ಶ್ರೀ ಚನ್ನೇಗೌಡ ಪದವಿಪೂರ್ವ ಕಾಲೇಜಿನ ಆಶ್ರಯದಲ್ಲಿ ಯಶಸ್ವಿಯಾಗಿ ನಡೆದ ಕೋಲಾರ ತಾಲೂಕು ಮಟ್ಟದ ಪ್ರೌಢಶಾಲಾ ಬಾಲಕರ ಕಬಡ್ಡಿ ಪಂದ್ಯಾವಳಿಗಳು
ಕೋಲಾರ:
ಸೋಲು ಗೆಲವುಗಳು ಸಾಮಾನ್ಯವಾಗಿದ್ದು
ಕ್ರೀಡೆಗಳಲ್ಲಿ ಭಾಗವಹಿಸುವುದು ಮುಖ್ಯ ಎಂದು
ಪ್ರಾಂಶುಪಾಲ ನಾರಾಯಣಸ್ವಾಮಿ ಅಭಿಪ್ರಾಯ ಪಟ್ಟರು.
ಕೋಲಾರ ನಗರದ ಕೋಗಿಲಹಳ್ಳಿ ಬಳಿಯ ರೈಲ್ವೆ ಗೇಟ್ ಎನ್ ಹೆಚ್ 75,ರ ಬೈ ಪಾಸ್ ಹತ್ತಿರ ಇರುವ
ಶ್ರೀ ಚನ್ನೇಗೌಡ ಪದವಿಪೂರ್ವ ಕಾಲೇಜಿನ
ಆಶ್ರಯದಲ್ಲಿ ಭಾನುವಾರ ನಡೆದ ಕೋಲಾರ ತಾಲೂಕು ಮಟ್ಟದ ಪ್ರೌಢಶಾಲಾ ಬಾಲಕರ ಕಬಡ್ಡಿ ಪಂದ್ಯಾವಳಿಗಳಿಗೆ ಅವರು ಚಾಲನೆ ನೀಡಿ ಮಾತನಾಡುತ್ತಾ ನಮ್ಮ ಕಾಲೇಜಿನಲ್ಲಿ ಉತ್ತಮ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡಲು ಪ್ರತಿವರ್ಷ ವಿವಿಧ ಕ್ರೀಡೆಗಳನ್ನು ನಡೆಸುತ್ತಿರುವುದಾಗಿ ತಿಳಿಸಿದರು.
ಕೋಲಾರ ತಾಲೂಕು ಮಟ್ಟದ ಪ್ರೌಢಶಾಲಾ ಬಾಲಕರ ಕಬಡ್ಡಿ ಪಂದ್ಯಾವಳಿಗಳಲ್ಲಿ ತಾಲ್ಲೂಕಿನಿಂದ 15 ತಂಡಗಳು ಭಾಗವಹಿಸಿದ್ದು,ಎಲ್ಲಾ ತಂಡಗಳು ಅತ್ಯತ್ತಮವಾಗಿ ಪ್ರದರ್ಶನ ನೀಡಿವೆ.ಪ್ರಥಮ ಬಹುಮಾನ 8001ರೂಗಳನ್ನು ಮತ್ತು ಆಕರ್ಷಕ ಟ್ರೋಫಿ ಕೆಂಬೋಡಿ ಗ್ರಾಮದ ಜನತಾ ಪ್ರೌಢಶಾಲಾ, ದ್ವಿತೀಯ ಬಹುಮಾನ 6001 ರೂಗಳನ್ನು ಮತ್ತು ಆಕರ್ಷಕ ಟ್ರೋಫಿ ವಡಗೂರು ಗ್ರಾಮದ ಕೋರಿಯನ್ ಸ್ಕೂಲ್,ತೃತೀಯ ಬಹುಮಾನ 4001ರೂಗಳನ್ನು ಮತ್ತು ಆಕರ್ಷಕ ಟ್ರೋಫಿಯನ್ನು ಸುಗಟೂರು ಗ್ರಾಮದ ಸಬರಮತಿ ಪ್ರೌಢಶಾಲೆ ಪಡೆದುಕೊಂಡಿದ್ದು,ಉತ್ತಮ ಆಲ್ ರೌಂಡರ್ ಮತ್ತು ಉತ್ತಮ ರೈಡರ್ ಆಗಿ ಜನತಾ ಪ್ರೌಡಶಾಲೆಯ ಸುದರ್ಶನ್, ಉತ್ತಮ ಡಿಫೆಂಡರ್ ಆಗಿ ಕೋರಿಯನ್ ಸ್ಕೂಲ್ ನ ಕೌಶಿಕ್
ಹೊರಹೊಮ್ಮಿದ್ದಾರೆಂದು ಹೇಳಿದರು.
ಈ ಸಂಧರ್ಭದಲ್ಲಿ ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ವಿ.ಮುರಳಿ ಮೋಹನ್,ಜಿಲ್ಲಾ ಅಸೋಸಿಯೇಷನ್ ಜಂಟಿ ಕಾರ್ಯದರ್ಶಿ ರಾಜೇಶ್,ಕಾಲೇಜಿನ ಆಡಳಿತಾಧಿಕಾರಿ ಶಂಕರ,
ಉಪ ಪ್ರಾಂಶುಪಾಲ ಅಶೋಕ್,ಕ್ರೀಡಾ ನಿರ್ದೇಶಕ ಮಹೇಶ್ ಹಾಗೂ ಶ್ರೀ ಚನ್ನೇಗೌಡ ಪದವಿಪೂರ್ವ ಕಾಲೇಜು ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.