. ಗಣ್ಯ ಮಾನ್ಯರು. ಶ್ರೀ ಗುರು ಲಿಂಗೇಶ್ವರ ದೇವಸ್ಥಾನ ಸೇವಾ ಸಮಿತಿಯ ಸರ್ವ ಸದಸ್ಯರು ಇದ್ದರು. ಸಂಗೀತ ಗವಾಯಿ ವೀರೇಶ ಕೆಂಭಾವಿ ಹಾಗೂ ತಬಲವಾದಕ ಬಸವರಾಜ ಯಳಸಂಗಿ ಅಶೋಕ ಕೆಂಭಾವಿ ಸಂಗೀತ ಸೇವೆ ನಡೆಸಿಕೊಟ್ಟರು.

Related Articles

Leave a Reply

Your email address will not be published. Required fields are marked *

Back to top button