ಸತತ ಮಳೆಯಿಂದ ಹಲವು ಗ್ರಾಮಗಳ ಸಂಪರ್ಕ ಕಡಿತ
ಕೊರಟಗೆರೆ:- ಕೊರಟಗೆರೆ ತಾಲೂಕಿನಲ್ಲಿ ಇತ್ತೀಚೆಗೆ ಸುರಿಯುತ್ತಿರುವ ಸತತ ಮಳೆಗೆ ತಾಲೂಕಿನ 10 ಹಲವು ಸೇತುವೆಗಳು ಮುಳುಗಡೆಯಾಗಿ ಸಂಪರ್ಕ ಕಡಿತವಾಗಿದೆ.
ಕೊರಟಗೆರೆ ತಾಲೂಕಿನಲ್ಲಿ ಇತ್ತೀಚಿಗೆ ಸುರಿದ ಸತತ ಮಳೆಯಿಂದ ಕೊರಟಗೆರೆ- ಗುಂಡಿನಪಾಳ್ಯ ಕ್ಯಾಮೇನಹಳ್ಳಿ ರಸ್ತೆಗೆ ಬರುವ ಗುಂಡಿನಪಾಳ್ಯ ಸೇತುವೆ ಮುಳುಗಡೆಯಾಗಿದ್ದು, ಜೊತೆಗೆ ಕೊರಟಗೆರೆ- ವಡ್ಡಗೆರೆ ಮಧ್ಯ ಭಾಗದಲ್ಲಿ ಬರುವ ಮಲ್ಲಪ್ಪನಹಳ್ಳಿ ಸೇತುವೆ ಮುಳುಗಡೆಯಾಗಿದ್ದು ಇಲ್ಲಿನ ರೈತಪಿ ವರ್ಗ ಸಾರ್ವಜನಿಕರು ಐದತ್ತು ಕಿಲೋಮೀಟರ್ ಸುತ್ತಿ ಬರುವಂತಹ ಅನಿವಾರ್ಯತೆ ತಲೆದೂರಿದೆ.
ಕೊರಟಗೆರೆ ತಾಲೂಕಿನಲ್ಲಿ ಇತ್ತೀಚೆಗೆ ಸುರಿಯುತ್ತಿರುವ ಸತತ ಮಳೆಯಿಂದ ಜೊತೆಗೆ ಈ ಹಿಂದೆ ಸುರಿದ ಮಳೆಯಿಂದಾಗಿ ಹಲವು ಸೇತುವೆಗಳು ಕೊಚ್ಚಿ ಹೋಗಿದ್ದು ರೈತಾಪಿ ವರ್ಗ ಸಾರ್ವಜನಿಕರು ಮಹಿಳೆಯರು ಮಕ್ಕಳು ರೈತಾಪಿ ವರ್ಗಗಳು ಹಾಗೂ ವ್ಯವಸಾಯಕ್ಕೆ ಬಳಸುವ ಸರಕು ಸಾಮಗ್ರಿಗಳು ಸೇರಿ ಸಾಕು ಪ್ರಾಣಿಗಳು ಒಂದೆಡೆಯಿಂದ ಇನ್ನೊಂದೆಡೆಗೆ ಹೋಗಲು ಸಾಧ್ಯವಾಗದ ಅನಿವಾರ್ಯತೆ ಎದುರಾಗಿದ್ದು ವಿದ್ಯಾರ್ಥಿಗಳು ಶಾಲೆಗೆ ಹೋಗಲು ಹತ್ತಾರು ಕಿಲೋಮೀಟರ್ ಬಳಸಿ ಹೋಗುವಂತ ದುಸ್ಥಿತಿ ಹೋದಗಿದಂತಾಗಿದೆ.
ಬಾಕ್ಸ್ ಬಳಸಿ ಸರ್….
ಕೊರಟಗೆರೆ ಮತ್ತು ಕ್ಯಾಮೇನಹಳ್ಳಿಗೆ ಹೋಗುವಂತಹ ಮಾರ್ಗದ ಮಧ್ಯೆ ಗುಂಡಿನ ಪಾಳ್ಯ ಸೇತುವೆ ಮುಳುಗಡೆಯಾಗಿದ್ದು ರೈತಾಪಿ ಜನ ಮತ್ತು ವಿದ್ಯಾರ್ಥಿಗಳಿಗೆ ಓಡಾಡುವ ಜಾಗ ಈ ಸೇತುವೆಯಾಗಿದ್ದು ಪ್ರತಿ ಬಾರಿ ಮಳೆ ಬಂದಾಗಲೂ ಸೇತುವೆ ಮುಳುಗಡೆಯಾಗುತ್ತಿದ್ದು ಸಂಬಂಧ ಪಟ್ಟಂತಹ ಲೋಕೋಪಯೋಗಿ ಇಲಾಖೆ ಮತ್ತು ಸಣ್ಣ ನೀರಾವರಿ ಇಲಾಖೆ ಈ ಕಡೆ ಗಮನಹರಿಸಿ ಮೇಲುಸುತ್ತೇವೆ ಕಟ್ಟುವ ಮೂಲಕ ಶಾಶ್ವತವಾಗಿ ಪರಿಹಾರ ಕಲ್ಪಿಸಿ ಕೊಡಬೇಕು ಎಂದು ಆಗ್ರಹಿಸಿದರು.
