ಇತ್ತೀಚಿನ ಸುದ್ದಿದೇಶ

ಮೋದಿಯ ಆಹಾರದ ಹಣವನ್ನು ಸರ್ಕಾರ ಭರಿಸುತ್ತಿಲ್ಲ – ಹಾಗಾದ್ರೆ ಯಾರು ಹಣ ನೀಡ್ತಾರೆ?

ನವದೆಹಲಿ: ಸಂಸದರು ಹಾಗೂ ಕೇಂದ್ರದ ಮಂತ್ರಿಗಳಿಗೆ ಸರ್ಕಾರದಿಂದ ಆಹಾರ ಸೇರಿ ಅನೇಕ ಸೌಲಭ್ಯವನ್ನು ನೀಡಲಾಗುತ್ತಿದೆ. ಆದರೆ ಅಚ್ಚರಿಯ ವಿಷಯವೆಂದರೆ ಪ್ರಧಾನಿ ಅವರು ಆಹಾರಕ್ಕಾಗಿ ಸರ್ಕಾರದಿಂದ ಒಂದು ರೂ. ಖರ್ಚಾಗುತ್ತಿಲ್ಲ ಎನ್ನುವುದು ಆರ್‌ಟಿಐನಲ್ಲಿ ಬಯಲಾಗಿದೆ.

ಆರ್‌ಟಿಐನ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ಅವರು, ತಮ್ಮ ಆಹಾರದ ಖರ್ಚು-ವೆಚ್ಚವನ್ನು ಸ್ವಂತ ಹಣದಿಂದಲೇ ಭರಿಸುತ್ತಿದ್ದಾರೆ. ಇದಕ್ಕಾಗಿ ಸರ್ಕಾರದಿಂದ ಒಂದು ರೂ. ಹಣವನ್ನು ತೆಗೆದುಕೊಳ್ಳುತ್ತಿಲ್ಲ ಎನ್ನುವುದು ಬಹಿರಂಗವಾಗಿದೆ.

ಆರ್‌ಟಿಐ ಮೂಲಕ ಕೇಳಿದ ಪ್ರಶ್ನೆಗೆ ಪ್ರಧಾನಿ ಕಾರ್ಯಾಲಯ (ಪಿಎಂಒ) ಈ ಮಾಹಿತಿ ನೀಡಿದೆ. ಪ್ರಧಾನಮಂತ್ರಿ ಕಚೇರಿಯ ಕಾರ್ಯದರ್ಶಿ ಬಿನೋದ್ ಬಿಹಾರಿ ಅವರು ಆರ್‌ಟಿಐಗೆ ಉತ್ತರಿಸಿದ್ದು, ಪ್ರಧಾನಿ ಅವರ ಆಹಾರದ ಖರ್ಚು ವೆಚ್ಚದಲ್ಲಿ ಒಂದು ರೂ.ವನ್ನು ಸರ್ಕಾರದಿಂದ ಭರಿಸುತ್ತಿಲ್ಲ ಎಂದು ತಿಳಿಸಿದೆ. ಆದರೆ ವಾಹನಗಳ ಜವಾಬ್ದಾರಿಯನ್ನು ವಿಶೇಷ ರಕ್ಷಣಾ ಗುಂಪು (ಎಸ್‌ಪಿಜಿ) ನೋಡಿಕೊಳ್ಳುತ್ತದೆ.

2014ರ ಲೋಕಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ ಪ್ರವೇಶಿಸಿದ್ದರು. ಇದಾದ ಬಳಿಕ 2015ರ ಮಾರ್ಚ್ 2ರಂದು ಬಜೆಟ್ ಅಧಿವೇಶನದ ವೇಳೆ ಸಂಸತ್ ಭವನದ ಮೊದಲ ಮಹಡಿಯಲ್ಲಿರುವ ಕ್ಯಾಂಟೀನ್‌ಗೆ ಆಗಮಿಸಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದರು.

ಪ್ರಸ್ತುತ ಸರ್ಕಾರವು ಸಂಸತ್ತಿನಲ್ಲಿರುವ ಕ್ಯಾಂಟೀನ್ ಬಗ್ಗೆ ಅನೇಕ ಸುಧಾರಣೆಗಳನ್ನು ಮಾಡಿದೆ. ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು 2021ರ ಜ. 19ರಂದು ಸಂಸತ್ತಿನ ಕ್ಯಾಂಟೀನ್‌ನಲ್ಲಿ ಸಂಸದರಿಗೆ ನೀಡುತ್ತಿದ್ದ ಸಬ್ಸಿಡಿಯನ್ನು ರದ್ದುಗೊಳಿಸಿದ್ದರು. 2021ರ ಮೊದಲು, ಸಂಸತ್ತಿನ ಕ್ಯಾಂಟೀನ್‌ಗಳಲ್ಲಿ ಸಬ್ಸಿಡಿಗಾಗಿ 17 ಕೋಟಿ ರೂ. ನೀಡಲಾಗುತ್ತಿತ್ತು

Related Articles

Leave a Reply

Your email address will not be published. Required fields are marked *

Back to top button