ಮುಂಜಾನೆ ವಾರ್ತೆ. ಸುದ್ದಿ.
ಮುದ್ದೇಬಿಹಾಳ ಪಟ್ಟಣದ ಅತಿಕ್ರಮಣದ ಹೆಸರಿನಲ್ಲಿ ಬಡಜನರನ್ನು ಬೀದಿ ಪಾಲು ಮಾಡುತ್ತಿರುವ ಪುರಸಭೆ ಅಧಿಕಾರಿಗಳು.
ಮುದ್ದೇಬಿಹಾಳ:- ಪಟ್ಟಣದಲ್ಲಿ ಶುಕ್ರವಾರ ಸಾಯಂಕಾಲ ವೇಳೆಯಲ್ಲಿ ಇಂದಿರಾ ನಗರ, ಬಡಾವಣೆಯಲ್ಲಿ ಪರಿಶೀಷ್ಟ ಜಾತಿ, ಪಂಗಡದ , ಅಲ್ಪಸಂಖ್ಯಾತ ಜನರು ವಾಸಿಸುತ್ತಿರುವ ಸ್ಥಳದಲ್ಲಿನ ಶೆಡ್ ಗಳನ್ನು ಜೆಸಿಬಿ ಮುಖಾಂತರ ಪುರಸಭೆಯ ಅಧಿಕಾರಿಗಳು ತೆರುವು ಮಾಡಿದ್ದನ್ನು ಖಂಡಿಸಿ ಇಲ್ಲಿನ ನಿವಾಸಿಗಳು ತಹಶೀಲ್ದಾರ ಬಲರಾಮ ಕಟ್ಟಿಮನಿ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ನ್ಯಾಯಕ್ಕಾಗಿ ಆಗ್ರಹಿಸಿದರು.
ಈ ವೇಳೆಯಲ್ಲಿ ದಲಿತ ಮುಖಂಡ ಹರೀಶ ನಾಟಿಕಾರ ಮಾತನಾಡಿ 2021 ರಲ್ಲಿ ಪುರಸಭೆ ಮತ್ತು ಕೊಳಚೆ ಪ್ರದೇಶದಲ್ಲಿ ಜಂಟಿ ತನಿಖೆ ಮಾಡಿ ಹಕ್ಕು ಪತ್ರ ವಿತರಣೆ ಮಾಡಿದ್ದರಿಂದ ಈ ಸ್ಥಳದಲ್ಲಿ ಪಲಾನುಭವಿಗಳು ನಿವೇಶನ ನಿರ್ಮಿಸಿಕೊಂಡು ವಾಸವಾಗಿದ್ದಾರೆ, ಆದರೆ ಪುರಸಭೆಯ ಅಧಿಕಾರಿಗಳು ಹಾಗೂ ಅಧ್ಯಕ್ಷರು, ಶಾಸಕರ ಏಕಪಕ್ಷಿಯ ನಿರ್ಧಾರದಿಂದ ಸಣ್ಣ ಪುಟ್ಟ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದ ನೂರಾರು ಕುಟುಂಬಗಳು ಬೀದಿಪಾಲಾಗಿದ್ದಾರೆ, ಕೂಡಲೇ ಸಂಭಂದಿಸಿದ ಅಧಿಕಾರಿಗಳು ನೊಂದ ಕುಟುಂಬಗಳಿಗೆ ನ್ಯಾಯ ಒದಗಿಸದ್ದಿದ್ದರೆ ಸೋಮವಾರದಿಂದ ಉಘ್ರವಾದ ಹೋರಾಟ ಮಾಡಲಾಗುವದು ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು ಪುರಸಭೆಯ ಅಧಿಕಾರಿಗಳ ಕಣ್ಣಿಗೆ ಬಡವರ ಅಂಗಡಿಗಳು ಮತ್ತು ವಾಸ ಮಾಡುವ ಮನೆಗಳು ಮಾತ್ರ ಕಾಣುತ್ತವೆಯೇ ಶ್ರೀಮಂತರ ಅಂಗಡಿಗಳು ಕಾಣುವದಿಲ್ಲವೇ ? ಅಂಬೇಡ್ಕರ್ ವೃತ್ತದಲ್ಲಿರುವ ಓಂ ಶಾಂತಿ ಕಂಪೌಂಡ್ ಹಾಗೂ ಪುರಸಭೆಯ ಹಿಂದುಗಡೆ ಇರುವ ಬೆಂಗಳೂರ ಬೇಕರಿ ಕಟ್ಟಡ ಸುಮಾರು 8 ಪೂಟ್ ಮುಂದೆ ಬಂದಿರುವದು ಕಾಣುತ್ತಿಲ್ಲವೇ ತಾಕತ್ತು ಇದ್ದರೆ ಶ್ರೀಮಂತರ ಕಟ್ಟಡಗಳನ್ನು ತೆರುವುಗೋಳಿಸಿ ಗಟ್ಟಿತನ ತೋರಿಸಲಿ ಎಂದು ಸವಾಲು ಹಾಕಿದರು.