ನಟರಾಜು. ಸ್ಥಳೀಯ ಮುಖಂಡ
ಬಾಕ್ಸ್ ಬಳಸಿ….
ಪ್ರತಿ ಬಾರಿ ಮಳೆ ಬಂದಾಗಲೂ ಈ ಸೇತುವೆ ಮುಳುಗಡೆಯಾಗುತ್ತದೆ ರೈತಪಿ ವರ್ಗ ಹಾಗೂ ಶಾಲೆಗೆ ಹೋಗುವ ವಿದ್ಯಾರ್ಥಿಗಳಿಗೆ ಭಾರಿ ತೊಂದರೆಯಾಗಿದ್ದು ಪ್ರತಿ ಬಾರಿ ಮಳೆ ಬಂದಾಗ ಸೇತುವೆ ಕಿತ್ತೊಗುತ್ತದೆ ಪ್ರತಿ ಬಾರಿಯೂ ದುರಸ್ತಿ ಮಾಡುತ್ತಾರೆ ಈಗಲೂ ಸಹ ಗುಂಡಿಗಳು ಬಿದ್ದಿವೆ ಸಂಬಂಧಪಟ್ಟಂತಹ ಲೋಕ ಪ್ರಯೋಗಿ ಹಾಗೂ ಸಣ್ಣ ನೀರಾವರಿ ಇಲಾಖೆ ಮೇಲು ಸೇತುವೆಯನ್ನು ನಿರ್ಮಿಸಿ ಶಾಶ್ವತ ಪರಿಹಾರವನ್ನು ಕಲ್ಪಿಸಿ ಕೊಡಬೇಕಾಗಿ ಮನವಿ ಮಾಡಿದರು.
ಪಾರ್ಥ ಯುವ ಮುಖಂಡ ಗುಂಡಿನಪಾಳ್ಯ
ಬಾಕ್ಸ್ ಬಳಸಿ…
ಕೊರಟಗೆರೆ ಹಿಂದೂಪುರ ಹಾಗೂ ಕೊರಟಗೆರೆ ಸಂಪರ್ಕ ಕಲ್ಪಿಸುವಂತ ಮಲ್ಲಪ್ಪನಹಳ್ಳಿ ಬಳಿಯ ಸೇತುವೆ ಪ್ರತೀ ಬಾರಿ ಮಳೆ ಬಂದಾಗ್ಲೂ ಸೇತುವೆ ಮುಳುಗಡೆಯಾಗಲಿದ್ದು, ಈ ಮಾರ್ಗವಾಗಿ ನೂರಾರು ವಾಹನಗಳು ಓಡಾಡುತ್ತವೆ ನೂರಾರು ವಿದ್ಯಾರ್ಥಿಗಳು ಕೊರಟಗೆರೆ ಭಾಗಕ್ಕೆ ವಿದ್ಯಾಭ್ಯಾಸಕ್ಕಾಗಿ ಇದೇ ಮಾರ್ಗವಾಗಿ ಆಗಮಿಸುತ್ತಾರೆ, ಜೊತೆಗೆ ವೀರನಾಗಮ್ಮ ದೇವಸ್ಥಾನ ಬಹಳ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ವಾಗಿದ್ದು ಭಕ್ತಾದಿಗಳು ಬಹಳಷ್ಟು ಜನ ಆಗಮಿಸುವುದರಿಂದ ಬಹಳ ತೊಂದರೆಯಾಗಿದ್ದು, ಈ ಒಂದು ಮಾರ್ಗ ಸೇತುವೆಯನ್ನು ಮೇಲ್ದರ್ಜೆಗೆ ಏರಿಸುವ ಮೂಲಕ ಅನುಕೂಲ ಕಲ್ಪಿಸಿ ಕೊಡಬೇಕು.
ಡಾ. ರಾಮಚಂದ್ರಪ್ಪ ವೈದ್ಯ ವಡ್ಡಗೆರೆ