ವಿರಾಟ್ ವಿಶ್ವಕರ್ಮ ಮಹೋತ್ಸವ ಹಾಗೂ ವಿಶ್ವಕರ್ಮ ಶ್ರೀ ಮತ್ತು ವಿಶ್ವಕರ್ಮ ಸೇವಾ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದ ಚಿನ್ಹೆ ಬಿಡುಗಡೆ…
ಸಪ್ಟೆಂಬರ್ 30, ಶನಿವಾರದಂದು ಬೆಂಗಳೂರಿನ ಪ್ರತಿಷ್ಠಿತ ರಂಗಮಂದಿರವಾದ ರವೀಂದ್ರ ಕಲಾಕ್ಷೇತ್ರದಲ್ಲಿ ಸಂಜೆ 4 ಗಂಟೆಗೆ ಶ್ರೀ ವಿರಾಟ್ ವಿಶ್ವಕರ್ಮ ಮಹೋತ್ಸವ ಹಾಗೂ ವಿಶ್ವಕರ್ಮ ಶ್ರೀ ಮತ್ತು ವಿಶ್ವಕರ್ಮ ಸೇವಾ ರತ್ನ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಏರ್ಪಡಿಸಲಾಗಿದ್ದು, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪೂಜ್ಯ ಅನಂತ ವಿಭೂಷಿತ ಶ್ರೀ ಶಿವಸುಜ್ಞಾನ ತೀರ್ಥ ಸ್ವಾಮೀಜಿಯವರು ವಹಿಸಿಕೊಳ್ಳಲಿದ್ದಾರೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಗಣ್ಯಸಚಿವರು, ಸಂಸದರು, ಶಾಸಕರ ಸಮ್ಮುಖದಲ್ಲಿ ನಡೆಯಲಿರುವ ಶ್ರೀ ವಿಶ್ವಕರ್ಮ ಸೇವಾ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಚಿನ್ಹೆಯನ್ನು ಬಿಡುಗಡೆಯನ್ನು ಮಾಡಲಾಯಿತು..
ಈ ಸಂದರ್ಭವನ್ನು ಉದ್ದೇಶಿಸಿ ಮಾತನಾಡಿದ, ಶ್ರೀ ವಿಶ್ವಕರ್ಮ ಸೇವಾ ಪ್ರತಿಷ್ಠಾನ (ರಿ)ಕಾರ್ಯಾಧ್ಯಕ್ಷರಾದ ಡಾ. ಬಿ. ಎಂ. ಉಮೇಶ್ ಕುಮಾರ್, ವಿಶ್ವಕರ್ಮ ಸಮಾಜದ ಏಳಿಗೆಗೆ ನಿರಂತವಾಗಿ ಶ್ರಮಿಸುತ್ತಿರುವ ಶ್ರೀ ವಿಶ್ವಕರ್ಮ ಸೇವಾ ಪ್ರತಿಷ್ಠಾನವು ಮತ್ತೊಂದು ಪ್ರತಿಷ್ಠಿತ ಕಾರ್ಯಕ್ರಮ ವಿರಾಟ್ ವಿಶ್ವಕರ್ಮ ಮಹೋತ್ಸವ ಸಮಾರಂಭ ಸಂಭ್ರಮದಿಂದ ಸಜ್ಜಾಗುತ್ತಿದ್ದು, ಹೆಚ್ಚಿನ ವಿವರಗಳನ್ನು ಶೀಘ್ರದಲ್ಲೇ ತಿಳಿಸಲಾಗುವುದು. ತಾವೆಲ್ಲರೂ ಕಾರ್ಯಕ್ರಮದಲ್ಲಿ ಭಾಗವಹಿಸಿ, ಪ್ರೋತ್ಸಾಹ ನೀಡಿ, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಶ್ರೀ ಪ್ರಭಾಕರ ಐ.ಎ.ಎಸ್ (ನಿ), ಶ್ರೀ ಡಾ ಸೋಮಶೇಖರ ಐ.ಎ.ಎಸ್ (ನಿ) , ಶ್ರೀ ವೇದಮೂರ್ತಿ ಕೆ.ಎ.ಎಸ್ (ನಿ), ಶಿಲ್ಪಿ ಹೊನ್ನಪ್ಪ ಚಾರ್, ಶ್ರೀ ಶಿವಕುಮಾರ ನಾಗರನವಿಲೆ, ಶ್ರೀ ಚಂದ್ರಶೇಖರ್, ವಿಶ್ವಕರ್ಮ ಸಮಾಜದ ಮುಖಂಡರು ಹಾಗೂ ಸೇವಾ ಪ್ರತಿಷ್ಠಾನದ ಪದಾಧಿಕಾರಿಗಳ ಉಪಸ್ಥಿತರಿದ್ದರು