ನಂತರ ದಲಿತ ಮುಖಂಡ ಡಿ ಬಿ ಮುದೂರ ಮಾತನಾಡಿ ಪಟ್ಟಣದ ಇಂದಿರಾ ನಗರದಲ್ಲಿ ಸಣ್ಣ ವ್ಯಾಪಾರ ಕೂಲಿ ಕೆಲಸ ಮಾಡುವ ಜನರಿದ್ದಾರೆ, ಇವರು ಕೆಲಸಕ್ಕೆ ಹೋದ ಸಮಯವನ್ನು ತಿಳಿದುಕೊಂಡು ಮಕ್ಕಳು ವಯೋವೃದ್ಧರನ್ನು ಮನೆಯಿಂದ ಬೀದಿಗೆ ಎಳೆದು ಹೊರಗೆ ಹಾಕಿ ಮನೆಯಲ್ಲಿ ಇದ್ದ ಆಹಾರ ಧಾನ್ಯ, ಮತ್ತು ಬಾಂಡೆ ಸಾಮಾನುಗಳು, ಸ್ಟೋ, ಗ್ಯಾಸ್, ಮತ್ತು ಮನೆಯಲ್ಲಿ ಕೂಡಿ ಇಟ್ಟ ಅಲ್ಪಸ್ವಲ್ಪ ದುಡ್ಡನ್ನು ಜೆಸಿಬಿ ಯಿಂದ ಮನೆಗಳನ್ನು ನೆಲಸಮ ಮಾಡಿ ಖಂಡನಿಯ , ಚುನಾವಣೆಯಲ್ಲಿ ದಲಿತದ ದೇಗುಲದಲ್ಲಿ ಕುಳಿತು ನ್ಯಾಯಪಾಲನೆಯ ಬಗ್ಗೆ ಮಾತನಾಡುವ ಶಾಸಕರಿಗೆ ಸದ್ಯದ ದಲಿತರ ಕಷ್ಟನಷ್ಟಗಳು ಕಾಣುತ್ತಿಲ್ಲವೇ ? ಸುಮಾರು ಪುರಸಭೆಯ ಅಧಿಕಾರಿಗಳು ಈ ವರ್ತನೆಗೆ ನೂರಾರು ಕುಟುಂಬಗಳು ಬೀದಿ ಪಾಲಾಗಿದ್ದು ಮಳೆಯಿಂದ ಆಶ್ರಯ ಇಲ್ಲದೆ ನೆನೆದು ಸಣ್ಣ ಪುಟ್ಟ ಮಕ್ಕಳು, ಮತ್ತು ವೃದ್ಧರು ಆಸ್ಪತ್ರೆಗೆ ದಾಖಲಾಗಿದ್ದು ಶಾಸಕರ ಗಮನಕ್ಕೆ ಇಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಸಂಧರ್ಭದಲ್ಲಿ ಪುರಸಭೆಯ ಸದಸ್ಯರಾದ ಶಿವು ಶಿವಪೂರ, ಪ್ರಕಾಶ ಸರೂರ, ಪ್ರಶಾಂತ ಕಾಳೆ, ದೇವರಾಜ ಹಂಗರಗಿ, ಬಲಬೀಮ ನಾಯಕಮಕ್ಕಳ, ಅಂಬರೇಶ ಉಪ್ಪಲದಿನ್ನಿ, ಪರಸುರಾಮ ನಾಲತವಾಡ,ರಾಜು ವಾಲಿಕಾರ, ಶೇಕು ಆಲೂರ, ಬಸವರಾಜ ಸರೂರ, ಯಲ್ಲಪ್ಪ ಅಜಮನಿ, ರೈತ ಸಂಘದ ಮಹಿಳಾ ಅಧ್ಯಕ್ಷರಾದ ರಜಿಯಾಬೇಗಂ ನದಾಪ, ನಿವಾಸಿಗಳಾದ ಗುಂಡಪ್ಪ ಚಲವಾದಿ, ಶಿವು ಚಿಮ್ಮಲಗಿ, ಅಶ್ವೀನಿ,ನಿರ್ಮಲಾ, ಪರಹಜಾನ, ಸಾಬವ್ವ, ನಿಂಗಮ್ಮ, ಕಸ್ತೂರಿ ಚಲವಾದಿ, ಮಾಹದೇವಿ , ಕಾಶಿನಾಥ ವಿಜಯಕರ, ನೀಲಮ್ಮ, ಶಾಂತಾ, ಸಿದ್ದಮ್ಮ, ಇನ್ನೀತರರು ಇದ್ದರು.
ಬಾಕ್ಸ್: ಪಟ್ಟಣದಲ್ಲಿ ಪುರಸಭೆ ಅಧಿಕಾರಿಗಳು ಅಭಿವೃದ್ಧಿಯ ನೆಪದಲ್ಲಿ ಅತಿಕ್ರಮವನ್ನು ತೆರುವುಗೋಳಿಸುತ್ತಿರುವದು ಸ್ವಾಗತ, ಆದರೆ ಅತಿಕ್ರಮದ ಹೆಸರಿನಲ್ಲಿ ಇಂದಿರಾ ನಗರದಲ್ಲಿರುವ ಬಡವರಿಗೆ 2021ರಲ್ಲಿಯೇ ಪುರಸಭೆಯಿಂದ ಹಕ್ಕು ಪತ್ರಗಳನ್ನು ನೀಡಿದ್ದು ಇರುತ್ತದೆ, ಮತ್ತು ತೆರುವು ಕಾರ್ಯಚರಣೆಯನ್ನು ನಿಲ್ಲಿಸುವಂತೆ ನ್ಯಾಯಾಲಯದಿಂದ ತಡೆಯಾಜ್ಞೆಯನ್ನು ತಂದಿದ್ದು ಇದ್ದರು ಪುರಸಭೆ ಅಧಿಕಾರಿಗಳು ತೆರುವುಗೋಳಿಸಿದ್ದು ಖಂಡನಿಯ, ಅದೇ ರೀತಿಯಲ್ಲಿ ಬೆಂಗಳೂರು ಬೇಕರಿ ಕಟ್ಟಡ ಸಹಿತ 8 ಪೂಟ್ ರಸ್ತೆಯ ಮುಂದೆ ಬಂದಿರುವದರಿಂದ ಇದನ್ನು ತೆರುವುಗೋಳಿಸುವಂತೆ ಮನವಿ ಸಲ್ಲಿಸಿದ್ದೇವೆ ಎಂದು ವಾಲ್ಮೀಕಿ ಸಮಾಜದ ಮುಖಂಡ ಅಂಬರೇಶ ಉಪ್ಪಲದಿನ್ನಿ ಆರೋಪ ಮಾಡಿದರು.